ಪ್ರಭಾಸ್ ಮದುವೆ ಶಾಪಿಂಗ್ ಇಲ್ಲೇ; ದೊಡ್ಡಮ್ಮ ಶ್ಯಾಮಲಾ ಕಾಮೆಂಟ್ಸ್ ವೈರಲ್

ತೆಲುಗು ನಟ ಪ್ರಭಾಸ್ ಮದುವೆ ಯಾವಾಗ ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಮದುವೆ ಎಂದು ಈ ಹಿಂದೆ ಪ್ರಭಾಸ್ ಹೇಳಿದ್ದರು. ಆದರೆ ಏಳೆಂಟು ವರ್ಷ ಕಳೆದರೂ ಅದು ನಿಜವಾಗಲಿಲ್ಲ. ಸದ್ಯಕ್ಕೆ ಮದುವೆ ಬಗ್ಗೆ ಯಾವುದೇ ಆಲೋಚನೆ ಇಲ್ಲದೇ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿಯಾಗಿದ್ದಾರೆ.

ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಈಗಾಗಲೇ ವಿಶ್ವದಾದ್ಯಂಂತ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 'ರಾಜಾ ಸಾಬ್', 'ಸಲಾರ್‌-2', 'ಕಲ್ಕಿ 2898AD'-2, 'ಸ್ಪಿರಿಟ್', 'ಫೌಜಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಬಗ್ಗೆ ಬಹಳ ಆಸಕ್ತಿ ವಹಿಸಿರುವ ಯಂಗ್ ರೆಬಲ್ ಸ್ಟಾರ್ ಮದುವೆ ಬಗ್ಗೆ ಮೌನವಾಗಿದ್ದಾರೆ.

Prabhas Aunty Shyamala Devi interesting comments on his marriage shopping

ವಯಸ್ಸು 40 ದಾಟಿದ್ರು ಪ್ರಭಾಸ್ ಮದುವೆ ಬಗ್ಗೆ ಚಿಂತಿಸುತ್ತಿಲ್ಲ. ಈ ಹಿಂದೆ ಆತನ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು, ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಲೇ ಇದ್ದವು. ದೊಡ್ಡಪ್ಪ ಕೃಷ್ಣಂರಾಜು ಕೂಡ ಮದುವೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಅವರ ಬಳಿಕ ಪ್ರಭಾಸ್ ಮ್ಯಾರೇಜ್ ಟಾಪಿಕ್ ಸೈಲೆಂಟ್ ಆಗಿಬಿಟ್ಟಿದೆ. ದೊಡ್ಡಮ್ಮ ಶ್ಯಾಮಲಾ ಆಗಾಗ್ಗೆ ಪ್ರತಿಕ್ರಿಯಿಸುತ್ತಿರುತ್ತಾರೆ.

ನಮಗೂ ಪ್ರಭಾಸ್ ಮದುವೆ ಮಾಡಬೇಕು ಎಂದು ಆಸೆ ಇದೆ. ಆದರೆ ಯಾಕೊ ಕೂಡಿ ಬರುತ್ತಿಲ್ಲ. ಆದಷ್ಟು ಬೇಗ ಅವನನ್ನು ಮದುಮಗನಾಗಿ ನೋಡುವ ಆಸೆ ಇದೆ ಎನ್ನುತ್ತಲೇ ಇದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಸೇರಿದಂತೆ ಕೆಲ ನಟಿಯರ ಜೊತೆಗೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದ್ದು ಸುಳ್ಳಲ್ಲ. ಅವನು ಒಪ್ಪಿದರೆ ಯಾರ ಜೊತೆಗೆ ಬೇಕಾದರೂ ಮದುವೆ ಮಾಡಲು ಅಭ್ಯಂತರವಿಲ್ಲ ಎಂದು ಶ್ಯಾಮಲಾ ಹೇಳಿದ್ದರು.

Prabhas Aunty Shyamala Devi interesting comments on his marriage shopping

ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್' ಶೋನಲ್ಲಿ ಪ್ರಭಾಸ್ ಭಾಗಿ ಆಗಿದ್ದರು. ಆಗ ಕೂಡ ಮದುವೆ ಟಾಪಿಕ್ ಬಂದಿತ್ತು. ಹುಡುಗಿ ಸಿಗುತ್ತಿಲ್ಲ. ಮದುವೆಯ ನಂತರ ನನ್ನ ಮದುವೆ ಎಂದು ಹಾರಿಕೆಯ ಉತ್ತರ ನೀಡಿದ್ದರು. ಪರೋಕ್ಷವಾಗಿ ತಮಗೆ ಮದುವೆ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ ಎನ್ನುವಂತೆ ಪ್ರಭಾಸ್ ಮಾತನಾಡಿದ್ದರು.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸೀರೆ ಮಳಿಗೆ ಉದ್ಘಾಟನೆ ಸಮಾರಂಭಕ್ಕೆ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ಆಗಮಿಸಿದ್ದರು. ನಟ ಕೃಷ್ಣ ಅವರ ಪತ್ನಿ ಗಾಯತ್ರಿ ಹಾಗೂ ಅಭಿಲಾಷಾ ರೆಡ್ಡಿ ಎಂಬ ಮತ್ತೊಬ್ಬರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಮಳಿಗೆ ಉದ್ಘಾಟನೆ ಬಳಿಕ ಶ್ಯಾಮಲಾ ದೇವಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಪ್ರಭಾಸ್ ಮದುವೆ ಟಾಪಿಕ್ ಸಹ ಬಂದಿತ್ತು.

ಜರಿವಾರಂ ಸ್ಯಾರಿ ಶೋರೂಂ ತುಂಬಾ ಚೆನ್ನಾಗಿದೆ. ನನಗೂ ರೇಷ್ಮೆ ಸೀರೆಗಳು ಅಂದ್ರೆ ಬಹಳ ಇಷ್ಟ. ಇಲ್ಲಿನ ಕಲೆಕ್ಷನ್ ನೋಡಿ ಬಹಳ ಖುಷಿ ಆಯಿತು. ನನ್ನ ಆಪ್ತರಿಗೂ ಇಲ್ಲಿ ಬಂದು ಸೀರೆ ಕೊಂಡುಕೊಳ್ಳಲು ಹೇಳ್ತೀನಿ. ಪ್ರಭಾಸ್ ಮದುವೆಗೂ ಇಲ್ಲೇ ಶಾಪಿಂಗ್ ಮಾಡ್ತೀನಿ ಎಂದು ಶ್ಯಾಮಲಾ ದೇವಿ ಹೇಳಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

More from Filmibeat

English summary
Shyamala Devi Opens up about prabhas wedding.
Read more about: prabhas tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X