For Quick Alerts
  ALLOW NOTIFICATIONS  
  For Daily Alerts

  ಸಿಡಿದೆದ್ದ ಪೂನಂ ಕೌರ್: 'ಹೆಣ್ಣುಮಕ್ಕಳನ್ನು ಮುಂದಿಟ್ಟು ರಾಜಕೀಯ ಮಾಡ್ತೀರಾ'?

  By ರವೀಂದ್ರ ಕೊಟಕಿ
  |

  ತೆಲುಗು ನಟ ಪೊಸಾನಿ ಕೃಷ್ಣ ಮುರಳಿ, ಜಗನ್ ಪರವಾಗಿ ಬ್ಯಾಟ್ ಬೀಸಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನವನ್ನು ಕೆದಕಿದ್ದು ಅಲ್ಲದೆ, 'ಪಂಜಾಬಿ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ, ಪ್ರೀತಿಯ ನಾಟಕವಾಡಿ, ನಯವಂಚಕ ಮಾತುಗಳಿಂದ ನಂಬಿಸಿ ಸಂಬಂಧ ಬೆಳೆಸಿ, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿದ್ದಲ್ಲದೆ ಕೊನೆಗೆ ಆಕೆಗೆ ಬಲವಂತವಾಗಿ ಹೈದರಾಬಾದ್ ನ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿ, ಆಕೆಯ ಜೀವನವನ್ನು ನಾಶ ಮಾಡಿದ್ದು ಅಲ್ಲದೆ ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿ, ಆಕೆಗೆ ಐದು ಕೋಟಿ ರೂಪಾಯಿ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ' ಅಂತ ಗಂಭೀರವಾದ ಆರೋಪ ಪವನ್ ಕಲ್ಯಾಣ್ ವಿರುದ್ಧ ಮಾಡಿದ್ದರು.

  ಪೊಸಾನಿ ಹೀಗೆ ಪವನ್ ವಿರುದ್ಧ ಗಂಭೀರವಾದ ಆರೋಪ ಮಾಡುತ್ತಿದ್ದಂತೆ, ಆ ಪಂಜಾಬಿ ಹುಡುಗಿ ಯಾರು? ಅಂತ ಇಂಡಸ್ಟ್ರೀ ಒಳಗಡೆ ಹಾಟ್ ಟಾಪಿಕ್ ಶುರುವಾಗಿದೆ. ಹೀಗಾಗಿ ಸಹಜವಾಗಿಯೇ ನಟಿ ಪೂನಂ ಕೌರ್ 'ಪವನ್ ಸಂಬಂಧ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದೆ ಓದಿ....

  ಜಗನ್ V/s ಪವನ್: ತೆಲುಗು ಸಿನಿಮಾರಂಗ ಜಗನ್ ಜೊತೆಗೆ ನಿಂತಿದ್ದು ಯಾಕೆ? ಜಗನ್ V/s ಪವನ್: ತೆಲುಗು ಸಿನಿಮಾರಂಗ ಜಗನ್ ಜೊತೆಗೆ ನಿಂತಿದ್ದು ಯಾಕೆ?

  ಯಾರು ಈ ಪೂನಮ್ ಕೌರ್?

  ಯಾರು ಈ ಪೂನಮ್ ಕೌರ್?

  ಪೂನಮ್ ಕೌರ್ ಮೂಲತಃ ಪಂಜಾಬಿ ಕುಟುಂಬಕ್ಕೆ ಸೇರಿದ ಹೈದರಾಬಾದ್ ಹುಡುಗಿ. ತೇಜ ನಿರ್ದೇಶನದ 'ಒಕ್ಕ ವಿಚಿತ್ರಂ' ಚಿತ್ರದ ಮೂಲಕ 2006ರಲ್ಲಿ ತೆಲುಗು ಸಿನಿಮಾರಂಗದಲ್ಲಿ ಪದಾರ್ಪಣೆ ಮಾಡಿದರು. ಮುಂದೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಸಕ್ರಿಯರಾದ ಪೂನಮ್ ಕನ್ನಡದಲ್ಲಿ ಕೂಡ ಟಿ ನಾಗಣ್ಣ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸಿದ 'ಬಂಧು-ಬಳಗ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದಳು. ತನ್ನ 15 ವರ್ಷದ ಸಿನಿಕೆರಿಯರ್ ನಲ್ಲಿ ಸುಮಾರು 25 ಚಿತ್ರಗಳಲ್ಲಿ ನಟಿಸಿದ್ದಾಳೆ ಈ 37 ವರ್ಷದ ಬೆಡಗಿ.

  ಪೂನಂ ಕೌರ್-ಪವನ್ ಸಂಬಂಧ ಪ್ರಶ್ನಿಸಿದ್ದ ಕತ್ತಿ ಮಹೇಶ್

  ಪೂನಂ ಕೌರ್-ಪವನ್ ಸಂಬಂಧ ಪ್ರಶ್ನಿಸಿದ್ದ ಕತ್ತಿ ಮಹೇಶ್

  ಪವನ್-ಪೂನಮ್ ಬಾಂಧವ್ಯವನ್ನು ಬಹಿರಂಗಪಡಿಸುವ ಮೂಲಕ ಸಂವೇದನಶೀಲ ಆರೋಪಗಳನ್ನು ಮಾಡಿದ್ದರು ಕತ್ತಿ ಮಹೇಶ್. ಪೂನಮ್ ಕೌರ್ ಮೂಲತಃ ಪವನ್ ಕಲ್ಯಾಣ್ ಫ್ಯಾನ್. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಆಕೆ ಪವನ್ ಕಲ್ಯಾಣ್ ಪರವಾಗಿ ಟ್ವೀಟ್ ಮಾಡಿ ಸಮರ್ಥಿಸುತ್ತಿದ್ದಳು. ಒಂದು ಸಂದರ್ಭದಲ್ಲಿ ಅವರಿಬ್ಬರ ಸಂಬಂಧದ ಬಗ್ಗೆ ಪುಂಖಾನುಪುಂಕವಾಗಿ ಸುದ್ದಿಗಳು ಹಬ್ಬಿತ್ತು. ಹೀಗೆ ಸಾರ್ವಜನಿಕವಾಗಿ ಸುದ್ದಿಗಳನ್ನು ಹಬ್ಬಿಸಿದ ಮೊದಲನೇ ವ್ಯಕ್ತಿಯೆಂದರೆ, ಸಿನಿ ಕ್ರಿಟಿಕ್ ಹಾಗೂ ನಟನಾಗಿದ್ದ ದಿವಂಗತ ಕತ್ತಿ ಮಹೇಶ್.

  'ಪಂಜಾಬಿ ಹುಡುಗಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ರು': ನ್ಯಾಯ ಕೊಡಿಸೋಕೆ ಆಗುತ್ತಾ?'ಪಂಜಾಬಿ ಹುಡುಗಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ರು': ನ್ಯಾಯ ಕೊಡಿಸೋಕೆ ಆಗುತ್ತಾ?

  ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ನಿಜವಲ್ಲವೇ

  ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ನಿಜವಲ್ಲವೇ

  ಕತ್ತಿ ಮಹೇಶ್ ಮೂಲತಃ ಜಗನ್ ಪಕ್ಷವನ್ನು ಬೆಂಬಲಿಸುತ್ತಿದ್ದ. ಹೀಗಾಗಿ ಆತ ಸದಾ ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಜೊತೆಗೆ ಟಿವಿ ಮಾಧ್ಯಮಗಳಲ್ಲಿ ಕೂಡ ಪವನ್ ಕಲ್ಯಾಣ್ ಅವರ ರಾಜಕೀಯದ ಜೊತೆಗೆ ವೈಯಕ್ತಿಕ ಜೀವನವನ್ನು ಪ್ರಶ್ನಿಸಿ ಅವರ ಇಮೇಜ್ ಡ್ಯಾಮೇಜ್ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದ. ಇದೇ ಕ್ರಮದಲ್ಲಿ ಪೂನಂ-ಪವನ್ ಸಂಬಂಧದ ಬಗ್ಗೆ ಕೂಡ ಸಾರ್ವಜನಿಕವಾಗಿ ಪ್ರಶ್ನಿಸಿದ್ದ. ಅಲ್ಲದೆ ಪೂನಮ್ ಕೌರ್ ಗೆ 'ಆಂಧ್ರಪ್ರದೇಶ ಹ್ಯಾಂಡ್ಲೂಮ್ ಡೆವಲಪ್ಮೆಂಟ್ ಕಾರ್ಪೊರೇಷನ್ ರಾಯಭಾರಿಯಾಗಿ ನಿಮ್ಮನ್ನು ನೇಮಿಸಿದ್ದು ಯಾರು? (ಆಗ ಚಂದ್ರಬಾಬು ಸರ್ಕಾರ ಅಧಿಕಾರದಲ್ಲಿತ್ತು. ಪವನ್ ಕಲ್ಯಾಣ್ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದರು). ಪವನ್ ನಿಮಗೆ ಮೋಸ ಮಾಡಿದರು ಅಂತ ಹೇಳಿ ನೀವು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ನಿಜವಲ್ಲವೇ? ಯಾರು ನಿಮ್ಮನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದು ಮತ್ತು ಯಾರು ನಿಮ್ಮ ಎಲ್ಲಾ ಬಿಲ್ಲುಗಳನ್ನು ಕ್ಲಿಯರ್ ಮಾಡಿದ್ದು? ಅಂತ ನೇರವಾಗಿಯೇ ಪೂನಮ್ ಕೌರ್ ಗೆ ಕೊಟ್ಟಿದ್ದ ಕತ್ತಿ ಮಹೇಶ್ ಅಲ್ಲಿಗೆ ನಿಲ್ಲದೆ, 'ಬೇಕಿದ್ದರೆ ನೀವು ಈ ನನ್ನ ಆರೋಪಗಳಿಗೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು' ಅಂತ ಕೂಡ ಪೂನಮ್ ಗೆ ಚಾಲೆಂಜ್ ಮಾಡಿದ್ದ. ಪೂನಮ್ ವಿಷಯವನ್ನು ಮುಂದುವರಿಸಲು ಇಷ್ಟವಿಲ್ಲದೆ ಅಲ್ಲಿಗೆ ಅದನ್ನು ಮುಕ್ತಾಯ ಮಾಡಿದ್ದರು.

  ಜಗನ್ ಅಭಿಮಾನಿಗಳಿಗೆ ಪೂನಮ್ ಕೌರ್ ಟಾಂಗ್

  ಜಗನ್ ಅಭಿಮಾನಿಗಳಿಗೆ ಪೂನಮ್ ಕೌರ್ ಟಾಂಗ್

  ಪೊಸಾನಿ, ಪವನ್ ಕಲ್ಯಾಣ್ ವಿರುದ್ಧ ಪ್ರೆಸ್ ಮೀಟ್ ಮಾಡಿ ಹರಿಹಾಯ್ದ ಮೇಲೆ ಜಗನ್ ಬೆಂಬಲಿಗರು ಪೂನಮ್ ಕೌರ್ ಗೆ ಟ್ಯಾಗ್ ಮಾಡಿ 'ಏನಾದರೂ ವಿಶೇಷ ಸುದ್ದಿ ಇದೆಯಾ, ಪವನ್ ಕಲ್ಯಾಣ್ ಅವರೊಂದಿಗೆ' ಅಂತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಖಾರವಾಗಿಯೇ ರಿಟ್ವೀಟ್ ಮಾಡಿರುವ ಪೂನಮ್ ಕೌರ್ 'ನೀವೆಲ್ಲಾ ಸೇರಿ ನಿಮ್ಮ ರಾಜಕೀಯ ಲಾಭಕ್ಕಾಗಿ, ನಿಮ್ಮ ಲೆವೆಲ್ ಗೆ ತಕ್ಕಂತೆ ಟಿವಿ ಮುಂದೆ ಮಾಡಿಸಿದರಲ್ಲ, ಮದುವೆ! ಅದಕ್ಕೆ ಈ ದಿನದವರೆಗೂ ಯಾವುದೇ ಗುಡ್ ನ್ಯೂಸ್ ಇಲ್ಲ. ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತೀರಲ್ಲ.ನಿಮ್ಮದು ಒಂದು ಪುರುಷ ಸಮಾಜವೇ?' ಅಂತ ಸ್ಟ್ರಾಂಗ್ ಕೌಂಟರ್ ಕೊಟ್ಟಿದ್ದಾಳೆ. ಪೂನಮ್ ಕೌರ್ ಅವರ ಟ್ವೀಟ್ ಭಾರಿ ಸುದ್ದಿಗೆ ಗ್ರಾಸವಾಗಿದೆ.

  English summary
  Actress Poonam Kaur's Sensational Tweet on Posani Krishna Murali statement on Pawan Kalyan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X