ಫಸ್ಟ್ ಲುಕ್-ಟೈಟಲ್ ರಿವೀಲ್: ಪ್ರಭಾಸ್-ಪೂಜಾ ರೊಮ್ಯಾಂಟಿಕ್ ಪೋಸ್ ಗೆ ಅಭಿಮಾನಿಗಳು ಫಿದಾ
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಭಾರಿ ಕುತೂಹಲ ಮೂಡಿಸಿರುವ 20ನೇ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದ ಬಗ್ಗೆ ಯಾವುದೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ಸಿನಿಮಾದ ಟೈಟಲ್ ಸಹ ರಿವೀಲ್ ಮಾಡಿರಲಿಲ್ಲ. ಈಗಾಗಲೆ ಬಹುತೇಕ ಚಿತ್ರೀಕರಣ ಸಹ ಮುಗಿದಿದೆ. ಆದರೂ ಚಿತ್ರದ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು.
Recommended Video
ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾತಂಡ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಮಾಡಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದೆ. ಮುಂದೆ ಓದಿ...

'ರಾಧೆ ಶ್ಯಾಮ'ನಾಗಿ ಎಂಟ್ರಿ ಕೊಟ್ಟ ಪ್ರಭಾಸ್-ಪೂಜಾ
ಪ್ರಭಾಸ್ ಮುಂದಿನ ಸಿನಿಮಾದ ಟೈಟಲ್ ಏನಾಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೀಗ ಸಿನಿಮಾ ತಂಡ ಟೈಟಲ್ ರಿವೀಲ್ ಮಾಡಿ ಕುತೂಹಲ, ಕಾತರಕ್ಕೆ ತೆರೆ ಎಳೆದಿದೆ. ಪ್ರಭಾಸ್ 20ನೇ ಸಿನಿಮಾಗೆ 'ರಾಧೆ ಶ್ಯಾಮ್' ಎಂದು ಟೈಟಲ್ ಇಡಲಾಗಿದೆ.

ರೊಮ್ಯಾಂಟಿಕ್ ಲುಕ್ ನಲ್ಲಿ ಪೂಜಾ-ಪ್ರಭಾಸ್
ಪ್ರಭಾಸ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಚಿತ್ರದ ಟೈಟಲ್ ಅನೌನ್ಸ್ ಮಾಡುವ ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಪ್ರಭಾಸ್ ಮತ್ತು ಪೂಜಾ ರೊಮ್ಯಾಂಟಿಕ್ ಲುಕ್ ನಲ್ಲಿ ಪೋಸ್ ನೀಡಿರುವ ಫಸ್ಟ್ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಪ್ರಭಾಸ್ ಮತ್ತು ಪೂಜಾ ಲುಕ್ ಜೊತೆಗೆ ಬ್ಯಾಕ್ ಡ್ರಾಪ್ ಸಹ ಗಮನಸೆಳೆಯುತ್ತಿದೆ. ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ.

ನಾಲ್ಕು ಭಾಷೆಯಲ್ಲಿ ಬರ್ತಿದೆ ಸಿನಿಮಾ
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರ್ತಿದೆ. ಈಗಾಗಲೆ ನಾಲ್ಕು ಭಾಷೆಯ ಪೋಸ್ಟರ್ ರಿಲೀಸ್ ಆಗಿದೆ. ತೆಲುಗು ಜೊತೆಗೆ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಬಾಹುಬಲಿ ಸಿನಿಮಾ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹೋ ನಂತರ ಪ್ರಭಾಸ್ ಅಭಿನಿಸುತ್ತಿರುವ ಸಿನಿಮಾವಿದು.

ಪ್ರಭಾಸ್ ಪೋಸ್ಟ್
ಪೋಸ್ಟರ್ ಶೇರ್ ಮಾಡಿ ಪ್ರಭಾಸ್ "ಇದು ನಿಮಗಾಗಿ. ನೀವೆಲ್ಲರು ಇಷ್ಟಪಡುತ್ತೀರಾ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈಗಾಗಲೆ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಸಿನಿಮಾ ನೀಡಿರುವ ಪೂಜಾ ಮತ್ತೊಂದು ಸಕ್ಸಸ್ ಗೆ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ಮುರಳಿ ಶರ್ಮಾ, ಪ್ರಿಯದರ್ಶಿ, ತಮಿಳು ಹಾಸ್ಯನಟ ಸತ್ಯನ್, ಸಶಾ ಚೆಟ್ರಿ, ಕುನಾಲ್ ರಾಯ್ ಕಪೂರ್ ಮತ್ತು ಸಚಿನ್ ಖೆಡೇಕರ್ ಕಾಣಿಸಿಕೊಳ್ಳುತ್ತಿದ್ದಾರೆ.

ಜುಲೈ 10 ಪ್ರಭಾಸ್ ಗೆ ವಿಶೇಷವಾದ ದಿನ
ಜುಲೈ 10 ಪ್ರಭಾಸ್ ಮತ್ತು ಅಭಿಮಾನಿಗಳಿಗೆ ವಿಶೇಷವಾದ ದಿನ. ಯಾಕಂದ್ರೆ ಪ್ರಭಾಸ್ ಅಭಿನಯದ ಸೂಪರ್ ಹಿಟ್ ಬಾಹುಬಲಿ ಮೊದಲ ಭಾಗ ರಿಲೀಸ್ ಆದ ದಿನ. ಪ್ರಭಾಸ್ ಗೆ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಖಾತಿತಂದು ಕೊಟ್ಟದಿನವಿದು. ಈ ದಿನವನ್ನು ಪ್ರಭಾಸ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಈ ವಿಶೇಷ ದಿನದಂತೆ ರಾಧೆ ಶ್ಯಾಮ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.


Click it and Unblock the Notifications











