ಅವರ ಹಣದಾಸೆಗೆ ನನ್ನ ಬಲಿ ಮಾಡಿದರು, ಕಣ್ಣೀರು ಹಾಕಿದ ಸ್ಟಾರ್ ನಟಿ..!

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು.

ಹಾಗಂಥ ತೀರಾ ಹೊಲಸಾಗಿ ಟ್ರೋಲ್ ಕೂಡ ಮಾಡಬಾರದು. ಯಾಕೆಂದರೆ ಕೆಲ ಒಮ್ಮೆ ಹೀಗೆ ಮಾಡಲಾಗುವ ಟ್ರೋಲ್ ವ್ಯಕ್ತಿಯೊಬ್ಬನ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಆಘಾತಕ್ಕೆ ಕಾರಣವಾಗಿ ಒತ್ತಡವನ್ನು ಹೆಚ್ಚಿಸಬಹುದು. ಇದಕ್ಕೆ ಪೂಜಾ ಹೆಗ್ಡೆಗಾದ ಅನುಭವ ಸದ್ಯದ ಉದಾಹರಣೆ.

Pooja Hegde opens up about being targeted by trolls This is the cost to put an end to it

ಹೌದು, ಪೂಜಾ ಹೆಗ್ಡೆ.. ಹೆಚ್ಚೇನ್ ಇಲ್ಲ ಹನ್ನೆರಡು ವರ್ಷದ ಹಿಂದೆ ಚಿನ್ನದಂತಹ ಬೇಡಿಕೆಯನ್ನ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು. ಹೀಗಾಗಿ ಪೂಜಾ ಹೆಗ್ಡೆ ಕೆರಿಯರ್ ಖತಂ ಎಂದೇ ಎಲ್ಲರು ಅಂದುಕೊಂಡಿದ್ದರು. ಪೂಜಾ ಹೆಗ್ಡೆಗೆ ಅವಮಾನವಾಗುವಂತೆ ಮಾತನಾಡಿದ್ದರು. ಆದರೂ ಕೂಡ ಪೂಜಾ ಹೆಗ್ದೆ ಕಂಗೆಟ್ಟಿರಲಿಲ್ಲ. ಹೆದರಿರಲಿಲ್ಲ. ಇಂದಲ್ಲ ನಾಳೆ ಗೆಲುವು ನನ್ನದೇ ಎನ್ನುವ ಆತ್ಮವಿಶ್ವಾಸದಲ್ಲಿಯೇ ಇದ್ದರು.

ಇಂಥಾ ಪೂಜಾ ಹೆಗ್ಡೆ ಈಗ ಟ್ರೋಲ್‌ಗಳಿಂದ ತಮ್ಮ ಮೇಲಾದ ಪರಿಣಾಮದ ಕುರಿತು ಮಾತನಾಡಿದ್ದಾರೆ. ಟ್ರೋಲ್ ಪೇಜ್‌ಗಳಿಗೆ ಚಿತ್ರರಂಗ ಹೇಗೆ ಬೆಂಬಲ ಕೊಡುತ್ತೆ ಎಂದು ಕೂಡ ಹೇಳಿದ್ದಾರೆ. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪೂಜಾ ಹೆಗ್ಡೆ, ಸುಖಾ ಸುಮ್ಮನೆ ಯಾರು ಕೂಡ ಯಾರನ್ನೂ ಟ್ರೋಲ್ ಮಾಡಲ್ಲ, ಗುರುತು ಪರಿಚಯ ಇರದವರ ಬಗ್ಗೆ ಅಪಹಾಸ್ಯ ಮಾಡಲ್ಲ, ಇದೆಲ್ಲದರ ಹಿಂದೆ ಹಣ ಇರುತ್ತೆ, ನಾನು ನನ್ನದು ಎನ್ನುವ ಅಹಂಕಾರ ಇರುತ್ತೆ ಎಂದು ಹೇಳಿದ್ದಾರೆ.

ನನ್ನನ್ನೂ ಗುರಿಯಾಗಿಸಿಕೊಂಡು ನನ್ನ ಮೇಲೆ ಜಿದ್ದಿಗೆ ಬಿದ್ದು ಮಾರ್ಕೆಟಿಂಗ್ ತಂತ್ರದ ಮೂಲಕ ಕೆಲವರು ಬೇಕು ಬೇಕೆಂದೇ ನನ್ನನ್ನೂ ತೀರಾ ಕೀಳಾಗಿ ಸೋಶಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರ ದೃಷ್ಟಿಯಲ್ಲಿ ಬಿಂಬಿಸಿದ್ದಾರೆ ಎಂದಿರುವ ಪೂಜಾ ಹೆಗ್ಡೆ ಈ ಕೆಲಸ ಮಾಡಲು ಸಾಕಷ್ಟು ಹಣವನ್ನು ಕೂಡ ಅವರು ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ಈ ವಿಚಾರ ನನಗೆ ಗೊತ್ತಾದಾಗ ನಾನು ಬೆಚ್ಚಿ ಬಿದ್ದಿದ್ದೆ ಈ ಕುರಿತು ನನ್ನ ಪೋಷಕರ ಜೊತೆ ಕೂಡ ನಾನು ಚರ್ಚೆ ಮಾಡಿದ್ದೇ ಎಂದು ಹೇಳಿರುವ ಪೂಜಾ ಹೆಗ್ಡೆ ಯಾರಾದರೂ ನಮ್ಮ ಕಾಲೆಳೆಯುತ್ತಿದ್ದಾರೆ ಎಂದರೆ ನಾನು ಬೆಳೆದಿದ್ದೇನೆ ಅವರಿಗಿಂತ ಮೇಲಿದ್ದೇನೆ ಎಂದು ನಾನು ಅಂದುಕೊಂಡಿದ್ದೇ, ಮನೆಯಲ್ಲಿ ಕೂಡ ಹೀಗೆ ಹೇಳಿ ಸಮಾಧಾನವನ್ನು ಕೂಡ ಮಾಡಿದ್ದೇ ಎಂದು ಹೇಳಿದ್ದಾರೆ.

ಆದರೆ ದಿನಗಳು ಉರುಳಿದಂತೆ ನನ್ನನ್ನು ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಯ್ತೇ ಹೊರತು ಕಡಿಮೆಯಾಗಲಿಲ್ಲ ಎಂದಿರುವ ಪೂಜಾ ಹೆಗ್ಡೆ ಹೀಗಾಗಿಯೇ ನನ್ನನ್ನೇ ಯಾಕೆ ಟ್ರೋಲ್ ಮಾಡಲಾಗುತ್ತಿದೆ ಎಂದು ತಿಳಿಯುವ ಉದ್ದೇಶದಿಂದ ನಾನು ಒಂದು ದಿನ ನನ್ನ ತಂಡಕ್ಕೆ ನನ್ನ ಟ್ರೋಲ್ ಮಾಡುತ್ತಿರುವವರನ್ನು ಸಂಪರ್ಕ ಮಾಡಿ ಎಂದು ಹೇಳಿದೆ ಎಂದು ಹೇಳಿದ್ದಾರೆ.

ನನ್ನ ತಂಡ ಅವರನ್ನೆಲ್ಲ ಸಂಪರ್ಕ ಮಾಡಿದಾಗ ನಿಮ್ಮನ್ನು ಟ್ರೋಲ್ ಮಾಡಲು ನಮಗೆ ಇಷ್ಟು ಹಣ ನೀಡಲಾಗುತ್ತೆ, ನೀವು ಇದನ್ನು ನಿಲ್ಲಿಸಲು ಬಯಸಿದರೆ ನಮಗೆ ಅವರಿಗಿಂತ ಹೆಚ್ಚಿನ ಹಣ ನೀಡಿ ಎಂಬ ಬೇಡಿಕೆಯನ್ನು ಅವರಿಂದ ಕೇಳಿ ನಾನು ಆಘಾತಕ್ಕೊಳಗಾದೆ ಎಂದು ಕೂಡ ಪೂಜಾ ಹೆಗ್ಡೆ ಹೇಳಿದ್ದಾರೆ.

ಇನ್ನು ಜನ ಕೂಡ ನಮ್ಮ ಬಗ್ಗೆ ಮಾಡಲಾದ ಅಪಪ್ರಚಾರವನ್ನೇ ನಂಬುತ್ತಾರೆ ಎಂದು ಹೇಳಿರುವ ಪೂಜಾ ಹೆಗ್ಡೆ ಕೆಲವೊಮ್ಮೆ ನನಗೆ ಬರುವ ಕಾಮೆಂಟ್‌ಗಳನ್ನು ಓದಿದಾಗ ನನಗೆ ಭಯವಾಗುತ್ತೆ ಎಂದು ಹೇಳಿದ್ದಾರೆ. ಅವರ ಹಿನ್ನೆಲೆ ತಿಳಿದುಕೊಳ್ಳಲು ಅವರ ಪ್ರೊಫೈಲ್‌ಗೆ ಹೋದರೆ ಅಲ್ಲಿ ಅವರ ನಿಜವಾದ ಫೋಟೊ ಇರುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಪೂಜಾ ಹೆಗ್ಡೆ ನೀಡಿದ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಶುರುವಾಗಿದೆ. ಟ್ರೋಲ್‌ ಪೇಜ್‌ಗಳಿಗೆ ಹಣ ನೀಡಿ ಪೂಜಾ ಹೆಗ್ಡೆಯವರನ್ನು ಟ್ರೋಲ್ ಮಾಡಿಸುತ್ತಿರುವ ಆ ಮಹಾನುಭಾವರು ಯಾರಿರಬಹುದು ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟ ಕೂಡ ಶುರುವಾಗಿದೆ.

Take a Poll

ಅಂದ್ಹಾಗೇ ಸದ್ಯ ಪೂಜಾ ಹೆಗ್ಡೆ ಸೂರ್ಯ ಅಭಿನಯದ ರೆಟ್ರೋ ಮತ್ತು ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಮತ್ತೊಂದು ಹಿಂದಿ ಚಿತ್ರ ಪೂಜಾ ಹೆಗ್ಡೆ ಕೈಯಲ್ಲಿದೆ.

More from Filmibeat

Read more about: pooja hegde filmibeat news troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X