ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಫ್ಲಾಪ್ ಆದ ಬಗ್ಗೆ ಪೂಜಾ ಹೆಗ್ಡೆ ಮಾತು

ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಈಗ ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯ ಹಾಗೂ ಅತ್ಯಂತ ದುಬಾರಿ ನಟಿ. ಪೂಜಾ ಹೆಗ್ಡೆ ನಟಿಸಿರುವ ಸಾಲು-ಸಾಲು ಸಿನಿಮಾಗಳು ಹಿಟ್ ಆಗುವ ಮೂಲಕ ತೆಲುಗು ಚಿತ್ರರಂಗದಲ್ಲಿ ತೀವ್ರ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ ಈ ನಟಿ.

ಆದರೆ ಪೂಜಾ ಹೆಗ್ಡೆ ಆರಂಭ ಅಷ್ಟೇನು ಅದ್ಭುತವಾಗಿ ಆಗಿರಲಿಲ್ಲ. ಬಾಲಿವುಡ್‌ ಸಿನಿಮಾಗಳಲ್ಲಿ ಅವಕಾಶ ಸಿಗದೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬಾಲಿವುಡ್‌ಗೆ ಹಾರಲು ದಕ್ಷಿಣ ಭಾರತ ಸಿನಿಮಾವನ್ನು ಚಿಮ್ಮುಹಲಗೆಯಂತೆ ಬಳಸಿಕೊಳ್ಳಲು ಯತ್ನಿಸಿದರು ಮತ್ತು ಅದರಲ್ಲಿ ಸಫಲವೂ ಆದರು. ಪೂಜಾಗೆ ಬಾಲಿವುಡ್ ಅವಕಾಶವೇನೋ ಸಿಕ್ಕಿತ್ತು ಆದರೆ ಆ ಸಿನಿಮಾ ದಾರುಣವಾಗಿ ನೆಲಕಚ್ಚಿತು.

ನಟಿ ಪೂಜಾ ಹೆಗ್ಡೆ 'ಮೊಹೆಂಜದಾರೊ' ಹೆಸರಿನ ಹಿಂದಿ ಸಿನಿಮಾದಲ್ಲಿ ಕೆಲ ವರ್ಷಗಳ ಹಿಂದೆ ನಟಿಸಿದ್ದರು. ಹೃತಿಕ್ ರೋಷನ್ ಆ ಸಿನಿಮಾದ ನಾಯಕ. ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆಗಳಿದ್ದವು ಆದರೆ ಆ ಸಿನಿಮಾ ದಾರುಣವಾಗಿ ನೆಲಕಚ್ಚಿತು. ಸಿನಿಮಾ ಫ್ಲಾಪ್ ಆದಾಗ ತಮಗೆ ಆದ ಬೇಸರ, ಅನುಭವಿಸಿದ ಖಿನ್ನತೆ ಬಗ್ಗೆ ನಟಿ ಪೂಜಾ ಹೆಗ್ಡೆ ಇದೀಗ ಮಾತನಾಡಿದ್ದಾರೆ.

ಹಲವು ಅವಕಾಶಗಳು ಕೈತಪ್ಪಿದವು: ಪೂಜಾ

ಹಲವು ಅವಕಾಶಗಳು ಕೈತಪ್ಪಿದವು: ಪೂಜಾ

'ನಿರೀಕ್ಷೆ ಇಟ್ಟಿದ್ದ ಸಿನಿಮಾ ಫ್ಲಾಪ್ ಆದಾಗ ತೀವ್ರ ನಿರಾಸೆ ಆಗಿತ್ತು. ಆ ಸಿನಿಮಾದ ಬಳಿಕ ಅವಕಾಶಗಳು ಕಡಿಮೆ ಆದವು. ಕೈಲಿದ್ದ ಸಿನಿಮಾಗಳು ಸಹ ಕೈತಪ್ಪಿದವು. ನಿಮ್ಮ ಹಿಂದಿನ ಸಿನಿಮಾ ಫ್ಲಾಪ್ ಆಗಿದ್ದಾಗ ಯಾವ ಒಳ್ಳೆಯ ಅವಕಾಶವು ನಿಮಗಾಗಿ ಬರುವುದಿಲ್ಲ' ಎಂದಿದ್ದಾರೆ ಪೂಜಾ ಹೆಗ್ಡೆ.

ಈಗ ಸರಿಯಾದ ದಾರಿಯಲ್ಲಿದ್ದೇನೆ ಎನಿಸುತ್ತಿದೆ: ಪೂಜಾ

ಈಗ ಸರಿಯಾದ ದಾರಿಯಲ್ಲಿದ್ದೇನೆ ಎನಿಸುತ್ತಿದೆ: ಪೂಜಾ

'ಮೊಹೆಂಜದಾರೊ' ಸಿನಿಮಾ ಫ್ಲಾಪ್ ಆದ ಬಳಿಕ ನನಗೆ ಮೊದಲು ಯಾವ ಅವಕಾಶ ಬಂತೊ ಅದನ್ನು ಹೆಚ್ಚು ಯೋಚನೆ ಮಾಡದೆ ನಾನು ಒಪ್ಪಿಕೊಂಡು ಬಿಟ್ಟೆ. ಆದರೆ ಈಗ ನಾನು ಸರಿಯಾದ ದಾರಿಯಲ್ಲಿದ್ದೇನೆ ಎನಿಸುತ್ತಿದೆ. ಸಾಲು-ಸಾಲು ಹಿಟ್ ಸಿನಿಮಾಗಳನ್ನು ನಾನು ನೀಡುತ್ತಿದ್ದೇನೆ. ನನಗೆ ಇಲ್ಲಿಗೆ ನಿಲ್ಲಲಿಕ್ಕೆ ಇಷ್ಟವಿಲ್ಲ ನಾನು ಇನ್ನೂ ಮುಂದೆ ಹೋಗಬೇಕಿದೆ' ಎಂದಿದ್ದಾರೆ ಪೂಜಾ.

ಐಟಂ ಹಾಡಿಗೂ ನರ್ತಿಸಿರುವ ಪೂಜಾ ಹೆಗ್ಡೆ

ಐಟಂ ಹಾಡಿಗೂ ನರ್ತಿಸಿರುವ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ ಮೊದಲಿಗೆ ತಮಿಳು ಸಿನಿಮಾ 'ಮುಗಮುಡಿ'ಯಲ್ಲಿ ನಟಿಸಿದರು. 2016 ರಲ್ಲಿ 'ಮೊಹೆಂಜಾದಾರೊ' ಸಿನಿಮಾದಲ್ಲಿ ನಟಿಸಿದರು. ಅದು ಫ್ಲಾಪ್ ಆದ ಬಳಿಕ 'ದುವ್ವಾಡ ಜಗನ್ನಾಥ' ಸಿನಿಮಾದಲ್ಲಿ ನಟಿಸಿದರು. 'ರಂಗಸ್ಥಳ' ಸಿನಿಮಾದಲ್ಲಿ ಐಟಂ ಹಾಡಿಗೆ ನರ್ತಿಸಿದರು. 'ಮೊಹೆಂಜಾದಾರೊ' ನಂತರ ಸುಮಾರು ನಾಲ್ಕು ವರ್ಷ ಹಿಂದಿಯ ಯಾವ ಸಿನಿಮಾದಲ್ಲಿಯೂ ನಟಿಸಲಿಲ್ಲ.

Recommended Video

Cinema ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ 10 ಲಕ್ಷ ರೂ ಪರಿಹಾರ ಘೋಷಿಸಿದ Puneet Rajkumar | Filmibeat Kannada
ಹಲವು ಸ್ಟಾರ್ ನಟರೊಂದಿಗೆ ಸಿನಿಮಾಗಳು

ಹಲವು ಸ್ಟಾರ್ ನಟರೊಂದಿಗೆ ಸಿನಿಮಾಗಳು

ಇದೀಗ ಪ್ರಭಾಸ್ ಜೊತೆಗೆ 'ರಾಧೆ' ಸಿನಿಮಾದಲ್ಲಿ ನಟಿಸಿರುವ ಪೂಜಾ ಹೆಗ್ಡೆ, ಅಖಿಲ್ ಅಕ್ಕಿನೇನಿ ಜೊತೆಗೆ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಜೊತೆ 'ಆಚಾರ್ಯ', ತಮಿಳಿನ ವಿಜಯ್ ಜೊತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಬಿಟ್ಟು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆಗೆ 'ಕಭಿ ಈದ್ ಕಭಿ ದಿವಾಲಿ', ರಣ್ವೀರ್ ಸಿಂಗ್ ಜೊತೆಗೆ 'ಸರ್ಕಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ಪೂಜಾ ಹೆಗ್ಡೆ ವೃತ್ತಿಯ ಗ್ರಾಫ್ ಪ್ರಸ್ತುತ ತೀವ್ರ ಏರುಗತಿಯಲ್ಲಿದೆ.

More from Filmibeat

English summary
Actress Pooja Hegde talks about her first Hindi movie Mohenja Daro. She said how that flop movie affect on her career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X