ಪ್ರಭಾಸ್ ಸುಗ್ಗಿ ಸರ್‌ಪ್ರೈಸ್: ಡಾರ್ಲಿಂಗ್ ಆ ಗುಟ್ಟು ರಟ್ಟಾಗುವ ಸಮಯ ಬಂತು!

ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ 2ನೇ ವಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ಗಳಿಕೆ 500 ಕೋಟಿ ರೂ. ಗಡಿ ದಾಟಿದೆ. ಶಾರುಖ್ ಖಾನ್ 'ಡಂಕಿ' ಚಿತ್ರಕ್ಕೂ 'ಸಲಾರ್' ಫೈಟ್ ಕೊಡುತ್ತಿದ್ದಾನೆ. ಪ್ರಶಾಂತ್ ನೀಲ್ ಟೇಕಿಂಗ್, ಪ್ರಭಾಸ್ ಪರ್ಫಾರ್ಮನ್ಸ್ ನೋಡಿದ ಸಿನಿರಸಿಕರು ಥ್ರಿಲ್ಲಾಗಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಖಾತೆಗೆ ಮತ್ತೊಂದು ಹಿಟ್ ಸೇರಿಕೊಂಡಿದೆ.

'ಸಲಾರ್ ಪಾರ್ಟ್-1 ಸೀಸ್‌ಫೈರ್' ಸಕ್ಸಸ್ ಬೆನ್ನಲ್ಲೇ 'ಸಲಾರ್- ಶೌರ್ಯಾಂಗ ಪರ್' ನೋಡಲು ಸಿನಿರಸಿಕರು ಕಾಯುವಂತಾಗಿದೆ. ಎರಡನೇ ಭಾಗದ ಬಗ್ಗೆ ಕುತೂಹಲ ಮೂಡಿಸಿ ಪ್ರಶಾಂತ್ ನೀಲ್ ಕಥೆ ಮುಗಿಸಿದ್ದಾರೆ. ಸಾಕಷ್ಟು ಪ್ರಶ್ನೆಗಳನ್ನು ಮೊದಲ ಭಾಗದಲ್ಲಿ ಹುಟ್ಟುಹಾಕಿ 2ನೇ ಭಾಗಕ್ಕೆ ಪ್ರೇಕ್ಷಕರನ್ನು ಸಿದ್ಧಪಡಿಸಿದ್ದಾರೆ. ಶೌರ್ಯಾಂಗ ಪರ್ವ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Prabhas and director Maruthi Films First Look, Title For Sankranthi

ಸದ್ಯ ಪ್ರಭಾಸ್ ಮತ್ತೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಬಂಡವಾಳದ ಲೆಕ್ಕ ಹಾಕದೇ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಕಮಲ್ ಹಾಸನ್, ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಈ ಸಿನಿಮಾ ಬಳಿಕ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಸದ್ದಿಲ್ಲದೇ ಪ್ರಭಾಸ್ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾರುತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಹಾರರ್ ಕಾಮಿಡಿ ಸಿನಿಮಾ ಎನ್ನಲಾಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ತೆಲುಗಿನಲ್ಲಿ ಮಾತ್ರ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಾಕಷ್ಟು ಚಿತ್ರೀಕರಣ ಸಹ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಹೊರ ಬರದಂತೆ ಚಿತ್ರತಂಡ ನೋಡಿಕೊಂಡಿದೆ.

ಅಂತೂ ಇಂತೂ ಪ್ರಭಾಸ್- ಮಾರುತಿ ಜೋಡಿಯ ಹೊಸ ಸಿನಿಮಾ ಸೀಕ್ರೆಟ್ ರಿವೀಲ್ ಆಗುವ ಸಮಯ ಬಂದಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಸಮೇತ ಟೈಟಲ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. "ಡೈನೋಸಾರ್ ಸಂಪೂರ್ಣವಾಗಿ ಡಾರ್ಲಿಂಗ್ ಆಗಿ ರೂಪಾಂತರಗೊಂಡಿದೆ" ಎಂದು ಬರೆದು ಥೀಮ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಪೀಪಲ್ ಮೀಡಿಯಾ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಹಾಟ್ ಬ್ಯೂಟಿ ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ರಾಜಾ ಡೀಲಕ್ಸ್' ಎನ್ನುವ ಟೈಟಲ್ ಇಟ್ಟಿದ್ಧಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದೇ ಟೈಟಲ್ ಘೋಷಣೆ ಆಗುತ್ತಾ ಅಥವಾ ಹೊಸ ಟೈಟಲ್ ಬರುತ್ತಾ? ಪ್ರಭಾಸ್ ಲುಕ್ ಹೇಗಿರಲಿದೆ ಎನ್ನುವುದಕ್ಕೆ ಉತ್ತರ ಸುಗ್ಗಿ ಸಂಭ್ರಮದಲ್ಲಿ ಸಿಗಲಿದೆ.

Prabhas and director Maruthi Films First Look, Title For Sankranthi

ಪ್ರಭಾಸ್ ಕಾಮಿಡಿ ಟೈಮಿಂಗ್ ಹೈಲೈಟ್ ಮಾಡಿ ನಿರ್ದೇಶಕ ಮಾರುತಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಪ್ರಭಾಸ್ 'ಮಿ. ಪರ್ಫೆಕ್ಟ್', 'ಡಾರ್ಲಿಂಗ್' ರೀತಿ ಫನ್ ಎಂಟರ್‌ಟೈನರ್ ಸಿನಿಮಾಗಳು ಇತ್ತೀಚೆಗೆ ಮಾಡಲಿಲ್ಲ. ಆ ಕೊರಗನ್ನು ಈ ಸಿನಿಮಾ ತೀರಿಸುತ್ತದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಬರೀ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವ ಪ್ರಭಾಸ್ ಈ ಚಿತ್ರ ಒಪ್ಪಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಮಾರುತಿ ನಿರ್ದೇಶನದ ಇತ್ತೀಚಿನ ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಆತನೊಟ್ಟಿಗೆ ಸಿನಿಮಾ ಮಾಡಬೇಡಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಮಾರುತಿ ನಿರ್ದೇಶನದಲ್ಲಿ ಸಿನಿಮಾ ನೋಡಲ್ಲ ಎಂದಿದ್ದರು. ಅದೇ ಕಾರಣಕ್ಕೆ ಈ ಸಿನಿಮಾ ಮುಹೂರ್ತದ ವಿಚಾರವನ್ನು ಗುಟ್ಟಾಗಿ ಇಟ್ಟು ಗುಟ್ಟಾಗಿಯೇ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ ಆಗೊಮ್ಮೆ ಈಗೊಮ್ಮೆ ಸೆಟ್‌ನಿಂದ ಮೇಕಿಂಗ್ ಸ್ಟಿಲ್ಸ್ ಲೀಕ್ ಆಗಿತ್ತು.

ಕಲ್ಕಿ, ಮಾರುತಿ ನಿರ್ದೇಶನದ ಸಿನಿಮಾಗಳ ಜೊತೆಗೆ ಪ್ರಭಾಸ್ 'ಸಲಾರ್'-2 ಕೂಡ ಮಾಡಬೇಕಿದೆ. ಇದೆಲ್ಲದರ ನಡುವೆ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಸಿನಿಮಾ ಘೋಷಣೆ ಆಗಿದೆ. 'ಅನಿಮಲ್' ಸಕ್ಸಸ್ ಬೆನ್ನಲ್ಲೇ ವಂಗಾ ಆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫೀಸರ್ ಪಾತ್ರ ಮಾಡಲಿದ್ದಾರೆ.

More from Filmibeat

English summary
Prabhas and Maruthi movie First Look and Title will be unveiled on Sankranthi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X