ಪ್ರಧಾನಿ ಮೋದಿ ಅಭಿಯಾನಕ್ಕೆ ಕೈ ಜೋಡಿಸಿದ ಪೂಜಾ ಹೆಗ್ಡೆ

ದೇಶದಲ್ಲಿ ಕೊರೊನಾ ವೈರಸ್ ಭೀತಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕೊರೊನಾದಿಂದ ತಪ್ಪಿಸಿಕೊಳ್ಳಲು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಸೋಮಕು ಹರಡುವಿಕೆ ತಡೆಯಲು ಕಷ್ಟಸಾಧ್ಯವಾಗುತ್ತಿದೆ.

ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 'Unite2FightCorona ಅಭಿಯಾನ ಆರಂಭಿಸಿದ್ದಾರೆ.

ಸೋಂಕು ತಗಲದಂತೆ ಜನರು ಹೇಗೆ ನಿಗಾ ವಹಿಸಬೇಕು ಎನ್ನುವುದಕ್ಕೆ ಮೋದಿ ಮೂರು ಸಲಹೆ ನೀಡಿದ್ದಾರೆ. 1. ಮಾಸ್ಕ್ ಧರಿಸುವುದು ಕಡ್ಡಾಯ. 2. ಕೈಗಳನ್ನು ತೊಳೆಯುವುದು. 3. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂದು ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

Pooja Hegde Supports To PM Modi Unite 2 Fight Corona Campaign

ಒಗ್ಗಟ್ಟಾಗಿ ನಾವು ಕೊರೊನಾ ವಿರುದ್ಧ ಹೋರಾಡಿದರೆ ಖಂಡಿತವಾಗಿ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿಯ ಈ ಅಭಿಯಾನಕ್ಕೆ ನಟಿ ಪೂಜಾ ಹೆಗ್ಡೆ ಬೆಂಬಲ ಸೂಚಿಸಿದ್ದು, ''ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಕೊರೊನಾ ವಿರುದ್ಧ ಗೆಲ್ಲಲು ಸಾಧ್ಯ, ಮೋದಿಯ ಸಲಹೆಯನ್ನು ಅನುಸರಿಸೋಣ'' ಎಂದು ಟ್ವೀಟ್ ಮಾಡಿದ್ದಾರೆ.

Pooja Hegde Supports To PM Modi Unite 2 Fight Corona Campaign

Recommended Video

ಸ್ವಾತಿಮುತ್ತು ಶಿವಯ್ಯನ ಗೆಟಪ್ ನಲ್ಲಿ ಮತ್ತೆ ಕಾಣಿಸಿಕೊಂಡ Kiccha Sudeep | Filmibeat Kannada

ಪೂಜಾ ಹೆಗ್ಡೆ ಸದ್ಯ ಪ್ರಭಾಸ್ ಜೊತೆ ರಾಧೇ ಶ್ಯಾಮ್ ಸಿನಿಮಾ ಮಾಡುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಪೂಜಾ ಸಕ್ಸಸ್ ಕಂಡಿದ್ದು, ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

More from Filmibeat

English summary
Actress Pooja Hegde supports prime minister narendra modi's Unite 2 Fight Corona Campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X