ರಿಯಲ್ ಸ್ಟಾರ್ ಉಪೇಂದ್ರ ಸ್ಟೈಲ್‌ನಲ್ಲಿ ಜುಟ್ಟು ಕಟ್ಕೊಂಡು ಬಂದ ಪ್ರಭಾಸ್
ಯಂಗ್ ರೆಬಲ್ ಸ್ಟಾರ್ ನಟನೆಯ 'ಕಲ್ಕಿ 2898AD' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡುತ್ತಿದೆ. ಪ್ರಭಾಸ್ ಹೀರೊ ಎನ್ನುವ ಕಾರಣಕ್ಕೆ ಮಾತ್ರವಲ್ಲ ಇನ್ನುವು ವಿಚಾರಗಳಿಂದ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸೂಪರ್ ಹಿಟ್ 'ಮಹಾನಟಿ' ಸಿನಿಮಾ ನಿರ್ದೇಶಿಸಿದ್ದ ನಾಗ್ ಅಶ್ವಿನ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಕಲ್ಕಿ 2898AD' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ರೀತಿಯ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ 'ಕಲ್ಕಿ 2898AD' ಬರಲಿದೆ. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.

ಶಿವರಾತ್ರಿ ಹಬ್ಬದ ಸಂಭ್ರಮದಲ್ಲೇ ಚಿತ್ರದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದೆ. ಚಿತ್ರದಲ್ಲಿ ಪ್ರಭಾಸ್ 'ಭೈರವ' ಪಾತ್ರದ ಲುಕ್ ಇದು. ಜುಟ್ಟು ಕಟ್ಟಿ, ಕೈ ತುಂಬಾ ಟ್ಯಾಟು ಹಾಕಿಸಿಕೊಂಡು ಖಡಕ್ ಲುಕ್‌ನಲ್ಲಿ ಪ್ರಭಾಸ್ ಅವತಾರ ನೋಡಬಹುದು. ಈ ಹಿಂದೆ ಬಂದಿದ್ದ ಪ್ರಭಾಸ್ ಪೋಸ್ಟರ್ ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಈಗ ಬಂದಿರುವ ಹೊಸ ಪೋಸ್ಟರ್ ಇಷ್ಟವಾಗಿದೆ.
ದೇಶ ವಿದೇಶದ ಹಲವು ಭಾಷೆಗಳಲ್ಲಿ 'ಕಲ್ಕಿ 2898AD' ತೆರೆಗಪ್ಪಳಿಸಲಿದೆ. ಮೇ 9ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಅಶ್ವಿನಿದತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಜೆಟ್ ಲೆಕ್ಕ ಹಾಕದೇ ಈ ಎಪಿಕ್ ಸೈನ್ಸ್ ಫಿಕ್ಷನ್ ಸಿನಿಮಾ ಕೇಳಿದ್ದನ್ನೆಲ್ಲಾ ಕೊಟ್ಟು ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ಭೈರವ ಆಗಿ ಮಾತ್ರವಲ್ಲದೇ ಪ್ರಭಾಸ್ ಕಲ್ಕಿಯಾಗಿಯೂ ನಟಿಸುತ್ತಿದ್ದಾರೆ. ಅದು ಹೇಗೆ ಎನ್ನುವುದನ್ನು ತೆರೆಮೇಲೆ ನೋಡಬೇಕು
ಅಶ್ವಥಾಮನಾಗಿ ಅಮಿತಾಬ್ ಬಚ್ಚನ್, ಕಲಿ ಆಗಿ ಕಮಲ್ ಹಾಸನ್, ಪದ್ಮ ಆಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇನ್ನುಳಿದಂತೆ ದಿಶಾ ಪಟಾಣಿ, ರಾಜೇಂದ್ರ ಪ್ರಸಾದ್, ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್, ಪಶುಪತಿ ಹೀಗೆ ದೊಡ್ಡ ತಾರಾಗಣ 'ಕಲ್ಕಿ 2898AD' ಚಿತ್ರದಲ್ಲಿದೆ. ಕೆಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ 'ಕಲ್ಕಿ 2898AD' ಚಿತ್ರತಂಡ ಇಟಲಿಯಲ್ಲಿ ಬೀಡು ಬಿಟ್ಟಿದೆ. ಪ್ರಭಾಸ್ ಹಾಗೂ ದಿಶಾ ಪಟಾನಿ ಕಾಣಿಸಿಕೊಂಡಿರುವ ಹಾಡೊಂದರ ಚಿತ್ರೀಕರಣ ಅಲ್ಲಿ ನಡೀತಿದೆ. ಅದಕ್ಕೆ ಸಂಬಂಧಿಸಿದ ಫೋಟೊವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಸ್ಟೈಲಿಶ್ ಲುಕ್‌ನಲ್ಲಿ ಪ್ರಭಾಸ್‌ನ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.
ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ 'ಕಲ್ಕಿ 2898AD' ಚಿತ್ರಕ್ಕಿದೆ. ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. 'ಸಲಾರ್' ಸಕ್ಸಸ್ ಸಂಭ್ರಮದಲ್ಲಿರುವ ಪ್ರಭಾಸ್ 'ಕಲ್ಕಿ 2898AD' ಸಿನಿಮಾ ಕೂಡ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಚಿತ್ರಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನೇ ಜೇಬಿಗಿಳಿಸಿದ್ದಾರೆ.

ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಶೂಟಿಂಗ್ ತಡವಾಗಿ ರಿಲೀಸ್ ಡೇಟ್ ಮುಂದೂಡುತ್ತಾ ಬರಲಾಯಿತು. ಹಲವು ಭಾಗಗಳಾಗಿ 'ಕಲ್ಕಿ 2898AD' ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಚಿತ್ರದಲ್ಲಿ ಮಹಾಭಾರತ ಕಾಲದಿಂದ 2898ADವರೆಗಿನ ಕಥೆ ಹೇಳುತ್ತಿದ್ದಾರೆ. 6000 ವರ್ಷಗಳ ಕಥೆ ಈ ಚಿತ್ರದಲ್ಲಿದೆ ಎಂದು ಇತ್ತೀಚೆಗೆ ನಿರ್ದೇಶಕರು ವಿವರಿಸಿದ್ದರು.


Click it and Unblock the Notifications











