For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ: 2 ವರ್ಷ ಮುಂದಕ್ಕೋದ ಪ್ರಭಾಸ್-ನಾಗ್ ಅಶ್ವಿನ್ ಸಿನಿಮಾ

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಕೇಳಿ ಬರುತ್ತಿದೆ. ಸಾಹೋ ಸಿನಿಮಾದ ನಂತರ ಪ್ರಭಾಸ್ 'ಪ್ರಭಾಸ್ 20' (ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ಭಾಕಿ ಇರುವಾಗಲೇ ಪ್ರಭಾಸ್ ಮತ್ತೊಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  ನಿಮ್ಮೆಲ್ಲರ ಸಹಕಾರದಿಂದಲೇ ನಾನು ಇಷ್ಟೆಲ್ಲ ಮಾಡ್ತಿರೋದು | Ragini | Filmibeat Kannada

  ಹೌದು, ನಿರ್ದೇಶಕ ನಾಗ್ ಅಶ್ವಿನ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಇಬ್ಬರು ಒಟ್ಟಿಗೆ ಸೇರಿ ಸಿನಿಮಾ ಮಾಡುತ್ತಿದ್ದಾರೆ ಅಂದಮೇಲೆ ಅಭಿಮಾನಿಗಳಲ್ಲಿ ಕುತೂಹಲ ಸಹಜವಾಗಿ ಹೆಚ್ಚಾಗಿರುತ್ತೆ. ಆದರೀಗ ಈ ಸಿನಿಮಾದಿಂದ ನಿರೀಸೆಯ ಸುದ್ದಿಯೊದು ಕೇಳಿ ಬರುತ್ತಿದೆ. ಮುಂದೆ ಓದಿ...

  ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ

  ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ

  ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾದ ಬಗ್ಗೆ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ಪ್ರಸಿದ್ಧ ವೈಜಯಂತಿ ಬ್ಯಾನರ್ ಬಂಡವಾಳ ಹೂಡುತ್ತಿದೆ. ಈಗಾಗಲೆ ಚಿತ್ರದ ಪ್ರಿ ಪ್ರೊಡೊಕ್ಷನ್ ಕೆಲಸ ಪ್ರಾರಂಭವಾಗಿದ್ದು, ನಾಗ್ ಅಶ್ವಿನ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ 'ಪ್ರಭಾಸ್ 20' ಸಿನಿಮಾ ಮುಗಿದ ತಕ್ಷಣ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು.

  ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

  ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

  ಈ ಸಿನಿಮಾದ ಬಗ್ಗೆ ಈಗ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಈ ವರ್ಷದ ಕೊನೆಯಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿ, ಮುಂದಿನ ವರ್ಷ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದ ಚಿತ್ರತಂಡದ ಲೆಕ್ಕಾಚಾರವೀಗ ತಲೆಕೆಳಗಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ರಿಲೀಸ್ ಕೂಡ ಎರಡೂ ವರ್ಷ ಮುಂದಕ್ಕೆ ಹೋಗಿದೆ.

  2022ರಲ್ಲಿ ಸಿನಿಮಾ ರಿಲೀಸ್

  2022ರಲ್ಲಿ ಸಿನಿಮಾ ರಿಲೀಸ್

  ಕೊರೊನಾ ವೈರಸ್ ಹಾವಳಿಯ ಪರಿಣಾಮ ಎಲ್ಲಾ ಸಿನಿಮಾ ಚಿತ್ರೀಕರಣಗಳು ಸ್ಥಗಿತಗೊಂಡಿದೆ. ಹಾಗಾಗಿ ಸಾಕಷ್ಟು ಸಿನಿಮಾಗಳು ರಿಲೀಸ್ ಮುಂದಕ್ಕೆ ಹೋಗಿದೆ. ಸದ್ಯ ಪ್ರಭಾಸ್ ಹೊಸ ಸಿನಿಮಾ ಕೂಡ ಮುಂದಕ್ಕೆ ಹೋಗಿದ್ದು, ಅದೂ ಎರಡೂ ವರ್ಷಗಳ ಕಾಲ. ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾ 2022 ಸಮ್ಮರ್ ನಲ್ಲಿ ತೆರೆಗೆ ಬರಲಿದೆಯಂತೆ.

  ಪ್ರಭಾಸ್ ಗೆ ವಿಲನ್ ಆಗ್ತಾರಾ ಅರವಿಂದ್ ಸ್ವಾಮಿ?

  ಪ್ರಭಾಸ್ ಗೆ ವಿಲನ್ ಆಗ್ತಾರಾ ಅರವಿಂದ್ ಸ್ವಾಮಿ?

  ನಟ ಪ್ರಭಾಸ್ ಹೊಸ ಸಿನಿಮಾಗೆ ತಮಿಳಿನ ಖ್ಯಾತ ನಟ ಅರವಿಂದ್ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಅರವಿಂದ್ ಸ್ವಾಮಿ ವಿಲನ್ ಆಗಿ ಅಬ್ಬರಿಲಿದ್ದಾರಂತೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

  ಯಾರಾಗ್ತಾರೆ ಪ್ರಭಾಸ್ ಗೆ ನಾಯಕಿ?

  ಯಾರಾಗ್ತಾರೆ ಪ್ರಭಾಸ್ ಗೆ ನಾಯಕಿ?

  ನಾಯಕಿಯ ವಿಚಾರವಾಗಿ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಬಾಲಿವುಡ್ ನಟಿಯರನ್ನು ಕರೆತರಬೇಕು ಎನ್ನುವುದು ಚಿತ್ರತಂಡದ ಪ್ಲಾನ್. ಈಗಾಗಲೆ ನಟಿ ದೀಪಿಕಾ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ದೀಪಿಕಾ ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟ ಕಾರಣ ಸಿನಿಮಾತಂಡ ಹಿಂದೇಟು ಹಾಕಿದೆಯಂತೆ. ದೀಪಿಕಾ, ಪ್ರಭಾಸ್ ಜೊತೆ ರೋಮ್ಯಾನ್ಸ್ ಮಾಡುತ್ತಾರಾ ಎನ್ನುವುದನ್ನು ಕಾದುನೋಡಬೇಕು.

  English summary
  Tollywood Actor Prabhas and Nag Ashwin movie postponed to 2022 due corona lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X