Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
1650 ಎಕರೆ ಅರಣ್ಯ ದತ್ತುಪಡೆದ ಬಾಹುಬಲಿ ಪ್ರಭಾಸ್!
ಸಿನಿಮಾ ನಟರು ಆನೆ, ಸಿಂಹ, ಹುಲಿಗಳನ್ನು ದತ್ತು ಪಡೆದು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ ನಟ ಪ್ರಭಾಸ್ ಈ ವಿಷಯದಲ್ಲಿ ತನ್ನ ಸಮಕಾಲೀನ ನಟರನ್ನು ಮೀರಿಸಿದ್ದಾರೆ.
Recommended Video
ಹೌದು, ಇತರ ನಾಯಕರು ಪ್ರಾಣಿಗಳನ್ನು ದತ್ತುಪಡೆಯುತ್ತಿದ್ದರೆ, ಬಾಹುಬಲಿ ಖ್ಯಾತಿಯ ಪ್ರಭಾಸ್, ಇಡೀಯ ಅರಣ್ಯವನ್ನೇ ದತ್ತುಪಡೆದಿದ್ದಾರೆ!
ಜಿಮ್
ಟ್ರೈನರ್
ಗೆ
ದುಬಾರಿ
ಬೆಲೆಯ
ಕಾರು
ಉಡುಗೊರೆ
ನೀಡಿದ
ನಟ
ಪ್ರಭಾಸ್
ಹೌದು, ಅದೂ ಸಣ್ಣ ಪ್ರದೇಶದ ಕಾಡಲ್ಲ, ಬರೋಬ್ಬರಿ 1650 ಎಕರೆ ವಿಸ್ತೀರ್ಣದ ದೊಡ್ಡ ಪ್ರದೇಶವುಳ್ಳ ಸಂರಕ್ಷಿತ ಅರಣ್ಯಪ್ರದೇಶವನ್ನು ದತ್ತು ಪಡೆದಿರುವ ಪ್ರಭಾಸ್, ಆ ಸಂರಕ್ಷಿತ ಅರಣ್ಯವನ್ನು ಅಭಿವೃದ್ಧಿಪಡಿಸಲು ಪಣತೊಟ್ಟಿದ್ದಾರೆ. ಪ್ರಭಾಸ್ ರ ಈ ನಡೆ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

ಹೈದರಾಬಾದ್ ಸಮೀಪದ ಕಾಜಿಹಳ್ಳಿ ಬಳಿಯ ಅರಣ್ಯ
ಹೈದರಾಬಾದ್ ಸಮೀಪದ ಕಾಜಿಪಲ್ಲಿ ಎಂಬಲ್ಲಿನ ಸಂರಕ್ಷಿತ ಅರಣ್ಯಪ್ರದೇಶವನ್ನು ಪ್ರಭಾಸ್ ದತ್ತು ಪಡೆದಿದ್ದಾರೆ. ಈ ಸಂರಕ್ಷಿತ ಅರಣ್ಯ ಪ್ರದೇಶವನ್ನು ಸಸ್ಯವೈವಿಧ್ಯ ಪ್ರದೇಶವನ್ನಾಗಿ ಮಾಡುವ ಗುರಿ ಪ್ರಭಾಸ್‌ಗೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿದ್ದಾರೆ.
ಪ್ರಭಾಸ್
ಚಿತ್ರದಲ್ಲಿ
ನಟಿಸುತ್ತಿರುವ
ದೀಪಿಕಾ
ಅಡ್ವಾನ್ಸ್
ತೆಗೆದುಕೊಳ್ಳಲು
ನಿರಾಕರಿಸಿದ್ದೇಕೆ?

ಔಷಧೀಯ ಗುಣವುಳ್ಳ ಸಸಿಗಳನ್ನು ನೆಡುವ ಉದ್ದೇಶ
ಪಕ್ಷಿ, ಪ್ರಾಣಿಗಳನ್ನು ಆಕರ್ಷಿಸುವ ವಿವಿಧ ಬಗೆಯ ಹಣ್ಣುಗಳ ಮರಗಳು, ಎತ್ತರದ ಮರಗಳು ಜೊತೆಗೆ ಔಷಧೀಯ ಗುಣವುಳ್ಳ ಸಸಿಗಳನ್ನು ಬೆಳೆಸುವ ನೀಲನಕ್ಷೆ ಈಗಾಗಲೇ ತಯಾರಿದೆಯಂತೆ. ಇದರ ಜೊತೆಗೆ ಕೊಳಗಳನ್ನು, ಕಾಲುಹಾದಿಗಳನ್ನು ನಿರ್ಮಿಸಲು ಸಹ ಯೋಜನೆ ಹಾಕಲಾಗಿದೆ.

ಜಿಮ್ ಟ್ರೈನರ್‌ಗೆ ಕಾರು ಉಡುಗೊರೆ
ಕೊರೊನಾ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ಹಣ ಸಹಾಯವನ್ನು ಮಾಡಿದ ನಟ ಪ್ರಭಾಸ್, ಕೆಲವು ದಿನಗಳ ಹಿಂದಷ್ಟೆ ತನ್ನ ಜಿಮ್ ಟ್ರೈನರ್‌ಗೆ ಭಾರಿ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈಗ ಅರಣ್ಯ ಅಭಿವೃದ್ಧಿಗೆ ಕೈ ಹಾಕಿದ್ದಾರೆ.
'ಬಾಹುಬಲಿ'
ಪ್ರಭಾಸ್
ಗೆ
ವಿಲನ್
ಆದ
ಬಾಲಿವುಡ್
ನಟ
ಸೈಫ್
ಅಲಿ
ಖಾನ್

ಸಿನಿಮಾಗಳಲ್ಲಿ ಪ್ರಭಾಸ್ ಸಖತ್ ಬ್ಯುಸಿ
ಸಿನಿಮಾದಲ್ಲಿಯೂ ಸಖತ್ ಬ್ಯುಸಿಯಾಗಿರುವ ಪ್ರಭಾಸ್, ರಾಧೆ-ಶ್ಯಾಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಂತರ ದೀಪಿಕಾ ಪಡುಕೋಣೆ ಜೊತೆಗೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ನಂತರ ಭಾರಿ ಬಜೆಟ್ ಸಿನಿಮಾ ಆದಿಪುರುಶ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್.