ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ಯಾ ಸಲಾರ್...? ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?
ವರ್ಷ ಮುಗಿಯುವ ಮುನ್ನ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಬಹು ನಿರೀಕ್ಷೆಯ ಸಿನಿಮಾ 'ಸಲಾರ್: ಭಾಗ ಒಂದು- ಕದನ ವಿರಾಮ' ವನ್ನು ಸಿನಿಪ್ರೇಮಿಗಳ ಮುಂದೆ ಇಟ್ಟಿದ್ದಾರೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ಬಿಟ್ ಮಾಡಿದ್ದ 'ಸಲಾರ್' ಮೊದಲ ದಿನ ಗಳಿಸಿದ್ದು ಎಷ್ಟು ಎನ್ನುವುದು ಪ್ರೇಕ್ಷಕರ ಪ್ರಶ್ನೆ.
ಕೆಜಿಎಫ್, ಕಾಂತಾರ ಸಿನಿಮಾಗಳ ಖ್ಯಾತಿಯ ಹೊಂಬಾಳೆ ಫಿಲ್ಮ್ಸಂ ನಿರ್ಮಿಸಿರುವ 'ಸಲಾರ್' ಸಿನಿಮಾಗೆ ವಿಶ್ವದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 49 ಕೋಟಿ ರೂಪಾಯಿಗಳನ್ನು ಸಲಾರ್ ತಂಡ ಬಾಚಿಕೊಂಡಿತ್ತು. ಹೀಗಾಗಿ ಮೊದಲ ದಿನದ ಕಲೆಕ್ಷನ್ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಅದರಲ್ಲೂ ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಪೈಪೋಟಿಗೆ ಸಲಾರ್ ನಿಂತಿದೆ.

ಮೊದಲ ದಿನ 'ಸಲಾರ್' ಗಳಿಸಿದ್ದೆಷ್ಟು..?
ಇಂಡಸ್ಟ್ರಿ ಟ್ರ್ಯಾಕಿಂಗ್ ಸೈಟ್ Sacnilk ಪ್ರಕಾರ, 'ಸಲಾರ್' ಚಿತ್ರದ ದೇಶೀಯ ಅಡ್ವಾನ್ಸ್ ಟಿಕೆಟ್ ಮಾರಾಟವು 49 ಕೋಟಿ ರೂಪಾಯಿಗಳನ್ನು ಗಳಿಸಿದೆ. ಬಿಡುಗಡೆಯ ದಿನದಂದು ಸಿನಿಮಾ 60 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ಈಗ ವರದಿಯಾಗಿದೆ. ಪ್ಯಾನ್-ಇಂಡಿಯಾ ಚಲನಚಿತ್ರ ಸಲಾರ್ ಆಕ್ಷನ್ ಡ್ರಾಮಾ ಆಗಿದ್ದು, ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಜಗತ್ತಿನಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈಗ, ಬಂದಿರುವ ವರದಿಗಳ ಪ್ರಕಾರ ಸಿನಿಮಾವು ಬಿಡುಗಡೆಯಾದ ಮೊದ ದಿನದಂದು ಜಾಗತಿಕವಾಗಿ ಸುಮಾರು 180 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಗಳು ಸೂಚಿಸುತ್ತವೆ.

ಭಾರತದಲ್ಲಿ ಆನ್‌ಲೈನ್ ಬುಕಿಂಗ್‌ನಲ್ಲಿ ಚಿತ್ರವು 49 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಎರಡನ್ನೂ ಪರಿಗಣಿಸಿದಾಗ, ಎಲ್ಲಾ ಭಾಷೆಗಳಲ್ಲಿ ಒಟ್ಟಾರೆ ಆರಂಭಿಕ ದಿನದ ಗಳಿಕೆಯು ಸುಮಾರು 180 ಕೋಟಿ ರೂಪಾಯಿಯಾಗಿದೆ. ವಿಶ್ವಾದ್ಯಂತ 'ಸಲಾರ್' 45 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿದೆ. ಇದು 2023 ರಲ್ಲಿ ಭಾರತೀಯ ಚಲನಚಿತ್ರ ಒಂದರ ಅತಿದೊಡ್ಡ ಓಪನಿಂಗ್ ಆಗಲಿದೆ.
'ಸಲಾರ್'
'ಸಲಾರ್' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗಕ್ಕೆ 'ಸಲಾರ್: ಭಾಗ 1 - ಕದನ ವಿರಾಮ' ಎಂದು ಹೆಸರಿಸಲಾಗಿದ್ದು, ಎರಡನೇ ಭಾಗಕ್ಕೆ 'ಶೌರ್ಯಾಂಗ ಪರ್ವಂ' ಎಂದು ಹೆಸರಿಡಲಾಗಿದೆ. ಪ್ರಭಾಸ್ ದೇವ ಪಾತ್ರದಲ್ಲಿ, ಪೃಥ್ವಿರಾಜ್ ಸುಕುಮಾರನ್ ವರದರಾಜ ಮನ್ನಾರ್ ಪಾತ್ರದಲ್ಲಿ, ಜಗಪತಿ ಬಾಬು ರಾಜಮನ್ನಾರ್ ಆಗಿ ಕಾಣಿಸಿಕೊಂಡಿದ್ದರೆ, ಶ್ರುತಿ ಹಾಸನ್ ಆದ್ಯ ಪಾತ್ರದಲ್ಲಿ ನಟಿಸಿದ್ದಾರೆ. 'ಸಲಾರ್: ಭಾಗ ಒಂದು' ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ.


Click it and Unblock the Notifications











