For Quick Alerts
  ALLOW NOTIFICATIONS  
  For Daily Alerts

  ನವರಾತ್ರಿಗೆ ಶ್ರೀರಾಮನ ಅವತಾರವತ್ತಿರೋ ಪ್ರಭಾಸ್ 'ಆದಿಪುರುಷ್' ಟೀಸರ್: ಫೈನಲ್ ಆಯ್ತು ಡೇಟ್!

  |

  ದೇಶದೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಜೋರಾಗಿ ಆರಂಭ ಆಗಿದೆ. ಇಂದಿನಿಂದ (ಸೆಪ್ಟೆಂಬರ್ 26) ದಸರಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇನ್ನೊಂದು ಕಡೆ ಭಾರತೀಯ ಚಿತ್ರರಂಗ ಕೂಡ ನವರಾತ್ರಿ ಹಬ್ಬಕ್ಕೆ ಸಜ್ಜಾಗಿ ನಿಂತಿದೆ. ಬಿಗ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.

  ಮತ್ತೊಂದ್ಕಡೆ ಬೇರೆ ಬೇರೆ ಸಿನಿಮಾಗಳು ಟೀಸರ್, ಸಾಂಗ್ ರಿಲೀಸ್ ಮಾಡುವುದಕ್ಕೂ ತುದಿಗಾಲಲ್ಲಿ ನಿಂತಿವೆ. ಇದರಲ್ಲಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಆದಿಪುರುಷ್ ಸಿನಿಮಾ ಕೂಡ ಮುಂಚೂಣಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಟೀಸರ್‌ ರಿಲೀಸ್ ಬಗ್ಗೆ ಸದ್ದು ಮಾಡುತ್ತಲೇ ಇತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.

  ಪ್ರಭಾಸ್ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಯೋಗಿ ಆದಿತ್ಯನಾಥ್!ಪ್ರಭಾಸ್ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಯೋಗಿ ಆದಿತ್ಯನಾಥ್!

  ಬಾಲಿವುಡ್‌ ಅಂಗಳದಿಂದ ಪ್ರಭಾಸ್ ಅಭಿಮಾನಿಗಳು ಖುಷಿ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಆದಿಪುರುಷ್ ಟೀಸರ್ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಹೀಗಾಗಿ ಈ ಬಾರಿ ಡಾರ್ಲಿಂಗ್ ಅಭಿಮಾನಿಗಳು ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ.

  ಆದಿಪುರುಷ್ ಟೀಸರ್‌ಗೆ ಮುಹೂರ್ತ

  ಆದಿಪುರುಷ್ ಟೀಸರ್‌ಗೆ ಮುಹೂರ್ತ

  'ಆದಿಪುರುಷ್' ಸಿನಿಮಾದಲ್ಲಿ ಶ್ರೀರಾಮನ ಅವತಾರವೆತ್ತಿರೋ ಪ್ರಭಾಸ್ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿರೋದು ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಡಾರ್ಲಿಂಗ್ ಅಭಿಮಾನಿಗಳು ಈ ಟೀಸರ್‌, ಪೋಸ್ಟ್ ಬಿಡುಗಡೆ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ, ನಿರ್ದೇಶಕ ಓಂ ರಾವತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ಕೊನೆಗೂ ಖುಷಿ ಪಡುವಂತಹ ಸುದ್ದಿಯನ್ನು ನೀಡಿದ್ದಾರೆ. 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ದಿನವನ್ನು ರಿವೀಲ್ ಮಾಡಲಾಗಿದೆ. ನವರಾತ್ರಿಗೆ ಅಕ್ಟೋಬರ್ 2 ರಂದು 'ಆದಿಪುರುಷ್' ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

  'ಸಲಾರ್' ಸೆಟ್ಟಿನಲ್ಲಿ ಡಾರ್ಲಿಂಗ್ ಪ್ರಭಾಸ್ ರಗಡ್ ಲುಕ್: ಮತ್ತೊಂದು ಫೋಟೊ ಲೀಕ್!'ಸಲಾರ್' ಸೆಟ್ಟಿನಲ್ಲಿ ಡಾರ್ಲಿಂಗ್ ಪ್ರಭಾಸ್ ರಗಡ್ ಲುಕ್: ಮತ್ತೊಂದು ಫೋಟೊ ಲೀಕ್!

  ಆಯೋಧ್ಯದಲ್ಲಿ 'ಆದಿಪುರುಷ್' ಟೀಸರ್

  ಆಯೋಧ್ಯದಲ್ಲಿ 'ಆದಿಪುರುಷ್' ಟೀಸರ್

  ಬಹು ನಿರೀಕ್ಷೆಯ ಸಿನಿಮಾ 'ಆದಿಪುರುಷ್' ಟೀಸರ್‌ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಟೀಸರ್ ರಿಲೀಸ್ ಮಾಡೋಕೆ ಚಿತ್ರತಂಡ ಸಜ್ಜಾಗಿದೆ. ನವರಾತ್ರಿ ವೇಳೆ ಅಯೋಧ್ಯದಲ್ಲಿ 'ಆದಿಪುರುಷ್' ಸಿನಿಮಾದ ಟೀಸರ್ ಚಿತ್ರತಂಡ ನಿರ್ಧರಿಸಿರೋ ಬಗ್ಗೆ ವರದಿಯಾಗಿದೆ. ಶ್ರೀರಾಮ ಆಯೋಧ್ಯದಲ್ಲಿ ಹುಟ್ಟಿದ್ದಾಗಿ ನಂಬಿಕೆ ಇದೆ. ಹೀಗಾಗಿ ಧಾರ್ಮಿಕ ನಗರದಿಂದಲೇ 'ಆದಿಪುರುಷ್' ಪ್ರಚಾರವನ್ನು ಆರಂಭ ಮಾಡಲು ಚಿತ್ರತಂಡ ನಿರ್ಧರಿಸಿದೆ.

  'ಆದಿಪುರುಷ್' ಹೈಲೈಟ್ ಏನು?

  'ಆದಿಪುರುಷ್' ಹೈಲೈಟ್ ಏನು?

  'ಆದಿಪುರುಷ್' ಸಿನಿಮಾ ಬಗ್ಗೆ ನಿರ್ದೇಶಕ ಓಂ ರಾವತ್ ಈಗಾಗಲೇ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. " ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಕೆಲಸ ನಡೆಯುತ್ತಿದೆ. ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ಇಬ್ಬರೂ ತಮ್ಮ ಪಾತ್ರಗಳಿಗಾಗಿ ಸಾಕಷ್ಟು ಬದಲಾಗಿದ್ದಾರೆ. ಈ ಸಿನಿಮಾ ಸಿಕ್ಕಾಪಟ್ಟೆ ಆಕ್ಷನ್ ಕೂಡ ಸೇರಿಕೊಂಡಿದೆ. ಕೃತಿ ಸನನ್ ಹಾಗೂ ಪ್ರಭಾಸ್ ಇಬ್ಬರನ್ನೂ ತೆರೆಮೇಲೆ ನೋಡಿದರೆ ಮೈ ಜುಂ ಎನ್ನುತ್ತೆ. ಸದ್ಯಕ್ಕೆ ಸಿನಿಮಾ ಬಗ್ಗೆ ಹೆಚ್ಚೇನು ರಿವೀಲ್ ಮಾಡಲು ಸಾಧ್ಯವಿಲ್ಲ." ಎಂದು ಮಾಹಿತಿಯನ್ನು ನೀಡಿದ್ದರು. ಈ ಕಾರಣಕ್ಕೆ ಟೀಸರ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

  ಕೃತಿ-ಪ್ರಭಾಸ್ ರೂಮರ್

  ಕೃತಿ-ಪ್ರಭಾಸ್ ರೂಮರ್

  'ಆದಿಪುರುಷ್' ಸಿನಿಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ, ಸೀತೆಯಾಗಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಬಾಲಿವುಡ್‌ನಲ್ಲಿ ಪ್ರಭಾಸ್ ಹಾಗೂ ಕೃತಿ ಸನನ್ ಡೇಟಿಂಗ್ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

  English summary
  Prabhas And Kriti Sanon Starrer Adipurush Teaser Will Be Releasing On October 2nd, Know More.
  Monday, September 26, 2022, 15:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X