ನಿಮ್ಮನ್ನು ಮದುವೆ ಆಗಲು ಇರಬೇಕಾದ ಗುಣಗಳೇನು? ಲೇಡಿ ಫ್ಯಾನ್ ಪ್ರಶ್ನೆಗೆ ಪ್ರಭಾಸ್ ಪ್ರತಿಕ್ರಿಯೆ

ತೆಲುಗು ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮುಳುಗಿ ಹೋಗಿದ್ದಾರೆ. ನಿಜ ಜೀವನದಲ್ಲಿ ಮದುವೆ ಬಗ್ಗೆ ಯೋಚಿಸುತ್ತಿಲ್ಲ. ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂದು ಕೇಳಿ ಕೇಳಿ ಸುಸ್ತಾಗಿದ್ದಾರೆ. ವಯಸ್ಸು 40 ದಾಟಿದ್ರು ಆ ಬಗ್ಗೆ ಟಾಲಿವುಡ್ ಡಾರ್ಲಿಂಗ್ ಯೋಚಿಸಿದಂತೆ ಕಾಣ್ತಿಲ್ಲ.

ಸದ್ಯ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಜಮಾಯಿಸಿದ್ದರು. ಬಾಹುಬಲಿ ನಟನಿಗೆ ಮಹಿಳಾ ಅಭಿಮಾನಿ ಬಳಗ ದೊಡ್ಡದಿದೆ. ಮಹಿಳಾ ಅಭಿಮಾನಿಯೊಬ್ಬರು ನಿಮ್ಮನ್ನು ಮದುವೆ ಆಗಲು ನನಗೆ ಯಾವೆಲ್ಲಾ ಗುಣಗಳಿರಬೇಕು? ಎಂದು ಕೇಳಿದ್ದಾರೆ ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯೆ ಪ್ರಭಾಸ್ ಸುಮ್ಮನಾಗಿದ್ದಾರೆ.

Prabhas Avoids Marriage Talk at The Raja Saab Event Fans Left Wondering

ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರಭಾಸ್ ಗೆದ್ದಿದ್ದಾರೆ. ಬಹಳ ಹಿಂದಿನಿಂದ ಯಂಗ್ ರೆಬಲ್ ಸ್ಟಾರ್ ಮದುವೆ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ಪ್ರಭಾಸ್‌ಗೆ ಮದುವೆ ಮಾಡಲು ದೊಡ್ಡಪ್ಪ ಕೃಷ್ಣಂರಾಜು ಪ್ರಯತ್ನಿಸಿದ್ದರು. ಅವರ ಅಗಲಿಕೆ ಬಳಿಕ ಆ ವಿಚಾರ ತಣ್ಣಗಾಗಿತ್ತು. ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ಮಾತನಾಡಿ ಆದಷ್ಟು ಬೇಗ ಪ್ರಭಾಸ್ ಮದುವೆ ಮಾಡುತ್ತೇವೆ ಎಂದು ಹೇಳುತ್ತಾ ಬರ್ತಿದ್ದಾರೆ. ಆದರೆ ಅದು ನಿಜವಾಗಲೇ ಇಲ್ಲ.

ಟಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್. ಸ್ಟಾರ್ ನಟ, ಕೋಟ್ಯಾಧಿಪತಿ. ಆದರೆ ಮದುವೆ ಅಂದರೆ ಮಾರುದೂರ ಓಡುತ್ತಿದ್ದಾರೆ. ಈ ಹಿಂದೆ ಸಾಕಷ್ಟು ನಟಿಯರ ಜೊತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಅನುಷ್ಕಾ ಜೊತೆ ಹಸೆಮಣೆ ಏರುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಯಾವುದು ನಿಜವಾಗಲಿಲ್ಲ. ಅದೇ ಕಾರಣಕ್ಕೆ ಮಹಿಳಾ ಅಭಿಮಾನಿಯೊಬ್ಬರು ಧೈರ್ಯಮಾಡಿ ಕೇಳಿದ್ದಾರೆ. ನೆರೆದ ಸಮೂಹದ ನಡುವೆ "ನಿಮ್ಮನ್ನು ಮದುವೆ ಆಗಲು ನಮಗೇನು ಗುಣಗಳಿರಬೇಕು?" ಎಂದು ಭಿತ್ತಿಪತ್ರದಲ್ಲಿ ಬರೆದು ತೋರಿಸಿದ್ದಾರೆ. ಅದನ್ನು ನಿರೂಪಕಿ ಸುಮಾ ಓದಿ ಪ್ರಭಾಸ್ ಬಳಿ ಕೇಳಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಪ್ರಭಾಸ್ "ಅದು ಗೊತ್ತಿಲ್ಲದೇ ನಾನು ಸುಮ್ಮನಿದ್ದೀನಿ" ಎಂದು ಹೇಳಿ ಸುಮ್ಮನಾಗಿದ್ದಾರೆ. ಆ ಮೂಲಕ ಮದುವೆ ಪ್ರಸ್ತಾಪವನ್ನು ಅಲ್ಲಿಗೆ ಬಿಟ್ಟಿದ್ದಾರೆ. ಬಾಲಿವುಡ್ ಮೋಸ್ಟ್ ಎಲಿಜಬಲ್ ಬ್ಯಾಚ್ಯುಲರ್ ಎನಿಸಿಕೊಂಡಿದ್ದ ಸಲ್ಮಾನ್ ಖಾನ್ ಈಗ ಸೀನಿಯರ್ ಸಿಟಿಜನ್(60 ವರ್ಷ ವಯಸ್ಸು) ಆಗಿಬಿಟ್ಟಿದ್ದಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಭಾಸ್ ಇನ್ನು ಮದುವೆ ಆಗೋದು ಯಾವಾಗ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ.

ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾ 'ದಿ ರಾಜಾಸಾಬ್' ಸಂಕ್ರಾಂತಿಗೆ ಬಿಡುಗಡೆ ಆಗ್ತಿದೆ. ಜನವರಿ 9ರಂದು ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟೀಸರ್, ಟ್ರೈಲರ್ ಬಿಡುಗಡೆಯಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಸೇರಿ ಘಟಾನುಘಟಿ ಕಲಾವಿದರು 'ದಿ ರಾಜಾ ಸಾಬ್' ಚಿತ್ರದಲ್ಲಿ ನಟಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ.

ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ನಾಯಕಿಯರಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಬೊಮನ್ ಇರಾನಿ, ಜರೀನಾ ವಹಾಬ್, ವೆನ್ನೆಲ ಕಿಶೋರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ಎಸ್. ತಮನ್ ಸಂಗೀತ ಈ ಚಿತ್ರಕ್ಕಿದೆ. ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಲು 'ರಾಜಾ ಸಾಬ್' ಸಿನಿಮಾ ಸೋತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.

More from Filmibeat

Read more about: prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X