For Quick Alerts
  ALLOW NOTIFICATIONS  
  For Daily Alerts

  'ರಾಧೆ-ಶ್ಯಾಂ' ಟೀಸರ್‌ಗೆ ಡಬ್ಬಿಂಗ್: ಚಿತ್ರ ಹಂಚಿಕೊಂಡ ಪೂಜಾ ಹೆಗ್ಡೆ

  |

  'ರಾಧೆ-ಶ್ಯಾಂ' ಸಿನಿಮಾದ ಟೀಸರ್ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಪ್ರೀ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸುರಿವ ಮಂಜಿನ ಹನಿಗಳ ನಡುವೆ ನಡೆಯುತ್ತಿರುವ ಪ್ರಭಾಸ್ ಪ್ರೀತಿಯ ಮೂಡ್‌ನಲ್ಲಿರುವುದು ಕಾಣುತ್ತಿದೆ.

  'ರಾಧೆ-ಶ್ಯಾಂ' ಸಿನಿಮಾ ಅಪ್ಪಟ ಪ್ರೇಮ ಕತೆಯಾಗಿದ್ದು, ಅದೇ ಕಾರಣಕ್ಕೆ ಫೆಬ್ರವರಿ 14 ರ ಪ್ರೇಮಿಗಳ ದಿನದಂದೇ ಟೀಸರ್ ಬಿಡುಗಡೆ ಮಾಡಲಾಗುವುದೆಂದು ಚಿತ್ರತಂಡ ಹೇಳಿದೆ. ಈಗಾಗಲೇ ಕೆಲವು ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಪ್ರಭಾಸ್ ಹಾಗೂ ಪೂಜಾ ಅದ್ಭುತವಾಗಿ ಕಾಣುತ್ತಿದ್ದಾರೆ.

  ಟೀಸರ್ ಬಿಡುಗಡೆಗಾಗಿ ತರಾತುರಿಯಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದ್ದು, ಟೀಸರ್‌ಗಾಗಿ ಡಬ್ಬಿಂಗ್ ಮಾಡಿದ್ದಾರೆ ನಟಿ ಪೂಜಾ ಹೆಗ್ಡೆ. ತಾವು ಟೀಸರ್‌ಗೆ ಡಬ್ಬಿಂಗ್ ಮಾಡುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ ಪೂಜಾ.

  'ಬೆಳ್ಳಂಬೆಳಿಗ್ಗೆ 'ರಾಧೆ-ಶ್ಯಾಂ' ಟೀಸರ್‌ಗಾಗಿ ಡಬ್ಬಿಂಗ್ ಮಾಡುತ್ತಿದ್ದೇನೆ. ಫೆಬ್ರವರಿ 14 ನಾವುಗಳು ನಿಮ್ಮ ಮುಂದೆ ಬರಲಿದ್ದೇವೆ' ಎಂದಿದ್ದಾರೆ ನಟಿ ಪೂಜಾ ಹೆಗ್ಡೆ.

  ಫೆಬ್ರವರಿ 14 ರಂದು ಟೀಸರ್ ಬಿಡುಗಡೆ ಆಗಲಿದೆ. 'ರಾಧೆ-ಶ್ಯಾಂ' ಸಿನಿಮಾ ಬಿಡುಗಡೆ ಯಾವಾಗ ಆಗುತ್ತದೆ ಎಂಬ ದಿನಾಂಕವೂ ಸಹ ಅದೇ ದಿನ ಗೊತ್ತಾಗಲಿದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

  'ರಾಧೆ-ಶ್ಯಾಂ' ಸಿನಿಮಾವು ದಶಕಗಳ ಹಿಂದೆ ನಡೆವ ಕತೆಯಾಗಿದ್ದು. ಸಿನಿಮಾದ ಕತೆ ಪ್ಯಾರಿಸ್‌ನಲ್ಲಿ ನಡೆಯಲಿದೆ. ಕೊರೊನಾ ಭೀತಿಯ ನಡುವೆಯೇ ಇಡೀಯ ಚಿತ್ರತಂಡ ಪ್ಯಾರಿಸ್‌ನಲ್ಲಿ ಚಿತ್ರೀಕರಣ ಮಾಡಿದ್ದರು. ಈ ಸಿನಿಮಾ ಅಪ್ಪಟ ಪ್ರೇಮ ಕತೆಯಾಗಿದ್ದು, ಸಿನಿಮಾದಲ್ಲಿ ಒಂದೂ ಫೈಟ್ ದೃಶ್ಯಗಳು ಇಲ್ಲ ಎನ್ನಲಾಗುತ್ತಿದೆ.

  ಕಾಡಾನೆಗಳ ಜೊತೆ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಸಲಗ | Filmibeat Kannada

  'ರಾಧೆ-ಶ್ಯಾಂ' ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್-ಪೂಜಾ ಹೆಗ್ಡೆ ಜೊತೆಗೆ ಕೃಷ್ಣಂ ರಾಜು, ಸಚಿನ್ ಕೇಡ್ಕರ್, ಪ್ರಿಯದರ್ಶಿನಿ ಪುಲಿಕೊಂಡ, ಭಾಗ್ಯಶ್ರೀ ಇನ್ನೂ ಹಲವರು ನಟಿಸಿದ್ದಾರೆ.

  English summary
  Actress Pooja Hegde completes her dubbing for Radhe Shyam movie teaser. Radhe Shyam teaser will release on February 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X