ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಸಂದೀಪ್ ರೆಡ್ಡಿ ವಂಗಾ

ಯಾವುದೇ ಚಿತ್ರಕ್ಕೆ ಬಿಡುಗಡೆ ದಿನಾಂಕ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಬಹುಕೋಟಿ ವೆಚ್ಚದ ಚಿತ್ರಗಳನ್ನು ತೆರೆಗೆ ತರಲು ನಾನಾ ಕಸರತ್ತು ನಡೆಸಲಾಗುತ್ತಿದೆ. ವರ್ಷಕ್ಕೂ ಮುನ್ನ ಬಿಡುಗಡೆ ದಿನಾಂಕ ಫಿಕ್ಸ್ ಮಾಡಲಾಗುತ್ತದೆ. ಇದೀಗ ಪ್ರಭಾಸ್ ಹಾಗೂ ಸಂದೀಪ್ ರೆಡ್ಡಿ ವಂಗಾ ಡೆಡ್ಲಿ ಕಾಂಬಿನೇಷನ್ 'ಸ್ಪಿರಿಟ್' ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ.

ಟೀ-ಸೀರಿಸ್ ನಿರ್ಮಾಣದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಪ್ರಭಾಸ್ ಜೊತೆ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಸಿನಿಮಾ ಸೆಟ್ಟೇರಿತ್ತು. ಹೊಸ ವರ್ಷದ ಸಂಭ್ರಮದಲ್ಲಿ ಸ್ಪೆಷಲ್ ಪೋಸ್ಟರ್ ರಿವೀಲ್ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿ ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಮಾಡಿದ್ದಾರೆ.

Prabhas and Sandeep Reddy Vanga s Spirit film Release Date Announced

'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ಬಳಿಕ ಸಂದೀಪ್ ರೆಡ್ಡಿ ವಂಗಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಬಾರಿ ಪ್ರಭಾಸ್ ಜೊತೆ ಕೈ ಜೋಡಿಸಿದ್ದಾರೆ ಅಂದ್ಮೇಲೆ ಕೇಳಬೇಕಾ? ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಲಿದ್ದಾರೆ. ಪ್ರಕಾಶ್ ರಾಜ್, ವಿವೇಕ್ ಒಬೆರಾಯ್, ಕಾಂಚನಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಪ್ರಭಾಸ್ ಸದ್ಯ 'ಫೌಜಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ 'ಸ್ಪಿರಿಟ್' ತಂಡ ಸೇರಿಕೊಳ್ಳಲಿದ್ದಾರೆ.

ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ನಿರಾಸೆ ಮೂಡಿಸಿದೆ. ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡರೂ ಬಳಿಕ ಸಿನಿಮಾ ಸದ್ದು ಮಾಡುತ್ತಿಲ್ಲ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕುಂಟುತ್ತಾ ಸಾಗಿದೆ. ಮುಂದಿನ ವರ್ಷ ಮಾರ್ಚ್ 2ರಂದು 'ಸ್ಪಿರಿಟ್' ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಇದೀಗ ಮಾಹಿತಿ ಲಭ್ಯವಾಗಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

ತೆಲುಗು ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಸ್ಪಿರಿಟ್' ಸಿನಿಮಾ ತೆರೆಗಪ್ಪಳಿಸುತ್ತಿದೆ. ಚೀನಾ, ಜಪಾನ್ ಭಾಷೆಗಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. 'ಸೀತಾರಾಮಂ' ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ದೊಡ್ಡ ಸಿನಿಮಾಗಳ ಜೊತೆ ಕ್ಲ್ಯಾಶ್ ಆಗದಂತೆ ಸಿನಿಮಾ ಬಿಡುಗಡೆ ಮಾಡಲು ಎಲ್ಲರೂ ಯತ್ನಿಸುತ್ತಾರೆ. ಒಳ್ಳೆ ವೀಕೆಂಡ್ ಮೇಲೆ ಯಾರಾದರೂ ಕಣ್ಣಾಕ್ಕುವ ಮುನ್ನ ಡೇಟ್ ಫಿಕ್ಸ್ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಅದೇ ಕಾರಣಕ್ಕೆ ವರ್ಷಕ್ಕೂ ಮುನ್ನ 'ಸ್ಪಿರಿಟ್' ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದಾ ವಂಗಾ. ಈ ವರ್ಷ ಈದ್ ಸಂಭ್ರಮದಲ್ಲಿ 'ಟಾಕ್ಸಿಕ್' ಹಾಗೂ 'ಧುರಂಧರ್-2' ಚಿತ್ರಗಳು ಬಿಡುಗಡೆ ಆಗ್ತಿದೆ. ಮುಂದಿನ ವರ್ಷ ಈದ್‌ ವೇಳೆಗೆ 'ಸ್ಪಿರಿಟ್' ಸಿನಿಮಾ ತೆರೆಗಪ್ಪಳಿಸಲಿದೆ.

2027ರಲ್ಲಿ ಮಾರ್ಚ್ 9 ಅಥವಾ 10ರಂದು ಈದ್ ಆಚರಿಸುವ ಸಾಧ್ಯತೆಯಿದೆ. ಅದಕ್ಕೂ ಹಿಂದಿನ ವೀಕೆಂಡ್ ಅಂದರೆ ಮಾರ್ಚ್ 5ರಂದು ಶುಕ್ರವಾರ ಪ್ರಭಾಸ್- ವಂಗಾ ಕಾಂಬೋ ಸಿನಿಮಾ ತೆರೆಗೆ ಬರಲಿದೆ. ಶನಿವಾರ ಮಹಾಶಿವರಾತ್ರಿ ರಜೆ ಸಿಗಲಿದೆ. ಹಾಗಾಗಿ ಫಸ್ಟ್ ವೀಕೆಂಡ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಲಿದೆ. ಸೋಮವಾರ ಒಂದು ದಿನ ಕಳೆದರೆ ಮಂಗಳವಾರ ಈದ್ ರಜೆ ಸಿಗಲಿದೆ. ಅಲ್ಲಿಗೆ ಲಾಂಗ್ ವೀಕೆಂಡ್ ಚಿತ್ರದ ಗಳಿಕೆಗೆ ಪ್ಲಸ್ ಆಗಲಿದೆ. ಇದೇ ಕಾರಣಕ್ಕೆ ವರ್ಷಕ್ಕೂ ಮುನ್ನ ಈ ದಿನಾಂಕವನ್ನು ವಂಗಾ ಫಿಕ್ಸ್ ಮಾಡಿದ್ದಾರೆ.

'ಸ್ಪಿರಿಟ್' ಚಿತ್ರದಲ್ಲಿ ಐಪಿಎಸ್ ಆಫೀಸರ್ ಪಾತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ವಂಗಾ ತಮ್ಮದೇ ಶೈಲಿಯಲ್ಲಿ ಸಿನಿಮಾ ಕಟ್ಟಿಕೊಡಲಿದ್ದಾರೆ. ಕೆಲ ದಿನಗಳ ಹಿಂದೆ ಆಡಿಯೋ ಟೀಸರ್ ಬಿಟ್ಟು ಕುತೂಹಲ ಮೂಡಿಸಿದ್ದರು. ಪ್ರಕಾಶ್ ರಾಜ್‌ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬಂದಿದ್ದ ಟೀಸರ್ ಹಿಟ್ ಆಗಿತ್ತು.

More from Filmibeat

Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X