ರಶ್ಮಿಕಾ ಅಲ್ಲ, ಅನುಷ್ಕಾ ಅಲ್ಲ, ಇವರೇ ನೋಡಿ ತೆಲುಗಿನ ನಂ 1 ನಟಿ

ಸಿನಿ ಉದ್ಯಮದಲ್ಲಿ ನಟ-ನಟಿಯರಲ್ಲಿ ಯಾರು ನಂ 1 ರಂಬ ರೇಸು ಸದಾ ಇರುತ್ತದೆ. ಉದ್ಯಮ ಪ್ರಾರಂಭವಾದಾಗಿನಿಂದಲೂ ಈ ರೇಸು ನಿಂತಿಲ್ಲ. ನಿಲ್ಲುವುದೂ ಇಲ್ಲ.

ಬಾಲಿವುಡ್‌ಗೆ ಹೋಲಿಸಿದರೆ ದಕ್ಷಿಣ ಭಾರತದ ಸಿನಿರಂಗಗಳಲ್ಲಿ ಈ ರೇಸ್ ಹೆಚ್ಚು. ಯಾರು ನಂ 1 ನಟ ಯಾರು ನಂ 1 ನಟಿ ಎಂಬ ಚರ್ಚೆ ಸದಾ ನಡೆಯುತ್ತಲೇ ಇರುತ್ತದೆ. ದಕ್ಷಿಣದ ಅಭಿಮಾನಿಗಳು ನಟ-ನಟಿಯರನ್ನು ಹೆಚ್ಚು ಆರಾಧಿಸುವ ಕಾರಣ ಈ ಚರ್ಚೆ ಮುಂದುವರೆಯುತ್ತಲೇ ಇರುತ್ತದೆ.

ನಟ-ನಟಿಯರು ನಂ 1 ರೇಸಿನ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಕಡಿಮೆ. ಅಥವಾ 'ನನಗೆ ಅದರಲ್ಲಿ ನಂಬಿಕೆಯಿಲ್ಲ'' ಎಂದು ಚರ್ವಿತಚವರ್ಣ ಉತ್ತರ ನೀಡುತ್ತಾರಾದರೂ, ಗೌಪ್ಯವಾಗಿ ಅವರೂ ಆ ರೇಸಿನಲ್ಲಿರುತ್ತಾರೆ ಮತ್ತು ನಂ 1 ಆಗಬೇಕೆಂಬ ಹಪಹಪಿ ಅವರಿಗೆ ಇದ್ದೇ ಇರುತ್ತದೆ.

ನಟಿಯರಲ್ಲಿ ತುಸು ಹೆಚ್ಚೇ ಇರುತ್ತದೆ

ನಟಿಯರಲ್ಲಿ ತುಸು ಹೆಚ್ಚೇ ಇರುತ್ತದೆ

ನಟಿಯರಲ್ಲಂತೂ ತಾವು ನಂ 1 ಎನಿಸಿಕೊಳ್ಳಬೇಕೆಂಬ ಹಪ-ಹಪಿ ತುಸು ಹೆಚ್ಚೆ. ಹೀಗಿದ್ದಾಗ ದಕ್ಷಿಣ ಭಾರತದ ಪ್ರಮುಖ ಚಿತ್ರರಂಗ ತೆಲುಗಿನ ಈಗಿನ ನಂ 1 ನಟಿ ಯಾರು ಎಂಬುದನ್ನು, ನಟಿಯ ಸಕ್ಸರ್ ರೇಟ್, ದೊರಕುತ್ತಿರುವ ದೊಡ್ಡ ಬ್ಯಾನರ್ ಅವಕಾಶಗಳು, ಅಭಿಮಾನಿ ವರ್ಗ ಎಲ್ಲವನ್ನೂ ಗಮನಿಸಿ ನಿರ್ಧರಿಸಲಾಗಿದೆ.

ಇವರೇ ತೆಲುಗಿನ ನಂ 1 ನಟಿ

ಇವರೇ ತೆಲುಗಿನ ನಂ 1 ನಟಿ

ನಟಿ ಪೂಜಾ ಹೆಗ್ಡೆ ಸದ್ಯಕ್ಕೆ ತೆಲುಗಿನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಟಿ. ಆಕೆಯ ಸಕ್ಸಸ್ ರೇಟ್ ಇತರೆ ಪ್ರತಿಸ್ಪರ್ಧಿ ನಟಿಯರಿಗಿಂತಲೂ ತುಸು ಹೆಚ್ಚಿದೆ. ದೊಡ್ಡ-ದೊಡ್ಡ ಬ್ಯಾನರ್‌ ನ ಅವಕಾಶಗಳು ನಟಿಯ ಕೈಯಲ್ಲಿವೆ. ಹಾಗಾಗಿಯೇ ಪೂಜಾ ಹೆಗ್ಡೆ ತೆಲುಗಿನ ನಂ 1 ನಟಿ.

ನಂ 1 ನಟಿ ಎಂದು ಕರೆಸಿಕೊಳ್ಳುತ್ತಿರುವು ಖುಷಿ ತಂದಿದೆ

ನಂ 1 ನಟಿ ಎಂದು ಕರೆಸಿಕೊಳ್ಳುತ್ತಿರುವು ಖುಷಿ ತಂದಿದೆ

ನಂ 1 ಎನಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ''ನಂ 1 ನಟಿ ಎಂದು ಕರೆಸಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇದು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಅಷ್ಟೆ ಅಲ್ಲದೆ ಬಾಲಿವುಡ್‌ನಲ್ಲೂ ನಂ 1 ಪಟ್ಟ ಸಿಗಲೆಂಬ ಆಸೆಯಿದೆ'' ಎಂದಿದ್ದಾರೆ. ಪೂಜಾ ಹೆಗ್ಡೆ ಕರ್ನಾಟಕ ಮೂಲದವರಾಗಿದ್ದಾರೆ.

ಪ್ರಭಾಸ್, ಸಲ್ಮಾನ್ ಖಾನ್ ಜೊತೆಗೆ ಸಿನಿಮಾ

ಪ್ರಭಾಸ್, ಸಲ್ಮಾನ್ ಖಾನ್ ಜೊತೆಗೆ ಸಿನಿಮಾ

ಅಲಾ ವೈಕುಂಟಪುರಂಲೋ ಸಿನಿಮಾದ ಹಿಟ್ ನಂತರ ಈಗ ನಾಗಾರ್ಜುನ ಪುತ್ರ ಅಖಿಲ್ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ಪ್ರಭಾಸ್ ಜೊತೆಗೆ ಹೆಸರಿಡದ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ ಕರ್ನಾಟಕ ಮೂಲದ ಪೂಜಾ ಹೆಗ್ಡೆ. ಜೊತೆಗೆ ಬಾಲಿವುಡ್‌ನಲ್ಲಿ ಹೌಸ್‌ಫುಲ್ 4 ಯಶಸ್ಸಿನ ಬಳಿಕ, ಸಲ್ಮಾನ್ ಖಾನ್ ಗೆ ನಾಯಕಿಯಾಗಿ 'ಕಭಿ ಈದ್, ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Pooja Hegde is number 01 heroine in Tollywood as if now. She said i like to continue as no.1 heroine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X