For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿಗೆ ಸಿಗಬೇಕಿದ್ದ ಸೈಮಾ ಅವಾರ್ಡ್ ಪೂಜಾಗೆ ಸಿಕ್ತಾ? ದುಡ್ಡು ಕೊಟ್ಟು ಅವಾರ್ಡ್ ತಗೊಂಡ್ರಾ ಕರಾವಳಿ ಚೆಲುವೆ?

  |

  ಕರಾವಳಿ ಚೆಲುವೆ ಪೂಜಾ ಹೆಗ್ಡೆ ಸೌತ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಕಮಾಲ್ ಮಾಡ್ತಿದ್ದಾರೆ. ಸೈಮಾ 2022ರ ಸೈಮಾ ವೇದಿಕೆಯಲ್ಲಿ ಚೆಲುವೆಗೆ ಒಂದಲ್ಲ ಎರಡು ಪ್ರಶಸ್ತಿ ಸಿಕ್ಕಿದೆ. ಎರಡೂ ಟ್ರೋಫಿಗಳನ್ನು ಕೈಯಲ್ಲಿಡಿದು ಡಬಲ್ ಸಂಭ್ರಮದಲ್ಲಿ ಪೋಸ್ ಕೊಟ್ಟಿದ್ದಾರೆ. ಆದರೆ ಪೂಜಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಕೊಟ್ಟಿದ್ದು ಯಾಕೆ ಎಂದು ಕೆಲವರು ಕೇಳುತ್ತಿದ್ದಾರೆ. ಪೂಜಾ ಬದಲಿಗೆ ಆ ಪ್ರಶಸ್ತಿ ಸಾಯಿ ಪಲ್ಲವಿಗೆ ಸಿಗಬೇಕಿತ್ತು ಎನ್ನುತ್ತಿದ್ದಾರೆ. ಪ್ರಶಸ್ತಿ ಕೊಡುವುದರಲ್ಲಿ ಏನೋ ಗೋಲ್‌ಮಾಲ್ ಆಗಿದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚಕಾರ ಎತ್ತಿದ್ದಾರೆ.

  ತೆಲುಗಿನ 'ಮೋಸ್ಟ್ ಎಲಿಜಬಲ್ ಬ್ಯಾಚುಲರ್' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಅವಾರ್ಡ್ ಪೂಜಾ ಹೆಗ್ಡೆ ಮುಡಿಗೇರಿದೆ. ಜೊತೆಗೆ ದಕ್ಷಿಣ ಭಾರತದ ಯೂತ್ ಐಕಾನ್ ಅವಾರ್ಡ್‌ ಕೂಡ ಕರಾವಳಿ ಚೆಲುವೆಗೆ ಸಿಕ್ಕಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪೂಜಾ ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ ಎಂದು ಟ್ರೋಲ್ ಮಾಡ್ತಿದ್ದಾರೆ. ಅತ್ಯುತ್ತಮ ನಟಿ ನಾಮಿನೇಷನ್‌ನಲ್ಲಿ ಪೂಜಾ ಜೊತೆಗೆ ಸಾಯಿ ಪಲ್ಲವಿ ಹೆಸರು ಇತ್ತು. 'ಲವ್ ಸ್ಟೋರಿ' ಹಾಗೂ 'ಶ್ಯಾಮ್‌ ಸಿಂಗರಾಯ್' ಚಿತ್ರಗಳಿಂದ ಆಕೆ ನಾಮಿನೇಟ್ ಆಗಿದ್ದರು. ಆದರೆ ಆಕೆ ಬದಲು ಪೂಜಾಗೆ ಹೇಗೆ ಅವಾರ್ಡ್ ಸಿಕ್ತು ಎಂದು ಕೇಳುತ್ತಿದ್ದಾರೆ.

  ಸಾಯಿ ಪಲ್ಲವಿ ನಟನೆ ಬಗ್ಗೆ ಬಿಡಿಸಿ ಹೇಳುವುದೇ ಬೇಕಿಲ್ಲ. ಅದರಲ್ಲೂ 'ಶ್ಯಾಮ್‌ ಸಿಂಗರಾಯ್' ಚಿತ್ರದಲ್ಲಿ ಆಕೆಯ ನಟನೆ, ಡ್ಯಾನ್ಸ್ ಮೋಡಿ ಮಾಡಿತ್ತು. ಅಷ್ಟು ಸೊಗಸಾಗಿ ನಟಿಸಿದ ಸಾಯಿ ಪಲ್ಲವಿನ ಬಿಟ್ಟು 'ಮೋಸ್ಟ್ ಎಲಿಜಬಲ್ ಬ್ಯಾಚುಲರ್' ಚಿತ್ರಕ್ಕಾಗಿ ಪೂಜಾಗೆ ಯಾಕೆ ಅವಾರ್ಡ್ ಕೊಟ್ರು ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಕರಾವಳಿ ಚೆಲುವೆ ಸಾಮಾನ್ಯ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಅಂತ ಹೀರೊನ ಕನ್ಫ್ಯೂಸ್ ಮಾಡಿ ಕೊನೆಗೆ ಹೀಗಿರಬೇಕು ಎಂದು ಹೇಳಿ ಹೀರೊನ ಮದುವೆ ಆಗುತ್ತಾರೆ. ಇದರಲ್ಲಿ ಚಾಲೆಂಜಿಂಗ್ ಅನ್ನುವಂತದ್ದು ಏನಿದೆ? ಅವಾರ್ಡ್ ಕೊಡುವಂಥದ್ದು ಏನಿದೆ? ಬೇಕಂತಲೇ ಸಾಯಿ ಪಲ್ಲವಿಗೆ ಅವಾರ್ಡ್ ತಪ್ಪಿಸಿ ಪೂಜಾಗೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸ್ತಿದ್ದಾರೆ.

  ಪೂಜಾ ಹೆಗ್ಡೆ ದುಡ್ಡು ಕೊಟ್ಟು ಅವಾರ್ಡ್ ಕೊಂಡುಕೊಂಡಿದ್ದಾರೆ. ಹೇಗೆ ಜಡ್ಜ್ ಮಾಡಿದ್ದರೂ ಸಾಯಿ ಪಲ್ಲವಿಗೆ ಅವಾರ್ಡ್ ಸಿಗಬೇಕಿತ್ತು. ಅದು ಯಾಕೆ ಪೂಜಾಗೆ ಕೊಟ್ಟರು ಅಂತ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಪೂಜಾ ಹೆಗ್ಡೆ ಕರಿಯರ್ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಆಕೆ ನಟಿಸಿದ ಸಿನಿಮಾಗಳೆಲ್ಲಾ ಸಾಲು ಸಾಲಾಗಿ ಸೋಲುಂಡಿದೆ. 'ರಾಧೆಶ್ಯಾಮ್', 'ಬೀಸ್ಟ್', 'ಆಚಾರ್ಯ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸದ್ಯ ಬಾಲಿವುಡ್‌ನಲ್ಲಿ 'ಸರ್ಕಸ್' ಹಾಗೂ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಪುರಿ ಜಗನ್ನಾಥ್ ಮತ್ತು ವಿಜಯ್‌ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬರುತ್ತಿರುವ 'ಜನ ಗಣ ಮನ' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆದರೆ 'ಲೈಗರ್' ಸಿನಿಮಾ ಸೋಲಿನ ಬೆನ್ನಲ್ಲೇ ಈ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದೆ.

  English summary
  Pooja Hegde Gets Trolled after she receives Siima Award For Best Actress in a Leading Role
  Monday, September 12, 2022, 10:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X