'ದಿ ರಾಜಾಸಾಬ್' ಆದ ನಟ ಪ್ರಭಾಸ್: ರೋಮ್ಯಾಂಟಿಕ್ ಹಾರರ್ ಸಿನಿಮಾದ ಫಸ್ಟ್ ಲುಕ್ ರಿವೀಲ್
ಪೊಂಗಲ್ ಮತ್ತು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆಲುಗು ಮತ್ತು ತಮಿಳು ಸಿನಿರಂಗದಿಂದ ಸಾಲು ಸಾಲು ಸಿನಿಮಾ ಬಿಡುಗಡೆ ಜೊತೆಗೆ ಹೊಸ ಸಿನಿಮಾಗಳ ಅಪ್‌ಡೇಟ್ ಕೂಡ ಸಿಗುತ್ತಿದೆ. 'ಸಲಾರ್' ಸಕ್ಸಸ್‌ನಲ್ಲಿರುವ ನಟ ಪ್ರಭಾಸ್ ಅವರ ಮುಂಬರುವ ಹೊಸ ರೋಮ್ಯಾಂಟಿಕ್ - ಹಾರರ್ ಚಿತ್ರಕ್ಕೆ 'ದಿ ರಾಜಾ ಸಾಬ್' ಎಂದು ಹೆಸರಿಡಲಾಗಿದೆ.
ಸಂಕ್ರಾಂತಿ ಹಬ್ಬದ ಶುಭ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್ ಕಪ್ಪು ಶರ್ಟ್ ಮತ್ತು ಕಲರ್‌ಫುಲ್ ಧೋತಿ ಧರಿಸಿ, ಸಕತ್ ಸ್ಟೆಪ್ ಹಾಕುತ್ತಿರುವಂತೆ ಕಾಣಿಸುತ್ತಿದೆ. ಪ್ರಭಾಸ್ ಬ್ಯಾಗ್ರೌಂಡ್‌ನಲ್ಲಿ ಪಟಾಕಿ ಸಿಡಿಯುತ್ತಿದ್ದು, ಖಾಲಿ ಬೀದಿಯಲ್ಲಿ ಮುಗುಳ್ನಗುತ್ತಾ ನಡೆಯುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ 'ರಾಜಾ ಸಾಬ್' ಆಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಮಾರುತಿ ನಟ ಪ್ರಭಾಸ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಅಧಿಕೃತವಾಗಿದೆ. ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಭಾಸ್, "ಈ ಹಬ್ಬದ ಸೀಸನ್‌ನಲ್ಲಿ 'ದಿ ರಾಜಾ ಸಾಬ್' ಫಸ್ಟ್ ಲುಕ್ ಅನ್ನು ಪ್ರಸ್ತುತಪಡಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ಖುಷಿ ಮತ್ತು ಸಂತೋಷವನ್ನು ಸಿಗಲಿ!" ಎಂದು ಸಂಕ್ರಾತಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ನಿರ್ದೇಶಕ ಮಾರುತಿ ಮತ್ತು ನಿರ್ಮಾಣ ಸಂಸ್ಥರ ಪೀಪಲ್ ಮೀಡಿಯಾ ಫ್ಯಾಕ್ಟರಿಯನ್ನು ಟ್ಯಾಗ್ ಮಾಡಿದ್ದಾರೆ.
'ದಿ ರಾಜಾ ಸಾಬ್' ಸಿನಿಮಾದ ಫಸ್ಟ್ ಲುಕ್ ಅನ್ನು ನಟ ಪ್ರಭಾಸ್ ಅವರ ಹುಟ್ಟೂರಾದ ಭೀಮಾವರಂನ ವೆಂಪಕಾಸಿ ಕೋಡಿ ಪಾಂಡೆಂ ಬರಿಯಲ್ಲಿ ಡಿಜಿಟಲ್ ಕಟೌಟ್ ಅನಾವರಣ ಮಾಡಲಾಗಿದೆ. ಪ್ರಭಾಸ್ ಅಭಿಮಾನಿಗಳು ಪೋಸ್ಟರ್ ಅನ್ನು ಶೇರ್ ಮಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಭಾಸ್ ಅವರನ್ನು ಹೊಸ ಗೆಟಪ್‌ನಲ್ಲಿ ನೋಡುವ ಆಸೆಯಲ್ಲಿದ್ದಾರೆ.
'ದಿ ರಾಜಾ ಸಾಬ್'
'ದಿ ರಾಜಾ ಸಾಬ್' ಚಿತ್ರವನ್ನು ಮಾರುತಿ ದಾಸರಿ ನಿರ್ದೇಶಿಸಿದ್ದಾರೆ. ಇದು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಟಿಜಿ ವಿಶ್ವ ಪ್ರಸಾದ್ ನಿರ್ಮಾಪಕರಾಗಿ ಮತ್ತು ವಿವೇಕ್ ಕುಚಿಬೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ತಮನ್ ಎಸ್ ಸಂಗೀತ ಸಂಯೋಜಿಸುತ್ತಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಾಜಾ ಸಾಬ್ ಬಿಡುಗಡೆಯಾಗಲಿದೆ.
ನಿರ್ದೇಶಕ ಮಾರುತಿ ಅವರು ಹೇಳುವಂತೆ, "ದಿ ರಾಜಾ ಸಾಬ್" ಇಲ್ಲಿಯವರೆಗಿನ ನನ್ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಭಾಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯೊಂದಿಗೆ ಕೆಲಸ ಮಾಡುವುದು ಚಲನಚಿತ್ರ ನಿರ್ದೇಶಕನಾಗಿ ನನಗೆ ಗೌರವ ಮತ್ತು ರೋಮಾಂಚನ. ನಮ್ಮ ಪ್ರೇಕ್ಷಕರಿಗೆ ಸಕತ್ ಭಯಾನಕ ಅನುಭವವನ್ನು ನೀಡಲು ನಾವು ಸಜ್ಜಾಗಿದ್ದೇವೆ. ನಮ್ಮ ಹಾರರ್ ನಿರೂಪಣೆ ಮತ್ತು ಪ್ರಭಾಸ್ ಅವರ ಸ್ಕ್ರೀನ್ ಪ್ರೆಸೆನ್ಸ್ ಪ್ರೇಕ್ಷಕರನ್ನು ಆಶ್ಚರ್ಯಚಕಿತಗೊಳಿಸುವುದು ಖಚಿತ" ಎಂದಿದ್ದಾರೆ.
ಪ್ರಭಾಸ್ ಅವರ ಕಲ್ಕಿ 2898 AD
ಇನ್ನು, ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಅಭಿನಯಿಸಿರುವ ಕಲ್ಕಿ 2898 AD ನಲ್ಲಿ ಜನವರಿ 12 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವು ಈಗ ಮೇ 9 ರಂದು ಬಿಡಯಗಡೆಯಾಗಲಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.


Click it and Unblock the Notifications










