Prabhas: ಪ್ರಭಾಸ್ ಮೊದಲ ಹಾಲಿವುಡ್ ಚಿತ್ರಕ್ಕೆ ಯುನಿರ್ಸಲ್ ಸ್ಟುಡಿಯೊ ಬಂಡವಾಳ!
ನಟ ಪ್ರಭಾಸ್ ಸದ್ಯ ಟಾಲಿವುಡ್ ಮಾತ್ರ ಅಲ್ಲಾ, ಬಾಲಿವುಡ್‌ನಲ್ಲೂ ಕೂಡ ಬೇಡಿಕೆಯ ನಟ ಆಗಿದ್ದರೆ. ಅವರ ಸಿನಿಮಾಗಳು ಈಗ ಯಾವುದೇ ಬಂದರು ಕೂಡ ಅದು ಪ್ಯಾನ್ ಇಂಡಿಯಾ ಅಥವಾ ತೆಲುಗು, ಹಿಂದಿಯಲ್ಲಿ ರಿಲೀಸ್ ಆಗುತ್ತವೆ. ನಟ ಪ್ರಭಾಸ್ ಮೊದಲಿನಿಂದಲೂ ತಮ್ಮ ಸ್ಟಾರ್‌ಗಿರಿಯನ್ನು ಕಾಯ್ದುಕೊಂಡು ಬಂದಿದ್ದಾರೆ. ಅದರಲ್ಲೂ ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಸ್ಟಾರ್ ಗಿರಿ ಮತ್ತಷ್ಟು ಹೆಚ್ಚಾಗಿದೆ.
ಪ್ರಭಾಸ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ರಭಾಸ್ ಸಿನಿಮಾ ಬರ್ತಿದೆ ಅಂದರೆ ಸಾಕು, ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಸದ್ಯ ಪ್ರಭಾಸ್ ಎಲ್ಲಾ ಗಡಿಗಳನ್ನು ಮೀರಿ ಬೆಳೆಯಯುತ್ತಾ ಇದ್ದಾರೆ. ಬಾಲಿವುಡ್ ಟೀಮ್ ಪ್ರಭಾಸ್‌ಗಾಗಿ ಸಿನಿಮಾ ಮಾಡುತ್ತಾ ಇದೆ. ಈಗ ಪ್ರಭಾಸ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ನಟ ಪ್ರಭಾಸ್ ಹಾಲಿವುಡ್‌ಗೆ ಹಾರುತ್ತಾ ಇದ್ದಾರೆ ಎನ್ನುವ ಸುದ್ದಿ ಹಲವು ಬಾರಿ ಬಂದು ಹೋಗಿದೆ. ಆದರೆ ಇಲ್ಲಿ ತನಕ ಹಾಲಿವುಡ್ ಚಿತ್ರದ ಸೆಟ್ಟೇರಿಲ್ಲ. ಈಗ ಈ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದೆ. ಪ್ರಭಾಸ್‌ಗಾಗಿ ಹಾಲಿವುಡ್ ನಿರ್ಮಾಣ ಸಂಸ್ಥೆ ದುಡ್ಡು ಹಾಕಲು ಸಜ್ಜಾಗಿದೆ. ಈ ಹೊಸ ಕಥೆ ಏನು ಎನ್ನುವ ಬಗ್ಗೆ ಮುಂದೆ ಓದಿ..

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಲಿವುಡ್‌ಗೆ!
ನಟ ಪ್ರಭಾಸ್ ಹಾಲಿವುಡ್ ಚಿತ್ರ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ. ಈ ಸುದ್ದಿ ಈಗ ಹಬ್ಬಲು ಕಾರಣ 'ಯುನಿವರ್ಸೆಲ್ ಸ್ಟುಡಿಯೊ'. ಹೌದು ಹಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆ 'ಯುನಿವರ್ಸೆಲ್ ಸ್ಟುಡಿಯೊ' ಪ್ರಭಾಸ್ ಹಾಲಿವುಡ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ ಎನ್ನುಲಾಗಿದೆ. ಈಗಾಗಲೆ ಪ್ರಭಾಸ್ ಜೊತೆಗೆ ಒಂದು ಸುತ್ತಿನ ಮಾತುಕಥೆ ಆಗಿದೆ ಎನ್ನಲಾಗುತ್ತಿದೆ. ಎಲ್ಲವೂ ಓಕೆ ಆದರೆ, ಸಿನಿಮಾ ಸದ್ಯದಲ್ಲೆ ಅಧಿಕೃತವಾಗಿ ಪ್ರಕಟ ಆಗಲಿದೆ.

ಸೂಪರ್ ಹೀರೋ ಪಾತ್ರದಲ್ಲಿ ಪ್ರಭಾಸ್!
ಯುನಿವರ್ಸಲ್ ಸ್ಟುಡಿಯೊ ಸೂಪರ್ ಹೀರೋ ಸಿನಿಮಾಗಳನ್ನು ಮಾಡಲು ಎಕ್ಸ್‌ಪರ್ಟ್. ಇಲ್ಲಿ ತನಕ ಹಲವು ಸೂಪರ್ ಹೀರೋ ಸಿನಿಮಾ ಮಾಡಿ ಸೈ ಎನಿಸಿಕೊಂಡಿದೆ. ಈಗ ಪ್ರಭಾಸ್ ಜೊತೆಗೂ ಒಂದು ಸೂಪರ್ ಹೀರೋ ಸಿನಿಮಾ ಮಾಡಲು ತಯಾರಾಗಿದೆ. ಏಷಿಯಾದ ಸೂಪರ್ ಹೀರೋ ಬಗ್ಗೆ ಸಿನಿಮಾ ಮಾಡಲು ಯುನಿವರ್ಸಲ್ ಸ್ಟುಡಿಯೊ ತಯಾರಿ ನಡೆಸಿದೆ ಎನ್ನಲಾಗಿದೆ. ಇದು ಪ್ರಭಾಸ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

'ಬಾಹುಬಲಿ'ಯಂತಹ ಹಿಟ್ ಕೊಡಲಿಲ್ಲ ಪ್ರಭಾಸ್!
'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಯಾಕೊ ಮಂಕಾಗಿದ್ದಾರೆ. ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ, ಆದರೆ ಮಾಡುವ ಚಿತ್ರಗಳು ಪ್ರಭಾಸ್‌ಗೆ ನಿರೀಕ್ಷೆಯ ಮಟ್ಟದ ಯಶಸ್ಸು ತಂದುಕೊಡುವಲ್ಲಿ ಸೋಲುತ್ತಿವೆ. 'ಸಾಹೋ' ಚಿತ್ರ ಕೂಡ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ಸೋತಿದೆ. ಇನ್ನು 'ರಾಧೆ ಶ್ಯಾಮ್' ಚಿತ್ರ ಕೂಡ ಅಷ್ಟಕಷ್ಟೆ. ಹಾಗಾಗಿ ಈಗ ಮುಂದಿನ ಚಿತ್ರಗಳಿಗಾಗಿ ಪ್ರಭಾಸ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಸದ್ಯ ಸಾಲು, ಸಾಲು ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿ!
ರಾಧೆ ಶ್ಯಾಮ್ ಚಿತ್ರದ ಬಳಿಕ ಪ್ರಭಾಸ್ 'ಆದಿಪುರುಷ್' ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. ಇಗ ಇನ್ನೂ ಹೆಸರಿಡದ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ನಂತರ 'ಸ್ಪಿರಿಟ್' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರ ಮಧ್ಯೆ ಪ್ರಭಾಸ್ ಹಾಲಿವುಡ್ ಚಿತ್ರ ಕೂಡ ಪ್ರಕಟ ಆಗುವ ಸಾಧ್ಯತೆ ಇದೆ. ಆದರೆ ಅದು ಯಾವ ಸೂಪರ್ ಹೀರೋ ಚಿತ್ರ ಆಗಲಿದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











