For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಚಿತ್ರದಲ್ಲಿ ನಟಿಸುವ ಅವಕಾಶ: ಸೆಪ್ಟೆಂಬರ್ 12ಕ್ಕೆ ರೆಡಿಯಿರಿ

  |

  'ಬಾಹುಬಲಿ' ನಟ ಪ್ರಭಾಸ್ ಜೊತೆ ನಟಿಸುವ ಆಸೆ ಇದ್ಯಾ? ಅದಕ್ಕೊಂದು ಉತ್ತಮ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ. ಹೌದು, ಪ್ರಭಾಸ್ ಚಿತ್ರದಲ್ಲಿ ನಟಿಸಬೇಕು ಅಂದ್ರೆ ನೀವು ಹೈದರಾಬಾದ್‌ಗೆ, ಚೆನ್ನೈಗೆ ಅಥವಾ ಮುಂಬೈಗೆ ತೆರಳಬೇಕಿಲ್ಲ. ಬೆಂಗಳೂರಿನಿಂದಲೇ ಅವಕಾಶ ಪಡೆದುಕೊಳ್ಳಬಹುದು.

  ಸಾಹೋ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಆರಂಭಿಸಿರುವ ಪ್ರಭಾಸ್ ಪ್ರಸ್ತುತ ಪ್ರಶಾಂತ್ ನೀಲ್ ಜೊತೆ 'ಸಲಾರ್' ಆರಂಭಿಸಿದ್ದಾರೆ. ಸಲಾರ್ ಜೊತೆ ಜೊತೆಯಲ್ಲಿ 'ಆದಿಪುರುಷ್' ಸಿನಿಮಾದ ಚಿತ್ರೀಕರಣ ಸಹ ಮಾಡ್ತಿದ್ದಾರೆ. ಈ ಎರಡು ಚಿತ್ರಗಳನ್ನು ಏಕಕಾಲಕ್ಕೆ ಚಿತ್ರೀಕರಣ ಮಾಡ್ತಿರುವ ಡಾರ್ಲಿಂಗ್ ಕೈಯಲ್ಲಿ ಮತ್ತೆರಡು ಪ್ರಾಜೆಕ್ಟ್‌ಗಳಿವೆ ಎನ್ನುವುದು ವಿಶೇಷ.

  ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್

  ಈ ಎರಡು ಚಿತ್ರಗಳಿಗೂ ಮುಂಚೆ ರಾಧೆಶ್ಯಾಮ್ ಸಿನಿಮಾ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ರಾಧೆಶ್ಯಾಮ್ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬರ್ತಿದೆ. ಇದರ ನಡುವೆ ಈಗ #ಪ್ರಾಜೆಕ್ಟ್‌K ಹೆಸರಿನಲ್ಲಿ 21ನೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಮುಂದೆ ಓದಿ...

  ಆಡಿಷನ್ ಆರಂಭಿಸಿದ ನಾಗ್ ಅಶ್ವಿನ್

  ಆಡಿಷನ್ ಆರಂಭಿಸಿದ ನಾಗ್ ಅಶ್ವಿನ್

  ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಆಡಿಷನ್ ಮಾಡಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಪ್ರಭಾಸ್ 21ನೇ ಚಿತ್ರಕ್ಕಾಗಿ ಆಡಿಷನ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಕೊಚ್ಚಿನ ಹಾಗೂ ಪುದುಚೇರಿಯಲ್ಲಿ #ಪ್ರಾಜೆಕ್ಟ್K ಸಿನಿಮಾ ಆಡಿಷನ್ ನಡೆಯುತ್ತಿದೆ.

  ಹಾಲಿವುಡ್‌ಗೆ ಲಗ್ಗೆಯಿಟ್ಟ ಪ್ರಭಾಸ್: ಹಾರರ್ ಸಿನಿಮಾದಲ್ಲಿ ನಟನೆ?ಹಾಲಿವುಡ್‌ಗೆ ಲಗ್ಗೆಯಿಟ್ಟ ಪ್ರಭಾಸ್: ಹಾರರ್ ಸಿನಿಮಾದಲ್ಲಿ ನಟನೆ?

  ಬೆಂಗಳೂರಿನಲ್ಲಿ ಯಾವತ್ತು?

  ಬೆಂಗಳೂರಿನಲ್ಲಿ ಯಾವತ್ತು?

  ತೆಲುಗು ನಟ ಪ್ರಭಾಸ್ ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಅಥವಾ ಆಸಕ್ತಿ ಇದ್ದವರಿಗೆ ಸೆಪ್ಟೆಂಬರ್ 12 ರಂದು ಉತ್ತಮ ಅವಕಾಶ ಇದೆ. ಸಿಲಿಕಾನ್ ಸಿಟಿಯಲ್ಲಿ ಸೆಪ್ಟೆಂಬರ್ 12 ರಂದು ಆಡಿಷನ್ ನಡೆಸಲಾಗುತ್ತಿದೆ. ಅದೇ ದಿನ ಚೆನ್ನೈನಲ್ಲೂ ಆಡಿಷನ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 15 ರಂದು ಪುದುಚೇರಿ ಮತ್ತು ಕೊಚ್ಚಿನ್‌ನಲ್ಲಿ ಆಡಿಷನ್ ಮಾಡಲಾಗುತ್ತದೆ. ಅದಕ್ಕೂ ಮುಂಚೆ ನಿಮ್ಮ ಪ್ರೊಫೈಲ್ projectsouth@gmail.comಗೆ ಮೇಲ್ ಮಾಡಬಹುದು. ನಟ-ನಟಿಯರು, ಮಾರ್ಷಲ್ಸ್ ಆರ್ಟ್ಸ್ ಕಲಾವಿದರು, ಮಾಡೆಲ್ ಆಗಿರಬಹುದು. ಯಾವುದೇ ವಯಸ್ಸು, ಲಿಂಗ, ಭಾಷೆ, ರಾಷ್ಟ್ರೀಯತೆ, ಸಂಸ್ಕೃತಿಗೆ ಸೇರಿದವರು ಆಗಿರಬಹುದು.

  ಅಮಿತಾಭ್ ಬಚ್ಚನ್ ನಟನೆ

  ಅಮಿತಾಭ್ ಬಚ್ಚನ್ ನಟನೆ

  ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್ ಮೂಡಿಬರಲಿರುವ ಈ ಚಿತ್ರದಲ್ಲಿ ಬಿಗ್ ಬಿ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅಮಿತಾಭ್ ನಟಿಸುವುದು ಖಚಿತವಾಗಿದ್ದು, ಶೀಘ್ರದಲ್ಲಿ ಶೂಟಿಂಗ್ ಸಹ ಆರಂಭಿಸಲಿದ್ದಾರೆ.

  ದೀಪಿಕಾ ಪಡುಕೋಣೆ ನಾಯಕಿ

  ದೀಪಿಕಾ ಪಡುಕೋಣೆ ನಾಯಕಿ

  ಇದೇ ಮೊದಲ ಸಲ ಪ್ರಭಾಸ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ದೀಪಿಕಾ ಮತ್ತು ಅಮಿತಾಭ್ ಇಬ್ಬರು ನಾಗ್ ಅಶ್ವಿನ್ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದು, ನಿಗದಿಯಂತೆ ಚಿತ್ರೀಕರಣ ಶುರು ಮಾಡಲಿದ್ದಾರೆ. ಸಲಾರ್, ಆದಿಪುರುಷ್ ಚಿತ್ರೀಕರಣ ಮುಗಿಯುತ್ತಿದ್ದಂತೆ ನಾಗ್ ಅಶ್ವಿನ್ ಸಿನಿಮಾಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದೊಂದು ಸೈನ್ಸ್ ಫಿಕ್ಷನ್ ಚಿತ್ರ ಎನ್ನಲಾಗಿದೆ.

  ಹಾಲಿವುಡ್‌ನಿಂದ ಆಫರ್ ಬಂದಿದೆ

  ಹಾಲಿವುಡ್‌ನಿಂದ ಆಫರ್ ಬಂದಿದೆ

  ಈ ನಡುವೆ ಪ್ರಭಾಸ್‌ಗೆ ಹಾಲಿವುಡ್ ಸಂಸ್ಥೆಯಿಂದ ಆಫರ್ ಬಂದಿದೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಈಗಾಗಲೇ ಹಾರರ್ ಸಿನಿಮಾದ ಸ್ಕ್ರಿಪ್ಟ್ ಪ್ರಭಾಸ್‌ಗೆ ಕಳುಹಿಸಲಾಗಿದೆಯಂತೆ. ಈ ಸ್ಕ್ರಿಪ್ಟ್ ಓದಿದ ಮೇಲೆ ಇಷ್ಟವಾದರೂ ಮುಂದಿನ ವಿಚಾರಗಳನ್ನು ಚರ್ಚಿಸೋಣ ಎಂದು ತಿಳಿಸಿದೆಯಂತೆ. ಕಥೆ ಇಷ್ಟವಾದರೆ ಸಂಭಾವನೆ, ಶೂಟಿಂಗ್ ಪ್ಲಾನ್, ಒಪ್ಪಂದ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾತನಾಡೋಣ ಎಂದು ಹೇಳಿದ್ದಾರಂತೆ. ಹಾರರ್ ಸಿನಿಮಾಗಳ ಭಯ ವ್ಯಕ್ತಪಡಿಸಿರುವ ಪ್ರಭಾಸ್ ಈ ಚಿತ್ರವನ್ನು ಮಾಡ್ತಾರೆ ಎನ್ನುವ ನಂಬಿಕೆ ಇಲ್ಲ ಅಂತಿದ್ದಾರೆ ನೆಟ್ಟಿಗರು.

  English summary
  Prabhas 21st team is coming to your state. If you are an actor, model, dancer, martial artist, or anyone who likes to perform, come, be the Face of the Future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X