ಪ್ರಭಾಸ್-ದೀಪಿಕಾ ಚಿತ್ರದ ಕಥೆ ಏನು? ಅಪ್‌ಡೇಟ್ ನೀಡಿದ ನಾಗ್ ಅಶ್ವಿನ್

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸತತ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಸಲಾರ್', 'ಆದಿಪುರುಷ್', ನಾಗ್ ಅಶ್ವಿನ್ ಪ್ರಾಜೆಕ್ಟ್ ಹಾಗೂ 'ರಾಧೇ ಶ್ಯಾಮ್' ಚಿತ್ರಗಳ ಸಾಲಿನಲ್ಲಿದೆ.

Recommended Video

ಪ್ರಭಾಸ್ ಹೆಸರು ಹೇಳಿ ಭಾರಿ ಮೋಸ ಮಾಡಿದ ಖದೀಮರು | Filmibeat Kannada

ರಾಧೇ ಶ್ಯಾಮ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರಮಂದಿರಕ್ಕೆ ಬರಲು ತಯಾರಾಗುತ್ತಿದೆ. ಪ್ರಭಾಸ್ ಸಿನಿಮಾಗಳ ಪೈಕಿ ಮೊದಲು ಥಿಯೇಟರ್‌ಗೆ ಬರುವ ಚಿತ್ರ ಇದಾಗಿದೆ.

ಸಲಾರ್ ಚಿತ್ರ ಸಹ ಮುಹೂರ್ತ ಮಾಡಿಕೊಂಡಿದ್ದು, ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭಿಸಲಿದೆ. ಆದಿಪುರುಷ್ ಸಿನಿಮಾ ಕಾಸ್ಟಿಂಗ್‌ನಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಪ್ರಾರಂಭಿಸಲು ತಯಾರಿ ನಡೆಸಿದೆ. ಆದರೆ, ನಾಗ್ ಅಶ್ವಿನ್ ಪ್ರಾಜೆಕ್ಟ್‌ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿಲ್ಲ.

Prabhas 21 Update To Be Out On January 29 and February 26

ಇದೀಗ, ನಾಗ್ ಅಶ್ವಿನ್ ಜೊತೆಗಿನ ಸಿನಿಮಾ ಕುರಿತು ಮಾಹಿತಿ ಹೊರಬಿದ್ದಿದೆ. ಸ್ವತಃ ನಿರ್ದೇಶಕರೇ ಚಿತ್ರದ ಬಗ್ಗೆ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದಾರೆ. ಅಭಿಮಾನಿಯೊಬ್ಬರು ''ಸರ್ ಯಾವಾಗ ಅಪ್‌ಡೇಟ್ ಸಿಗಬಹುದು, ಸಂಕ್ರಾಂತಿ ಹಬ್ಬಕ್ಕಾ?'' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಾಗ್ ಅಶ್ವಿನ್ ''ಸರಿಯಾಗಿ ಹೇಳಬೇಕು ಅಂದ್ರೆ ಜನವರಿ 29 ಅಥವಾ ಫೆಬ್ರವರಿ 26'' ಎಂದು ಉತ್ತರಿಸಿದ್ದಾರೆ. ಇದೀಗ, ಜನವರಿ 29ಕ್ಕೆ ಏನು ಅಪ್‌ಡೇಟ್ ಸಿಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಪ್ರಭಾಸ್ ನಟಿಸಲಿರುವ 21ನೇ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವಾಗ ಶುರುವಾಗುತ್ತೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದು, ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಾಗ್ ಅಶ್ವಿನ್ ಈ ಹಿಂದೆ ಮಹಾನಟಿ ಚಿತ್ರವನ್ನು ನಿರ್ದೇಶಿಸಿದ್ದರು. ದಿವಂಗತ ಖ್ಯಾತ ನಟಿ ಸಾವಿತ್ರಿ ಅವರ ಬಯೋಪಿಕ್ ಚಿತ್ರದಲ್ಲಿ ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ, ಸಮಂತಾ ಸೇರಿದಂತೆ ಹಲವರು ನಟಿಸಿದ್ದರು.

More from Filmibeat

English summary
Telugu Actor Prabhas starrer 21st movie update to be out on January 29 and February 26 confirms director Nag Ashwin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X