For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ಪೂಜಾ ಹೆಗ್ಡೆ ಸಿನಿಮಾದ ಮುಹೂರ್ತ ಫೋಟೋಗಳು ವೈರಲ್

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಈಗಾಗಲೆ "ಪ್ರಭಾಸ್ 20" (ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಸಾಕಷ್ಟು ಚಿತ್ರೀಕರಣ ಸಹ ಮುಗಿದಿದೆ. ಲಾಕ್ ಡೌನ್ ಆಗುವ ಮೊದಲೆ ವಿದೇಶದಲ್ಲಿ ಚಿತ್ರೀಕರಣ ಮುಗಿಸಿ ಭಾರತಕ್ಕೆ ಬಂದಿದ್ದಾರೆ.

  ಸಿನಿಮಾ ಸೆಟ್ಟೇರಿ ಅನೇಕ ತಿಂಗಳುಗಳೆ ಆಗಿದೆ. ಆದರೀಗ ಈ ಸಿನಿಮಾದ ಮುಹೂರ್ತದ ಫೋಟೋಗಳು ವೈರಲ್ ಆಗುತ್ತಿದೆ. ಹೌದು, ಪ್ರಭಾಸ್ 20ನೇ ಸಿನಿಮಾದ ಮುಹೂರ್ತ ಫೋಟೋಗಳನ್ನು ನಿರ್ದೇಶಕ ರಾಧಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ..

  ಮೊದಲ ಬಾರಿಗೆ ಪ್ರಾಭಾಸ್ ಜೊತೆ ಪೂಜಾ

  ಮೊದಲ ಬಾರಿಗೆ ಪ್ರಾಭಾಸ್ ಜೊತೆ ಪೂಜಾ

  ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಜೊತೆ ನಟಿಸಲು ನಾಯಕಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂತಹ ಅವಕಾಶವೀಗ ಕನ್ನಡದ ಮೂಲಕ ನಟಿ ಪೂಜಾ ಹೆಗ್ಡೆ ಪಾಲಾಗಿದೆ. ಟಾಲಿವುಡ್ ನ ಸ್ಟಾರ್ ನಟ ಲಕ್ಕಿ ನಾಯಕಿಯಾಗಿರುವ ಪೂಜಾ ಮೊದಲ ಬಾರಿಗೆ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಪ್ರಭಾಸ್ ಜೊತೆ ಇರುವ ಫೋಟೋ ಎಲ್ಲಿಯೂ ರಿವೀಲ್ ಆಗಿರಲಿಲ್ಲ. ಆದರೀಗ ಮೊದಲ ಬಾರಿಗೆ ಪ್ರಭಾಸ್ ಪೂಜಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

  ಪೂಜಾ ಜೊತೆ ಪ್ರಭಾಸ್ ಮಾತುಕತೆ ಫೋಟೋ ವೈರಲ್

  ಪೂಜಾ ಜೊತೆ ಪ್ರಭಾಸ್ ಮಾತುಕತೆ ಫೋಟೋ ವೈರಲ್

  ಮುಹೂರ್ತ ಸಮಯದಲ್ಲಿ ನಟಿ ಪೂಜಾ ಹೆಗ್ಡೆ ಜೊತೆ ನಟ ಪ್ರಭಾಸ್ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ. ಮೊದಲ ಬಾರಿಗೆ ಒಂದೆ ಫ್ರೇಮಿನಲ್ಲಿ ಸೆರೆಸಿಕ್ಕ ಪ್ರಭಾಸ್ ಮತ್ತು ಪೂಜಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. "ಸೆಟ್ ನಲ್ಲಿ ಪ್ರಭಾಸ್ ತುಂಬಾ ಜಾಲಿಯಾಗಿ ಇರುತ್ತಾರೆ" ಎಂದು ಪೂಜಾ ಪ್ರಭಾಸ್ ಬಗ್ಗೆ ಹೇಳಿದ್ದರು.

  ಮುಹೂರ್ತಕ್ಕೆ ಟಾಲಿವುಡ್ ದಿಗ್ಗಜರು ಭಾಗಿ

  ಮುಹೂರ್ತಕ್ಕೆ ಟಾಲಿವುಡ್ ದಿಗ್ಗಜರು ಭಾಗಿ

  ಪ್ರಭಾಸ್ ಅಭಿನಯದ 20ನೇ ಸಿನಿಮಾದ ಮುಹೂರ್ತಕ್ಕೆ ಟಾಲಿವುಡ್ ದಿಗ್ಗಜರು ಭಾಗಿಯಾಗಿದ್ದರು. ಕೃಷ್ಣಂ ರಾಜು, ವಿವಿ ವಿನಾಯಕ್, ಕೋನ ವೆಂಕಟ್, ನಿರ್ಮಾಪಕ ವಂಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  ನಿರ್ದೇಶಕ ರಾಜಮೌಳಿ ಭಾಗಿ

  ನಿರ್ದೇಶಕ ರಾಜಮೌಳಿ ಭಾಗಿ

  ಪ್ರಭಾಸ್ ಸಿನಿಮಾ ಮುಹೂರ್ತಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಸಹ ಭಾಗಿಯಾಗಿದ್ದರು. ಬಾಹುಬಲಿ ಖ್ಯಾತಿಯ ಜೋಡಿಯನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಎಲ್ಲಾ ಫೋಟೋಗಳೀಗ ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ರಾಧ ಕೃಷ್ಣ ನಿರ್ದೇಶಕ

  ರಾಧ ಕೃಷ್ಣ ನಿರ್ದೇಶಕ

  ಪ್ರಭಾಸ್-20 ಸಿನಿಮಾಗೆ ಜಾನ್ ಎಂದು ಹೆಸರಿಡಲಾಗಿದೆ. ಆದರೆ ಈ ಹೆಸರು ಇನ್ನೂ ಅಧಿಕೃತವಾಗಿಲ್ಲ. ಚಿತ್ರಕ್ಕೆ ರಾಧ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೊಮ್ಯಾಂಟಿಕ್ ಪ್ರೇಮಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದ್ದು. ಬಹುತೇಕ ಚಿತ್ರೀಕರಣ ಯುರೋಪ್ ನಲ್ಲಿಯೆ ನಡೆಯಲಿದೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Actor Prabhas and Pooja Hegde movie launch ceremony Photos viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X