For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಬಿಲ್ಲು ಹಿಡಿದಿದ್ದು ರಾಮ್‌ ಚರಣ್ ಹಿಡಿದಿದ್ದು ಒಂದೇ ಎಂದ ಫ್ಯಾನ್ಸ್!

  |

  ಸಿನಿಪ್ರೇಮಿಗಳು ಬಹಳ ದಿನಗಳಿಂದ ಕಾದು ಕೂತಿದ್ದ ಸಿನಿಮಾ 'ಆದಿಪುರುಷ್'. ಡಾರ್ಲಿಂಗ್ ಪ್ರಭಾಸ್ ಅಭಿನಯದ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾವಿದು. ಹಲವು ದಿನಗಳಿಂದ ಈ ಸಿನಿಮಾ ಅಪ್‌ಡೇಟ್‌ಗಾಗಿ ಡಾರ್ಲಿಂಗ್ ಫ್ಯಾನ್ಸ್ ಕಾದು ಕೂತಿದ್ದರು.

  ನವರಾತ್ರಿ ಸಂಭ್ರಮದ ಈ ಹೊತ್ತಲ್ಲಿ 'ಆದಿಪುರುಷ್' ತಂಡ ನಿನ್ನೆ (ಸೆಪ್ಟೆಂಬರ್ 30) ಪೋಸ್ಟರ್ ಒಂದನ್ನು ರಿಲೀಸ್ ಮಾಡಿತ್ತು. ಅದೇ ಪೋಸ್ಟರ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  RRR ಪೋಸ್ಟರ್‌ಗೆ 'ಆದಿಪುರುಷ್' ಹೋಲಿಕೆ

  'ಆದಿಪುರುಷ್' ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಪ್ರಭಾಸ್ ಲುಕ್ ಅನ್ನು RRR ಸಿನಿಮಾದ ರಾಮ್‌ ಚರಣ್ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಅದಕ್ಕೆ ಕಾರಣ RRR ಚಿತ್ರದ ಈ ಪೋಸ್ಟರ್.

  'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ಬಿಲ್ಲು ಹಿಡಿದು ನಿಂತ ಪೋಸ್ಟರ್‌ಗೂ, RRR ಚಿತ್ರದಲ್ಲಿ ಅಲ್ಲೂರಿ ಸೀತಾರಾಮ ರಾಜು ಲುಕ್‌ನಲ್ಲಿ ನಿಂತಿರೋ ರಾಮ್‌ ಚರಣ್ ಪಾತ್ರಕ್ಕೂ ಹೋಲಿಕೆ ಮಾಡೋಕೆ ಶುರು ಮಾಡಿದ್ದಾರೆ.

  ಎನ್‌ಟಿಆರ್‌ಗೂ ಹೋಲಿಕೆ ಮಾಡಿದ ನೆಟ್ಟಿಗರು

  'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತೇ ಇದೆ. ಟಾಲಿವುಡ್‌ನಲ್ಲಿ ಶ್ರೀ ರಾಮ ಪಾತ್ರದಲ್ಲಿ ಹಲವು ಸ್ಟಾರ್‌ಗಳು ಕಾಣಿಸಿಕೊಂಡಿದ್ದಾರೆ. ಆದರೆ, ಟಾಲಿವುಡ್‌ನ ಮೇರು ನಟ ಎನ್‌ಟಿಆರ್, ಶ್ರೀ ರಾಮನಾಗಿ ಕಂಡು ಮೆಚ್ಚುಗೆ ಪಡೆದಷ್ಟು ಯಾರೂ ಪಡೆದಿಲ್ಲ. ಈಗ ಪ್ರಭಾಸ್‌ ಲುಕ್ ಕಂಡ ಎನ್‌ಟಿಆರ್‌ಗೂ ಹೋಲಿಕೆ ಮಾಡುತ್ತಿದ್ದಾರೆ.

  Prabhas Adipurush Fist Look Is Like Alluri Seetharama Raju in the film RRR

  ಪ್ರಭಾಸ್ ಈ ಪೋಸ್ಟರ್‌ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಕ್ಕೂ ಚರ್ಚೆಯಾಗುತ್ತಿದೆ. ಪ್ರಭಾಸ್ 'ಆದಿಪುರುಷ್‌' ಚಿತ್ರದಲ್ಲಿ ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಹಾಗೆ ಕಾಣಿಸಿಕೊಂಡಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಆದರೆ, ಮಸಲ್ ಮ್ಯಾನ್ ಆಗಿ ಕಂಡಿದ್ದಾರೆ ಎಂದೂ ಕಮೆಂಟ್ ಮಾಡುತ್ತಿದ್ದಾರೆ.

  'ಆದಿಪುರುಷ್' ಟೀಸರ್‌ಗಾಗಿ ಕಾತರ

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಲುಕ್‌ಗೆ ಕಮೆಂಟ್‌ಗಳ ಸುರಿಮಳೆಯೇ ಸುರಿದಿದೆ. ಆದರೂ, ಟೀಸರ್ ಹಾಗೂ ಟ್ರೈಲರ್‌ಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಟೀಸರ್‌ ರಿಲೀಸ್ ಆದರೆ, ಪ್ರಭಾಸ್ ಅಸಲಿ ಲುಕ್ ಹೇಗಿರುತ್ತೆ ಅಂತ ನೋಡಬಹುದು ಅನ್ನೋದು ಲೆಕ್ಕಾಚಾರ.

  ಓಂ ರಾವತ್ ನಿರ್ದೇಶನದ 'ಆದಿಪುರುಷ್' ಸಿನಿಮಾದ ಟೀಸರ್ ಇದೇ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ನವರಾತ್ರಿ ಅಂಗವಾಗಿ ಅಯೋಧ್ಯೆಯಲ್ಲಿರೋ ಸಿನಿಮಾದ ಟೀಸರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

  English summary
  Fans Says Prabhas Adipurush First Look Is Like Alluri Seetharama Raju in the film RRR, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X