For Quick Alerts
  ALLOW NOTIFICATIONS  
  For Daily Alerts

  500 ಕೋಟಿ ಬಜೆಟ್: ಅರ್ಧದಷ್ಟು ಹಣ ಕಲಾವಿದರ ಸಂಭಾವನೆಗೆ ಖರ್ಚು?

  |

  ಟಾಲಿವುಡ್ ನಟ ಪ್ರಭಾಸ್ ಜೊತೆ ಸಿನಿಮಾ ಮಾಡ್ಬೇಕು ಅಂದ್ರೆ ನಿರ್ಮಾಪಕನ ಜೇಬು, ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಇರಬೇಕು. ಪ್ರಭಾಸ್ ಕಾಲ್‌ಶೀಟ್‌ ಪಡೆಯಬೇಕು ಅಂದ್ರೆ ನಿರ್ಮಾಪಕನ ಬಳಿ ಎಷ್ಟು ಹಣ ಇರಬೇಕು ಎನ್ನುವುದಕ್ಕೆ ಅದಾಗಲೇ ಒಂದು ಸ್ಪಷ್ಟನೆ ಸಿಕ್ಕಿದೆ. ಏಕಂದ್ರೆ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್. ಸದ್ಯಕ್ಕೆ ಡಾರ್ಲಿಂಗ್ ಮಾಡ್ತಿರುವ ಚಿತ್ರಗಳ ಕಥೆ ಒಮ್ಮೆ ನೋಡಿದ್ರೆ ನಿರ್ಮಾಪಕರಿಗೆ ಲೆಕ್ಕಾಚಾರ ಅರ್ಥ ಆಗಿಬಿಡುತ್ತದೆ.

  ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಶಾಂತ್ ನೀಲ್ ಜೊತೆ ಸಲಾರ್ ಆರಂಭವಾಗಿದ್ದು, ಚಿತ್ರೀಕರಣ ಹಂತದಲ್ಲಿದೆ. ಬಾಲಿವುಡ್‌ನಲ್ಲಿ ಆದಿಪುರುಷ್ ಮೆಗಾ ಪ್ರಾಜೆಕ್ಟ್ ಶುರುವಾಗಿದೆ. ಈ ಮೂರು ಚಿತ್ರಗಳ ಬಳಿಕ ನಾಗ್ ಅಶ್ವಿನ್ ಜೊತೆ 21ನೇ ಸಿನಿಮಾ ಮಾಡಬೇಕಿದೆ. ಈ ಚಿತ್ರದ ಕುರಿತು ಅಚ್ಚರಿ ಹಾಗೂ ಆಸಕ್ತಿದಾಯ ವಿಚಾರವೊಂದು ಬಹಿರಂಗವಾಗಿದೆ. ಮುಂದೆ ಓದಿ...

  'ಸಲಾರ್' ಚಿತ್ರದ ಇಂಟರೆಸ್ಟಿಂಗ್ ಮಾಹಿತಿ: ರಿವೀಲ್ ಆಯ್ತು ಪ್ರಭಾಸ್ ಪಾತ್ರ 'ಸಲಾರ್' ಚಿತ್ರದ ಇಂಟರೆಸ್ಟಿಂಗ್ ಮಾಹಿತಿ: ರಿವೀಲ್ ಆಯ್ತು ಪ್ರಭಾಸ್ ಪಾತ್ರ

  500 ಕೋಟಿ ಬಜೆಟ್?

  500 ಕೋಟಿ ಬಜೆಟ್?

  ನಾಗ್ ಅಶ್ವಿನ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಚಿತ್ರದ ಬಜೆಟ್ 500 ಕೋಟಿ ಎಂದು ಅಂದಾಜಿಸಲಾಗಿದೆ. ಆರಂಭದಲ್ಲಿ ಈ ಚಿತ್ರಕ್ಕೆ ಸುಮಾರು 300 ಕೋಟಿವರೆಗೂ ವೆಚ್ಚವಾಗಬಹುದು ಎಂದು ವರದಿಯಾಗಿತ್ತು. ಆದ್ರೀಗ, ಒಟ್ಟು ಬಜೆಟ್ 500 ಕೋಟಿಯವರೆಗೂ ಆಗಲಿದೆ ಎಂಬ ಸುದ್ದಿ ಬಹಿರಂಗವಾಗಿದೆ.

  ಸ್ಟಾರ್‌ ಕಲಾವಿದರ ಎಂಟ್ರಿ

  ಸ್ಟಾರ್‌ ಕಲಾವಿದರ ಎಂಟ್ರಿ

  ನಾಗ್ ಅಶ್ವಿನ್ ಮತ್ತು ಪ್ರಭಾಸ್ ಜೋಡಿಯಲ್ಲಿ ಬರಲಿರುವ ಸಿನಿಮಾ ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿದೆ. ನಿಗದಿತ ಯೋಜನೆ ಮೀರಿ ಬಜೆಟ್ ಹೆಚ್ಚಾಗಲು ಕಾರಣ ಸ್ಟಾರ್ ಕಲಾವಿದರ ಆಗಮನ ಎಂದು ಹೇಳಲಾಗಿದೆ. ಪ್ರಭಾಸ್ ಜೊತೆ ಬಾಲಿವುಡ್ ಸ್ಟಾರ್‌ಗಳ ಅಭಿನಯಿಸುತ್ತಿರುವುದು ಸಹಜವಾಗಿ ನಿರ್ಮಾಪಕರಿಗೆ ಹೊರೆಯಾಗಿದೆ.

  ಹಾಲಿವುಡ್‌ಗೆ ಹಾರಲಿದ್ದಾರೆ ಪ್ರಭಾಸ್: 'ಮಿಶನ್ ಇಂಪಾಸಿಬಲ್' ಅಥವಾ 'ಅವೆಂಜರ್ಸ್'?ಹಾಲಿವುಡ್‌ಗೆ ಹಾರಲಿದ್ದಾರೆ ಪ್ರಭಾಸ್: 'ಮಿಶನ್ ಇಂಪಾಸಿಬಲ್' ಅಥವಾ 'ಅವೆಂಜರ್ಸ್'?

  ಅರ್ಧ ಬಜೆಟ್ ಸಂಭಾವನೆಗೆ ಮೀಸಲು

  ಅರ್ಧ ಬಜೆಟ್ ಸಂಭಾವನೆಗೆ ಮೀಸಲು

  ಒಟ್ಟು 500 ಕೋಟಿ ಪ್ರಾಜೆಕ್ಟ್ ಇದಾಗಿದೆ. ಇದರಲ್ಲಿ ಅರ್ಧ ಹಣ ಅಂದ್ರೆ 250 ಕೋಟಿವರೆಗೂ ಕಲಾವಿದರ ಸಂಭಾವನೆಗಾಗಿ ಖರ್ಚು ಮಾಡಲಾಗುತ್ತಿದೆ. ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ಇನ್ನು ಏಂಟು ಜನರನ್ನು ಬಾಲಿವುಡ್‌ ಇಂಡಸ್ಟ್ರಿಯಿಂದ ಈ ಪ್ರಾಜೆಕ್ಟ್‌ಗೆ ಸೇರಿಕೊಳ್ಳಲಿದ್ದಾರೆ ಎನ್ನುವುದು ಹೊಸ ಟಾಕ್.

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada
  ಪ್ರಭಾಸ್ ಸಂಭಾವನೆ ಎಷ್ಟಿದೆ?

  ಪ್ರಭಾಸ್ ಸಂಭಾವನೆ ಎಷ್ಟಿದೆ?

  ಪ್ರಭಾಸ್ ಸಂಭಾವನೆ ಬರೋಬ್ಬರಿ 100 ಕೋಟಿ ಎಂದು ವರದಿಗಳಾಗಿದೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದ ಸಂಭಾವನೆಯಲ್ಲೂ ಪ್ರಭಾಸ್ ಏರಿಕೆ ಕಂಡಿದ್ದಾರೆ ಎಂದಿವೆ ಮೂಲಗಳು. ನಾಗ್ ಅಶ್ವಿನ್ ಚಿತ್ರದ ಒಟ್ಟು ಬಜೆಟ್ 500 ಕೋಟಿ, ಅದರಲ್ಲಿ ಪ್ರಭಾಸ್ ಸಂಭಾವನೆ 100 ಕೋಟಿ, ದೀಪಿಕಾ, ಬಿಗ್ ಬಿ ಸೇರಿದಂತೆ ಇತರೆ ಕಲಾವಿದರ ಸಂಭಾವನೆ 100 ಕೋಟಿ, ಚಿತ್ರೀಕರಣ ಹಾಗೂ ವಿಎಫ್‌ಎಕ್ಸ್ ಕೆಲಸಕ್ಕ 300 ಕೋಟಿ ಮೀಸಲು ಎನ್ನುವ ಲೆಕ್ಕಾಚಾರದಲ್ಲಿ ಪ್ರೊಡಕ್ಷನ್ ತಂಡ.

  English summary
  Prabhas and Nag ashwin movie budget is almost 500 crore said source. Prabhas charging 100 cr remuneration for this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X