For Quick Alerts
  ALLOW NOTIFICATIONS  
  For Daily Alerts

  ವಿಶೇಷ ದಿನದಂದು ಅದ್ದೂರಿಯಾಗಿ ಸೆಟ್ಟೇರುತ್ತಿದೆ ಪ್ರಭಾಸ್-ದೀಪಿಕಾ ಸಿನಿಮಾ

  |

  ಟಾಲಿವುಡ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ ಘೋಷಣೆಯಾಗಿ ವರ್ಷದ ಮೇಲಾಗಿದೆ. ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇನ್ನು ಹೆಸರಿಡದ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವುದು ಅಭಿಮಾನಿಗಳ ಪ್ರಶ್ನೆ.

  ಈ ಸಿನಿಮಾ ಬಳಿಕ ಅನೌನ್ಸ್ ಆದ ಚಿತ್ರಗಳಲ್ಲಿ ಪ್ರಭಾಸ್ ಸದ್ಯ ಬ್ಯುಸಿಯಾಗಿದ್ದಾರೆ. ಸಲಾರ್ ಮತ್ತು ಆದಿಪುರುಷ್ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದ್ದು, ಪ್ರಭಾಸ್ ಈ ಎರಡು ಸಿನಿಮಾಗಳ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಈ ನಡುವೆ ನಾಗ್ ಅಶ್ವಿನ್ ಸಿನಿಮಾ ಕತೆ ಏನಾಯಿತು? ಎನ್ನುವ ಗೊಂದಲ ಪ್ರೇಕ್ಷಕರಲ್ಲಿದೆ.

  ಕೋವಿಡ್ ಎಫೆಕ್ಟ್: ಕ್ವಾರಂಟೈನ್ ಆದ ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್ಕೋವಿಡ್ ಎಫೆಕ್ಟ್: ಕ್ವಾರಂಟೈನ್ ಆದ ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್

  ಈಗಾಗಲೇ ಅಂದುಕೊೆಂಡಂತೆ ಆಗಿದ್ದರೆ ಸಿನಿಮಾ ಜೂನ್ ಅಥವಾ ಜುಲೈನಲ್ಲಿ ಸೆಟ್ಟೇರಬೇಕಿತ್ತು. ಆದರೆ ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಲಾಂಚ್ ಮತ್ತೆ ಮುಂದಕ್ಕೆ ಹೋಗಿದ್ದು, ವಿಶೇಷ ದಿನದಂದು ಅದ್ದೂರಿಯಾಗಿ ಲಾಂಚ್ ಮಾಡುವ ಪ್ಲಾನ್ ಮಾಡಿದೆ ಸಿನಿಮಾತಂಡ.

  ದೀಪಾವಳಿ ಹಬ್ಬದ ಸಮಯದಲ್ಲಿ ದೀಪಿಕಾ ಮತ್ತು ಪ್ರಭಾಸ್ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಚಿತ್ರೀಕರಣ ಅದಕ್ಕೂ ಮೊದಲೇ ಪ್ರಾರಂಭವಾಗಲಿದೆಯಂತೆ. ಪ್ರಭಾಸ್ ಸಲಾರ್ ಮತ್ತು ಆದಿಪುರುಷ್ ಎರಡು ಸಿನಿಮಾಗಳಲ್ಲಿ ಒಂದು ಚಿತ್ರೀಕರಣ ಮುಗಿದ ಬಳಿಕ ನಾಗ್ ಅಶ್ವಿನ್ ಜೊತೆ ಸಿನಿಮಾ ಪ್ರಾರಂಭಿಸಲಿದ್ದಾರೆ.

  ದಯವಿಟ್ಟು ಡಾಕ್ಟರ್ ಹೇಳೋದನ್ನ ಕೇಳಿ ನಿರ್ಲಕ್ಷ್ಯ ಮಾಡ್ಬೇಡಿ ಅಂದ್ರು ನಿನಾಸಂ ಸತೀಶ್ | Filmibeat Kannada

  ಸದ್ಯ ಎರಡನೇ ಅಲೆ ಹೆಚ್ಚಾದ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಹಾಗಾಗಿ ಈ ಎರಡು ಸಿನಿಮಾಗಳ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಸಲಾರ್ ಮತ್ತು ಆದಿಪುರುಷ್ ಜೊತೆಗೆ ರಾಧೆ ಶ್ಯಾಮ್ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗುತ್ತಿದೆ.

  English summary
  Tollywood Actor Prabhas and Deepika padukone's new movie likely to launch in this Deepawali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X