ಮೊದಲ ಮನೆ ಖರೀದಿಸಿದ ನಟಿ ಪೂಜಾ ಹೆಗ್ಡೆ: ಬೆಲೆ ಕಡಿಮೆ ಇಲ್ಲ
ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ಎರಡರಲ್ಲೂ ಬ್ಯುಸಿಯಾಗಿರುವ ನಟಿ ಪೂಜಾ ಹೆಗ್ಡೆ ಇತ್ತೀಚೆಗಷ್ಟೆ ತಮ್ಮ ಸಂಭಾವನೆ ಏರಿಸಿಕೊಂಡು ಸುದ್ದಿಯಲ್ಲಿದ್ದರು. ಈಗ ಮೊದಲ ಬಾರಿಗೆ ಮನೆ ಖರೀದಿಸಿದ್ದಾರೆ ಈ ಚೆಲುವೆ.
ಮಂಗಳೂರು ಮೂಲಕ ಪೂಜಾ ಹೆಗ್ಡೆ ಮುಂಬೈನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಬಾಂಡ್ರಾನಲ್ಲಿ ಸೀ ಫೇಸ್ ಅಪಾರ್ಟ್‌ಮೆಂಟ್ ನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದಾರೆ. ಬಾಲಿವುಡ್‌ನ ಹಲವು ತಾರೆಯರು, ಪ್ರಮುಖ ರಾಜಕಾರಣಿಗಳು, ಉದ್ಯಮಪತಿಗಳು ನೆಲೆಸಿರುವ ಏರಿಯಾ ಇದು.
ಮೂರು ಕೊಠಡಿಗಳುಳ್ಳ ಸುಸಜ್ಜಿತ ಫ್ಲ್ಯಾಟ್ ಖರೀದಿಸಿರುವ ಪೂಜಾ ಹೆಗ್ಡೆ ತಮ್ಮ ಮನೆಗೆ ತಾವೇ ಮುಂದೆ ನೀತು ಸ್ವ-ಆಸಕ್ತಿಯಿಂದ ಒಳಾಂಗಣ ವಿನ್ಯಾಸ ಮಾಡಿಸುತ್ತಿದ್ದಾರೆ. ತಮ್ಮ ಹೊಸ ಮನೆಯ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ನಟಿ.

ದುಬಾರಿ ಬ್ಯಾಂಡ್ರಾ ಏರಿಯಾದಲ್ಲಿ ಪೂಜಾ ಮನೆ
ಭಾರತದ ಅತ್ಯಂತ ದುಬಾರಿ ಏರಿಯಾಗಳಲ್ಲಿ ಬ್ಯಾಂಡ್ರಾ ಸಹ ಒಂದು. ಇಲ್ಲಿ 3 ಬಿಎಚ್‌ಕೆ ಫ್ಲ್ಯಾಟ್ ಖರೀದಿಸಲು ಕನಿಷ್ಟ 3 ಕೋಟಿ ತೆರಬೇಕು. ಒಳಾಂಗಣ ವಿನ್ಯಾಸ ಇನ್ನಿತರೆಗಳೆಲ್ಲ ಸೇರಿದರೆ ಸುಮಾರು 4 ಕೋಟಿ ದಾಟುತ್ತದೆ ಮೊತ್ತ. ಪೂಜಾ ಹೆಗ್ಡೆ ಫ್ಲ್ಯಾಟ್‌ನ ಬೆಲೆ ಎಷ್ಟು ಎಂಬುದು ಅಧಿಕೃತವಾಗಿಲ್ಲ.

ಪೂಜಾ ಹೆಗ್ಡೆ ಸಂಭಾವನೆ ಎಷ್ಟು?
ನಟಿ ಪೂಜಾ ಹೆಗ್ಡೆ ತಮ್ಮ 'ಅಲಾ ವೈಕುಂಟಪುರಂಲೋ' ಸಿನಿಮಾದ ಬಳಿಕ ಸಂಭಾವನೆ ಏರಿಸಿಕೊಂಡರು. ಪ್ರಸ್ತುತ ತೆಲುಗು ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಪೂಜಾ ಹೆಗ್ಡೆ. ಅಲಾ ವೈಕುಂಟಪುರಂಲೋ ನಂತರ ಪೂಜಾ ಹೆಗ್ಡೆ ಸಿನಿಮಾ ಒಂದಕ್ಕೆ 2.50 ಕೋಟಿ ರು ಸಂಭಾವನೆ ಪಡೆಯುತ್ತಿದ್ದಾರೆ!

ರಾಧೆ-ಶ್ಯಾಮ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ
ಪೂಜಾ ಹೆಗ್ಡೆ ನಟಿಸಿರುವ ರಾಧೆ-ಶ್ಯಾಮ್ ಸಿನಿಮಾ ಜುಲೈ 30 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇದೊಂದು ಅಪ್ಪಟ ಪ್ರೇಮ ಕತೆ ಸಿನಿಮಾ ಆಗಿರಲಿದೆ. ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ ಪೂಜಾ ಹೆಗ್ಡೆ.
Recommended Video

ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಪೂಜಾ
ಪೂಜಾ ಹೆಗ್ಡೆ ನಟಿಸಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಇದೀಗ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದ ಚಿತ್ರೀಕರಣದಲ್ಲಿ ಪೂಜಾ ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ಸಲ್ಮಾನ್ ಖಾನ್ ಜೊತೆಗೆ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸಲಿದ್ದಾರೆ.


Click it and Unblock the Notifications











