For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 7ಕ್ಕೆ ನಟ ಪ್ರಭಾಸ್ ಕಡೆಯಿಂದ ಸಿಗ್ತಿದೆ ಗುಡ್ ನ್ಯೂಸ್

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಖ್ಯಾತ ನಟ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಪ್ರಭಾಸ್ ನನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಸಾಹೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಭಾಸ್ ಬಳಿಕ ಮತ್ತೆ ತೆರೆಮೇಲೆ ಮಿಂಚಿಲ್ಲ.

  ಇದೀಗ ಪ್ರಭಾಸ್ ಬಳಿ ಕೈತುಂಬ ಸಿನಿಮಾಗಳಿವೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್, ನಿರ್ದೇಶಕ ಓಂ ರಾವತ್ ಅವರ ಆದಿಪುರುಷ್ ಮತ್ತು ಇನ್ನು ಹೆಸರಿಡದ ನಿರ್ದೇಶಕ ನಾಗ್ ಅಶ್ವಿನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಭಾಸ್ ಮತ್ತೊಂದು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಪ್ರಭಾಸ್ 25ನೇ ಸಿನಿಮಾವನ್ನು ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಗುಲ್ಲಾಗಿದೆ. ಮುಂದೆ ಓದಿ..

  ಅಕ್ಟೋಬರ್ 7ಕ್ಕೆ ಪ್ರಭಾಸ್ ಹೊಸ ಸಿನಿಮಾ ಘೋಷಣೆ

  ಅಕ್ಟೋಬರ್ 7ಕ್ಕೆ ಪ್ರಭಾಸ್ ಹೊಸ ಸಿನಿಮಾ ಘೋಷಣೆ

  ಅಂದಹಾಗೆ ಪ್ರಭಾಸ್ 25ನೇ ಸಿನಿಮಾವನ್ನು ಇದೇ ತಿಂಗಳು ಅಕ್ಟೋಬರ್ 7ರಂದು ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಭಾಸ್ 25ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಮೂಲಗಳ ಪ್ರಕಾರ ಪ್ರಭಾಸ್ ಮುಂದಿನ ಸಿನಿಮಾಗೆ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಮತ್ತು ಸಿದ್ಧಾರ್ಥ್ ಆನಂದ್ ಹೆಸರುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪ್ರಭಾಸ್ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಅಕ್ಟೋಬರ್ 7ರಂದು ಬಹಿರಂಗವಾಗುವ ಸಾಧ್ಯತೆ ಇದೆ.

  ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್

  ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಭಾಸ್

  ಈ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಪ್ರಭಾಸ್ 25ನೇ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

  ಪ್ರಭಾಸ್ ಬಳಿ ಇರುವ ಸಿನಿಮಾಗಳು

  ಪ್ರಭಾಸ್ ಬಳಿ ಇರುವ ಸಿನಿಮಾಗಳು

  ಪ್ರಭಾಸ್ ಆದಿಪುರುಷ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ ಮುಂಬೈನಲ್ಲಿ ನಡೆಯುತ್ತಿದೆ. ಈ ಸಿನಿಮಾ ಜೊತೆಗೆ ಸಲಾರ್ ಸಿನಿಮಾ ಕೂಡ ಪ್ರಭಾಸ್ ಬಳಿ ಇದೆ. ಈ ಎರಡು ಸಿನಿಮಾಗಳ ಚಿತ್ರೀಕರಣ ಒಟ್ಟೊಟ್ಟಿಗೆ ನಡೆಯುತ್ತಿದೆ. ಇನ್ನು ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುತ್ತಿದೆ. ಜನವರಿ 14ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಪೂಜೆ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

  25ನೇ ಸಿನಿಮಾದ ಬಗ್ಗೆ ಹೆಚ್ಚಿದ ಕುತೂಹಲ

  25ನೇ ಸಿನಿಮಾದ ಬಗ್ಗೆ ಹೆಚ್ಚಿದ ಕುತೂಹಲ

  ಈ ಎಲ್ಲಾ ಸಿನಿಮಾಗಳ ಜೊತೆಗೆ ಪ್ರಭಾಸ್ 25ನೇ ಸಿನಿಮಾಗೆ ಸಿದ್ಧರಾಗಿದ್ದಾರೆ. ಈಗಾಗಲೇ ಪ್ರಭಾಸ್ ಬಳಿ ಇರುವ ಸಿನಿಮಾಗಳು ಒಂದಕ್ಕಿಂತ ಒಂದು ಕುತೂಹಲ ಹೆಚ್ಚಿಸಿವೆ. ಇನ್ನು 25ನೇ ಸಿನಿಮಾ ಯಾವುದು? ಯಾವ ನಿರ್ದೇಶಕ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈ ಬಗ್ಗೆ ತಿಳಿದುಕೊಳ್ಳಲು ಅಕ್ಟೋಬರ್ 7ರ ವರೆಗೂ ಕಾಯಲೇ ಬೇಕು.

  English summary
  Tollywood Actor Prabhas 25th film likely to announced on October 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X