ಏಕಾ-ಏಕಿ ಸಂಭಾವನೆ ಹೆಚ್ಚಿಸಿಕೊಂಡ ಪೂಜಾ ಹೆಗ್ಡೆ: ಒಂದು ಸಿನಿಮಾಕ್ಕೆ ಎಷ್ಟು?

ಕನ್ನಡತಿ ಪೂಜಾ ಹೆಗ್ಡೆ ಪ್ರಸ್ತುತ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಮಿರಿ-ಮಿರಿ ಮಿಂಚುತ್ತಿದ್ದಾರೆ. ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿಯಂತೂ ಪೂಜಾ ಅದೃಷ್ಟದ ನಟಿ.

ಅಲ್ಲು ಅರ್ಜುನ್ ಜೊತೆಗೆ 'ದುವ್ವಾಡ ಜಗನ್ನಾಥ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪೂಜಾ, ಬಹುತೇಕ ಟಾಪ್ ಹೀರೋಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ.

ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಹೆಗ್ಡೆ, ಇತ್ತೀಚಿನ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೋ' ದ ನಂತರ ಏಕಾ-ಏಕಿ ಸಂಭಾವನೆ ಏರಿಸಿಕೊಂಡಿದ್ದಾರಂತೆ. ಆದರೂ ಸಹ ಪೂಜಾ ಹೆಗ್ಡೆಗೆ ಬೇಡಿಕೆ ಕಡಿಮೆ ಆಗಿಲ್ಲ. ಆಫರ್‌ಗಳ ಮೇಲೆ ಆಫರ್‌ಗಳು ಬರುತ್ತಲೇ ಇವೆ.

ಆರಂಭದಲ್ಲಿ ಫ್ಲಾಪ್ ನೀಡಿದ್ದ ಪೂಜಾ

ಆರಂಭದಲ್ಲಿ ಫ್ಲಾಪ್ ನೀಡಿದ್ದ ಪೂಜಾ

ಸಿನಿಮಾ ಜೀವನದ ಆರಂಭದ ಸಮಯದಲ್ಲಿ ಫ್ಲಾಪ್ ಮೇಲೆ ಫ್ಲಾಪ್ ನೀಡಿದ್ದ ಪೂಜಾ ಹೆಗ್ಡೆ ಆ ನಂತರ ಸಖತ್ ಹಿಟ್ ಸಿನಿಮಾಗಳನ್ನು ಕೊಟ್ಟರು. ಅದರಲ್ಲಿಯೂ ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಜೊತೆ ನಟಿಸಿದ ನಂತರ ಪೂಜಾ ಹೆಗ್ಡೆ ಡಿಮ್ಯಾಂಡ್ ತೆಲುಗಿನಲ್ಲಿ ತುಸು ಹೆಚ್ಚಾಯಿತು.

ಈ ಮೊದಲು ಸಹ ಸಂಭಾವನೆ ಏರಿಸಿಕೊಂಡಿದ್ದರು

ಈ ಮೊದಲು ಸಹ ಸಂಭಾವನೆ ಏರಿಸಿಕೊಂಡಿದ್ದರು

ಮೊಹೆಂಜೊದಾರೊ ಹಾಗೂ ದುವ್ವಾಡ ಜಗನ್ನಾಥ ಸಿನಿಮಾಗಳ ಬಳಿಕ ಸಂಭಾವನೆ ಏರಿಸಿಕೊಂಡಿದ್ದ ಪೂಜಾ ಹೆಗ್ಡೆ ನಂತರ ಸಹಿ ಮಾಡಿದ 'ಸಾಕ್ಷ್ಯಂ' ಸಿನಿಮಾಕ್ಕೆ ಬರೋಬ್ಬರಿ 1.40 ಕೋಟಿ ತೆಗೆದುಕೊಂಡಿದ್ದರಂತೆ. ಆ ನಂತರ ಜೂ.ಎನ್‌ಟಿಆರ್ ಜೊತೆ 'ಅರವಿಂದ ಸಮೇತ', ಮಹೇಶ್ ಬಾಬು ಜೊತೆ 'ಮಹರ್ಷಿ' ಸಿನಿಮಾದಲ್ಲಿ ನಟಿಸಿದರು ಪೂಜಾ.

ಅಲಾ ವೈಕುಂಟಪುರಂಲೋ ಸಿನಿಮಾ ಬಳಿಕೆ ಸಂಭಾವನೆ ಹೆಚ್ಚಳ

ಅಲಾ ವೈಕುಂಟಪುರಂಲೋ ಸಿನಿಮಾ ಬಳಿಕೆ ಸಂಭಾವನೆ ಹೆಚ್ಚಳ

ನಂತರ ಹೌಸ್‌ಫುಲ್ 4 ಸಿನಿಮಾದಲ್ಲಿ ನಟಿಸಿ ಬಂದು, ತೆಲುಗಿನಲ್ಲಿ ಅಲಾ ವೈಕುಂಟಪುರಂಲೊ ಸಿನಿಮಾ ಮಾಡಿದ ಪೂಜಾ ಈಗ ಮತ್ತೆ ಸಂಭಾವನೆ ಏರಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಸಂಭಾವನೆ 2 ಕೋಟಿಗೆ ಸಮೀಪ ಹೋಗಿದೆಯಂತೆ. ತೆಲುಗಿನ ಕೆಲವು ಹೀರೋಗಳು ಸಹ ಇಷ್ಟು ಸಂಭಾವನೆ ತೆಗೆದುಕೊಳ್ಳುವುದಿಲ್ಲವಂತೆ.

ಪ್ರಭಾಸ್ ಜೊತೆಗೆ 'ರಾಧಾ-ಕೃಷ್ಣ'ದಲ್ಲಿ ನಟನೆ

ಪ್ರಭಾಸ್ ಜೊತೆಗೆ 'ರಾಧಾ-ಕೃಷ್ಣ'ದಲ್ಲಿ ನಟನೆ

ಪ್ರಸ್ತುತ ಪೂಜಾ ಹೆಗ್ಡೆ ಪ್ರಭಾಸ್ ಜೊತೆಗೆ 'ರಾಧಾ-ಕೃಷ್ಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ನಾಗಾರ್ಜುನ್ ಕಿರಿಯ ಪುತ್ರ ಅಖಿಲ್ ಜೊತೆಗೆ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಬಾಲಿವುಡ್‌ನಿಂದಲೂ ಪೂಜಾ ಗೆ ಆಹ್ವಾನವಿದೆಯಂತೆ.

More from Filmibeat

English summary
Actress Pooja Hegde hiked her remuneration per movie. She is giving hit movies back to back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X