For Quick Alerts
  ALLOW NOTIFICATIONS  
  For Daily Alerts

  ನಟ ಪ್ರಭಾಸ್ ಕಡೆಯಿಂದ ಬಿಗ್ ಅನೌನ್ಸ್ ಮೆಂಟ್: 'ಅದಿಪುರುಷ'ನಾದ ಬಾಹುಬಲಿ ಸ್ಟಾರ್

  |

  ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ 'ರಾಧೆ ಶ್ಯಾಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ರಿಲೀಸ್ ಆಗುವ ಮೊದಲೆ ಪ್ರಭಾಸ್ 21ನೇ ಸಿನಿಮಾ ಸಹ ಅನೌನ್ಸ್ ಆಗಿದ್ದು, ಈ ಚಿತ್ರದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ಪ್ರಭಾಸ್ 22ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ.

  ಪ್ರಭಾಸ್ ಇಂದು (ಆಗಸ್ಟ್ 18) ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಹೇಳಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಏನಿರಬಹುದು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಭಾಸ್ ಆದಿಪುರುಷ ಆಗಲು ತಯಾರಾಗಿದ್ದಾರೆ. ಮುಂದೆ ಓದಿ..

  ಪ್ರಭಾಸ್ ಮತ್ತು ದೀಪಿಕಾ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿಪ್ರಭಾಸ್ ಮತ್ತು ದೀಪಿಕಾ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿ

  ಪ್ರಭಾಸ್ 22ನೇ ಸಿನಿಮಾ 'ಆದಿಪುರುಷ'

  ಪ್ರಭಾಸ್ 22ನೇ ಸಿನಿಮಾ 'ಆದಿಪುರುಷ'

  ಪ್ರಭಾಸ್ 'ಆದಿಪುರುಷ' ಎನ್ನುವ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಹೆಚ್ಚು ರಿವೀಲ್ ಮಾಡದ ಸಿನಿಮಾತಂಡ ಫಸ್ಟ್ ಲುಕ್ ಮಾತ್ರ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪೋಸ್ಟರ್ ನಲ್ಲಿ ಆಂಜನೇಯ ಹಾಗೂ ರಾವಣನ ಹತ್ತು ತಲೆಗಳು ಕಾಣಿಸುತ್ತಿದೆ. ಫಸ್ಟ್ ಲುಕ್ ಮೂಲಕ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿದೆ.

  ಓಂ ರಾವತ್ ನಿರ್ದೇಶನ

  ಓಂ ರಾವತ್ ನಿರ್ದೇಶನ

  ಅಂದ್ಹಾಗೆ ಚಿತ್ರಕ್ಕೆ ತನಾಜಿ ಸಿನಿಮಾ ಖ್ಯಾತಿಯ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಓಂ ನಿರ್ದೇಶನದ 3ನೇ ಸಿನಿಮಾ. ಈ ಮೊದಲು ನಟ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದರು. ಆದರೆ ಆ ಸಿನಿಮಾ ಕೊರೊನಾ ವೈರಸ್ ಹಾವಳಿಯ ಪರಿಣಾಮ ಸದ್ಯಕ್ಕೆ ಸ್ಥಗಿತವಾಗಿದೆ.

  <br />ಪ್ರಭಾಸ್ ಸಿನಿಮಾ ಖರೀದಿಸಲು ವಿತರಕರ ಹಿಂದೇಟು: ಕಾರಣವೇನು?
  ಪ್ರಭಾಸ್ ಸಿನಿಮಾ ಖರೀದಿಸಲು ವಿತರಕರ ಹಿಂದೇಟು: ಕಾರಣವೇನು?

  5 ಭಾಷೆಯಲ್ಲಿ ಬರ್ತಿದೆ ಸಿನಿಮಾ

  5 ಭಾಷೆಯಲ್ಲಿ ಬರ್ತಿದೆ ಸಿನಿಮಾ

  ಪ್ರಭಾಸ್ ಮತ್ತು ಓಂ ರಾವತ್ ಸಿನಿಮಾ ಮುಂದಿನ ಸೆಟ್ಟೇರಲಿದೆ. 2022ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಸಿನಿಮಾ ಹಿಂದಿ ಭಾಷೆ ಸೇರಿದ್ದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ಪ್ರಭಾಸ್ ಸಿನಿಮಾ ಕನ್ನಡದಲ್ಲಿಯೂ ಡಬ್ ಆಗಿ ತೆರೆಗೆ ಬರುತ್ತಿದೆ.

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಸಿನಿಮಾ

  ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಸಿನಿಮಾ

  ಪ್ರಭಾಸ್ 'ರಾಧೆ ಶ್ಯಾಮ' ಸಿನಿಮಾ ಬಳಿಕ 21ನೇ ಸಿನಿಮಾ ಶೂಟಿಂಗ್ ಸಹ ಮುಂದಿನ ವರ್ಷ ಪ್ರಾರಂಭವಾಗಲಿದೆ. ಅಂದರೆ ಆದಿಪುರುಷ ಮತ್ತು ಇನ್ನೂ ಹೆಸರಿಡದ 21ನೇ ಸಿನಿಮಾ ಒಂದೆ ವರ್ಷ ಚಿತ್ರೀಕರಣವಾಗಲಿದೆ. ಈ ನಡುವೆ ಪ್ರಭಾಸ್ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಪ್ರಭಾಸ್ ಎಲ್ಲಿಯೂ ಹೇಳಿಕೊಂಡಿಲ್ಲ.

  English summary
  Actor Prabhas 22nd movie title is Adipurush and first look release. He is team up with Tanhaji director Om Raut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X