For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಸಿನಿಮಾವನ್ನೂ ಮೀರಿಸುತ್ತೆ ಪ್ರಭಾಸ್ ಮುಂದಿನ ಸಿನಿಮಾದ ಬಜೆಟ್

  |

  ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಸದ್ಯ ಇನ್ನು ಹೆಸರಿಡದ 20ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರತಂಡ 40ರಷ್ಟು ಚಿತ್ರೀಕರಣ ಮುಗಿಸಿದೆ. ಪ್ರಭಾಸ್ 20ನೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಂತೆ 21ನೇ ಸಿನಿಮಾ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಶಾಂತ್ ನೀಲ್ | Prashanth Neel | Prabhas | Vijay

  ಹೌದು, ಪ್ರಭಾಸ್ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಸಿನಿಮಾ ಅನೌನ್ಸ್ ಆಗಿದ್ದು ಚಿತ್ರದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಚಿತ್ರದ ನಾಯಕಿ, ಕಲಾವಿದರ ಆಯ್ಕೆ ಜೊತೆಗೆ ಚಿತ್ರದ ಬಜೆಟ್ ವಿಚಾರವಾಗಿ ಟಾಲಿವುಡ್ ಚರ್ಚೆಯಾಗುತ್ತಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಪ್ರಭಾಸ್ ಸಿನಿಮಾದ ಬಜೆಟ್ ರಾಜಮೌಳಿ ಸಿನಿಮಾವನ್ನೂ ಮೀರಸಲಿದೆಯಂತೆ. ಮುಂದೆ ಓದಿ...

  ರಾಜಮೌಳಿ ಸಿನಿಮಾಗಿಂತ ಹೆಚ್ಚಿದೆ ಪ್ರಭಾಸ್ ಸಿನಿಮಾ ಬಜೆಟ್

  ರಾಜಮೌಳಿ ಸಿನಿಮಾಗಿಂತ ಹೆಚ್ಚಿದೆ ಪ್ರಭಾಸ್ ಸಿನಿಮಾ ಬಜೆಟ್

  ಟಾಲಿವುಡ್ ನಲ್ಲಿ ಸದ್ಯ ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಸಿನಿಮಾ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್. ಕೋಟಿ ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಬಜೆಟ್ ಗಿಂತ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾದ ಬಜೆಟ್ ಜಾಸ್ತಿ ಇರಲಿದೆಯಂತೆ. ಬಿಗ್ ಬಜೆಟ್ ಸಿನಿಮಾವನ್ನು ರಾಜಮೌಳಿ ಅಷ್ಟೆ ರಿಚ್ ಆಗಿ ಪ್ರೇಕ್ಷಕರ ಮುಂದೆ ಕಟ್ಟಿಕೊಡುತ್ತಾರೆ. ಸದ್ಯ ನಾಗ್ ಅಶ್ವಿನ್ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಪ್ರಭಾಸ್ ಸಿನಿಮಾದ ಬಜೆಟ್ ಎಷ್ಟು?

  ಪ್ರಭಾಸ್ ಸಿನಿಮಾದ ಬಜೆಟ್ ಎಷ್ಟು?

  ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಮೂಲಗಳ ಪ್ರಕಾರ ಸಿನಿಮಾ 500 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಗುತ್ತಿದೆಯಂತೆ. ಅಂದ್ಹಾಗೆ ಚಿತ್ರ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ.

  ದೊಡ್ಡ ದೊಡ್ಡ ಕಲಾವಿದರು ಇರಲಿದ್ದಾರೆ

  ದೊಡ್ಡ ದೊಡ್ಡ ಕಲಾವಿದರು ಇರಲಿದ್ದಾರೆ

  ಪ್ರಭಾಸ್ ಸಿನಿಮಾಗೆ ದೊಡ್ಡ ದೊಡ್ಡ ಕಲಾವಿದರ ಆಯ್ಕೆ ನಡೆಯುತ್ತಿದೆಯಂತೆ. ಅದರಲ್ಲೂ ಬಾಲಿವುಡ್ ನ ಖ್ಯಾತ ಕಲಾವಿದರು ಸಿನಿಮಾದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಾಲಿವುಡ್ ನ ಖ್ಯಾತ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ ಇದಾಗಿದ್ದು ಬಜೆಟ್ ಕೂಡ ಅಷ್ಟೆ ದೊಡ್ಡಮಟ್ಟದಲ್ಲಿ ಇರಲಿದೆಯಂತೆ.

  ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ?

  ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ?

  ಪ್ರಭಾಸ್ 21ನೇ ಸಿನಿಮಾಗೆ ನಾಯಕಿಯಾರಾಗ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಾಲಿವುಡ್ ನ ಖ್ಯಾತ ನಾಯಕಿಯನ್ನು ಕರೆತರಬೇಕೆಂದು ಸಿನಿಮಾತಂಡ ಹಠಕ್ಕೆ ಬಿದ್ದಿದೆ. ಹಾಗಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರ ಜೊತೆ ಚಿತ್ರತಂಡ ಈಗಾಗಲೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರತಂಡ ದೀಪಿಕಾ ಜೊತೆ ಮಾತುಕತೆ ನಡೆಸಿದ್ದಾರಂತೆ, ಆದರೆ ದೀಪಿಕಾ 20 ರಿಂದ 25 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಪ್ರಭಾಸ್ ಸಂಭಾವನೆಯೂ ಹೆಚ್ಚಾಗಿದೆ

  ಪ್ರಭಾಸ್ ಸಂಭಾವನೆಯೂ ಹೆಚ್ಚಾಗಿದೆ

  ಬಾಹುಬಲಿ ನಂತರ ಪ್ರಭಾಸ್ ಬೇಡಿಕೆ ಜೊತೆಗೆ ಸಂಭಾವನೆಯೂ ಹೆಚ್ಚಾಗಿದೆ. ಸಾಹೋ ಸಿನಿಮಾದಲ್ಲಿಯೇ ಪ್ರಭಾಸ್ ಸಂಭಾವನೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಈಗ ನಾಗ್ ಅಶ್ವಿನ್ ಚಿತ್ರಕ್ಕೂ ಪ್ರಭಾಸ್ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಭಾವನೆ ಜೊತೆಗೆ ಲಾಭದ 60ರಷ್ಟು ಮೊತ್ತವನ್ನು ಪಡೆಯುತ್ತಾರಂತೆ.

  English summary
  Tollywood Actor Prabhas and Nag Ashwin movie budget bigger than Rajamouli's RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X