'RRR' ನಿರ್ಮಾಪಕರು 'ಸಾಹೋ' ನಿರ್ದೇಶಕನ ಜೊತೆ ಕೈ ಜೋಡಿಸಿದ ಪವನ್ ಕಲ್ಯಾಣ್: ಕ್ರೇಜಿ ಪ್ರಾಜೆಕ್ಟ್ ಘೋಷಣೆ

ಒಂದ್ಕಡೆ ಜನಸೇನಾ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಮತ್ತೊಂದ್ಕಡೆ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಇದೀಗ ಮತ್ತೊಂದು ಕ್ರೇಜಿ ಪ್ರಾಜೆಕ್ಟ್‌ಗೆ ಪವರ್ ಸ್ಟಾರ್ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಅಧಿಕೃತವಾಗಿ ಆ ಸಿನಿಮಾ ಘೋಷಣೆ ಆಗಿದೆ.

'RRR' ರೀತಿಯ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಡಿವಿವಿ ದಾನಯ್ಯ ಪವನ್ ಕಲ್ಯಾಣ್ ಮುಂದಿನ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ 'ಸಾಹೋ' ಸಿನಿಮಾ ಮಾಡಿದ್ದ ಸುಜಿತ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಥೀಮ್ ಪೋಸ್ಟರ್ ಸಮೇತ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಸುಜಿತ್ ಹಾಗೂ ಪವನ್ ಕಲ್ಯಾಣ್ ಸಿನಿಮಾ ಬಗ್ಗೆ ಗುಸುಗುಸು ಕೇಳಿಬರ್ತಿತ್ತು. ಆದರೆ ಈಗ ಅದು ಪಕ್ಕಾ ಆಗಿದೆ.

ಪವನ್ ಕಲ್ಯಾಣ್ ಮುಂದಿನ ಚುನಾವಣೆ ಕಡೆ ಗಮನ ಹರಿಸಿದ್ದಾರೆ. ಆಂಧ್ರ ರಾಜಕೀಯರದಲ್ಲಿ ಹೊಸ ಬದಲಾವಣೆ ತರುವ ಸಂಕಲ್ಪ ಮಾಡಿದ್ದಾರೆ. ಹಾಗಾಗಿ ಕೈಯಲ್ಲಿರುವ ಒಂದೆರಡು ಸಿನಿಮಾಗಳನ್ನು ಮುಗಿಸಿ, ಸಂಪೂರ್ಣವಾಗಿ ಪಾಲಿಟಿಕ್ಸ್‌ನತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಮತ್ತೊಂದು ಸಿನಿಮಾ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಕ್ರೇಜಿ ಪ್ರಾಜೆಕ್ಟ್ ಅನೌನ್ಸ್

ಕ್ರೇಜಿ ಪ್ರಾಜೆಕ್ಟ್ ಅನೌನ್ಸ್

'ರನ್ ರಾಜಾ ರನ್' ಹಾಗೂ 'ಸಾಹೋ' ಸಿನಿಮಾಗಳ ಸಾರಥಿ ಸುಜಿತ್ ಇತ್ತೀಚೆಗೆ ಪವನ್ ಕಲ್ಯಾಣ್‌ಗೆ ಕಥೆ ಹೇಳಿದ್ದಾರೆ. ಆ ಕಥೆ ಕೇಳಿ ಇಂಪ್ರೆಸ್ ಆಗಿದ್ದ ಪವರ್ ಸ್ಟಾರ್ ಕೂಡಲೇ ನಟಿಸೋಕೆ ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೆಲ್ಲಾ ಬರೀ ಗಾಸಿಪ್ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಇದೀಗ ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಆ ಸಿನಿಮಾ ನಿರ್ಮಾಣವಾಗುವುದು ಕನ್ಫರ್ಮ್ ಆಗಿದೆ. ಇದು ಒರಿಜಿನಲ್ ಗ್ಯಾಂಗ್‌ಸ್ಟರ್ ಸಿನಿಮಾ ಎಂದು ಚಿತ್ರತಂಡ ಸುಳಿವು ನೀಡಿದೆ. ರವಿ. ಕೆ ಚಂದ್ರನ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

ಸ್ಟೈಲಿಶ್ ಆಕ್ಷನ್ ಎಂಟರ್‌ಟೈನರ್

ಸ್ಟೈಲಿಶ್ ಆಕ್ಷನ್ ಎಂಟರ್‌ಟೈನರ್

Fire storm Is Coming ಎಂದು ಬರೆದು ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಒಂದು ಪೋಸ್ಟರ್‌ನಲ್ಲಿ ಪವನ್ ಹಿಂದೆ ತಿರುಗಿ ಕೈಕಟ್ಟಿ ನಿಂತಿದ್ದರೆ, ಮತ್ತೊಂದರಲ್ಲಿ ಗನ್ ಹಿಡಿದು ಅಬ್ಬರಿಸಿದ್ದಾರೆ. ಮಾರ್ಷಲ್ ಆರ್ಟ್ಸ್ ಸೇರಿಸಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಈ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಗೊತ್ತಾಗುತ್ತಿದೆ. ಪವನ್ ಕಲ್ಯಾಣ್ ಕೂಡ ಮಾರ್ಷಲ್ ಆರ್ಟ್ಸ್ ಕಲಿತಿರುವುದರಿಂದ ಈ ಸಿನಿಮಾ ಅಭಿಮಾನಿಗಳಿಗೆ ಹಬ್ಬ ಅಂತಲೇ ಹೇಳಬೇಕು.

ಬಹಳ ಅದ್ಧೂರಿ ಸಿನಿಮಾ

ಬಹಳ ಅದ್ಧೂರಿ ಸಿನಿಮಾ

ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಪವನ್- ಸುಜಿಜ್ ಕಾಂಬಿನೇಷನ್‌ ಸಿನಿಮಾ ನಿರ್ಮಾಣವಾಗಲಿದೆ. 'RRR' ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಿ ಸಕ್ಸಸ್ ಕಂಡಿದ್ದ ಡಿ ವಿ ವಿ ದಾನಯ್ಯ ಅಂಡ್ ಟೀಮ್ ಈ ಚಿತ್ರವನ್ನು ಕೂಡ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಲೆಕ್ಕಾಚಾರದಲ್ಲಿದೆ. ಸಿನಿಮಾ ನಾಯಕಿ ಯಾರು? ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ? ಸಿನಿಮಾ ಯಾವಾಗ ಸೆಟ್ಟೇರುತ್ತೆ? ಎನ್ನುವುದನ್ನು ಕಾದು ನೋಡಬೇಕು.

3 ಸಿನಿಮಾಗಳಲ್ಲಿ ಪವನ್ ಬ್ಯುಸಿ

3 ಸಿನಿಮಾಗಳಲ್ಲಿ ಪವನ್ ಬ್ಯುಸಿ

'ಹರಿಹರ ವೀರಮಲ್ಲು', 'ಭವದೀಯುಡು ಭಗತ್ ಸಿಂಗ್' ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಕ್ರಿಶ್ ನಿರ್ದೇಶನದ ಕಾಸ್ಟ್ಯೂಮ್ ಡ್ರಾಮಾ 'ಹರಿಹರ ವೀರಮಲ್ಲು' ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾನ್ ರಾಬಿನ್ ಹುಡ್ ಮಾದರಿಯ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಹರೀಶ್ ಶಂಕರ್ ಸಾರಥ್ಯದ 'ಭವದೀಯುಡು ಭಗತ್ ಸಿಂಗ್' ಕೂಡ ನಿರೀಕ್ಷೆ ಮೂಡಿಸಿದೆ. ಇದೀಗ ಇದೇ ಸಾಲಿಗೆ ಸುಜಿತ್ ನಿರ್ದೇಶನದ ಸಿನಿಮಾ ಸೇರಿಕೊಂಡಿದೆ.

More from Filmibeat

English summary
Power star Pawan Kalyan in sujeeth direction under D V V Movies production. Pawan Kalyan's 28th movie Harihara Veeramallu is being helmed by Krish. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X