ನನಸಾಯ್ತು ನಟ ಪ್ರಭಾಸ್ ಅತಿ ದೊಡ್ಡ ಕನಸು!
ನಟ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾ ಮುಗಿದ ಬಳಿಕ ಮತ್ತೊಂದು ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆದಿಪುರುಷ್ ಸಿನಿಮಾದ ಬಳಿಕ ಈಗ ಪ್ರಾಜೆಕ್ಟ್ ಕೆ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಆದರೆ ಸಿನಿಮಾಗಿಂತಲೂ ಹೆಚ್ಚಾಗಿ ಈ ಚಿತ್ರದ ಮೂಲಕ ನಟ ಪ್ರಭಾಸ್ ಅವರ ಅತಿ ದೊಡ್ಡ ಕನಸು ನನಸಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಟ ಪ್ರಭಾಸ್ ಹಂಚಿಕೊಂಡಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ 'ಪ್ರಾಜೆಕ್ಟ್ ಕೆ' ಸಿನಿಮಾದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಭಾಗಿ ಆಗಿದ್ದಾರೆ. ಶೂಟಿಂಗ್ ಮುಗಿದ ಬಳಿಕ ತಮ್ಮ ಹಲವು ವರ್ಷದ ದೊಡ್ಡ ಕನಸು ನನಸಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ಶೂಟಿಂಗ್ ಶುರು ಆಗುವುದಕ್ಕೂ, ಪ್ರಭಾಸ್ ಕನಸು ನನಸಾಗುವುದಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ಇಲ್ಲೇ ಇರೋದು ವಿಚಾರ. ಅಮಿತಾಬ್ ಬಚ್ಚನ್ ಜೊತೆಗೆ ನಟಿಸಬೇಕು, ತೆರೆಹಂಚಿಕೊಳ್ಳಬೇಕು ಎನ್ನುವುದು ಪ್ರಭಾಸ್ ಅವರ ಕನಸಾಗಿತ್ತಂತೆ.
ಬಿಗ್ ಬಿ ಜೊತೆ ಪ್ರಭಾಸ್ ಮೊದಲ ದಿನದ ಶೂಟಿಂಗ್!
ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್‌ನಲ್ಲಿ ಅಮಿತಾಬ್ ಬಚ್ಚನ್ ಭಾಗಿ ಆಗಿದ್ದಾರೆ. ಪ್ರಭಾಸ್ ಮತ್ತು ಅಮಿತಾಬ್ ಕಾಂಬಿನೇಷನ್‌ನ ಮೊದಲ ದಿನದ ಶೂಟಿಂಗ್ ಮುಗಿದೆ. ಆದರೆ ಶೂಟಿಂಗ್ ಮುಗಿದ ಬಳಿಕ ಪ್ರಭಾಸ್ ಅಚ್ಚರಿ ವಿಚಾರ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಅವರ ಫೋಟೋ ಹಂಚಿಕೊಂಡ ಪ್ರಭಾಸ್ " ಇದು ನನ್ನ ಪಾಲಿಗೆ ಕನಸು, ನನಸಾದಂತೆ. ಮೇರು ನಟ ಅಮಿತಾಬ್ ಬಚ್ಚನ್ ಸರ್ ಜೊತೆಗೆ ಮೊದಲ ದಿನದ ಶೂಟಿಂಗ್ ಮುಗಿಸಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ವಿಶೇಷ ಪಾತ್ರ!
ನಟ ಅಮಿತಾಬ್ ಬಚ್ಚನ್ ಸೌತ್ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಲಿದ್ದಾರೆ. ಈ ಹಿಂದೆ ಚಿರಂಜಿವಿಯ '' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಪ್ರಭಾಸ್ ಜೊತೆಗೆ ಪ್ರಜೆಕ್ಟ್ ಕೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಪಾತ್ರ ಹೇಗೆ ಇರಲಿದೆ ಎನ್ನು ಬಗ್ಗೆ ಚಿತ್ರತಂಡ ಸುಳಿವು ಬಿಟ್ಟು ಕೊಟ್ಟಿಲ್ಲ. ಹಾಗಾಗಿ ಕುತೂಹಲ ಹೆಚ್ಚಾಗಿದೆ. ಇನ್ನು ಪ್ರಭಾಸ್ ಮತ್ತು ಅಮಿತಾಬ್ ಒಟ್ಟಿಗೆ ತೆರೆಮೇಲೆ ಬರ್ತಾರೆ ಅಂದರೆ ಅದು ಕಣ್ಣಿಗೆ ಹಬ್ಬವೇ ಸರಿ.

ಮೂರು ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ!
ನಟ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಟ್ಟಿಗೆ ಮೂರು ಚಿತ್ರಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ಒಂದು ಕಡೆ 'ಆದಿಪರುಷ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೀತಿದೆ. ಮತ್ತೊಂದು ಕಡೆ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ಶುರುವಾಗಿದೆ. ಇನ್ನು ಸಾರ್ ಸಿನಿಮಾದ ಚಿತ್ರೀಕರಣ ಕೂಡ ಬಾಕಿ ಇದೆ. 'ಸಲಾರ್' ಮತ್ತು 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್ ಮಾಡಿ ಮುಗಿಸಿದರೆ ಪ್ರಭಾಸ್ ಅವರ ಮೂರು ಚಿತ್ರಗಳ ಶೂಟಿಂಗ್ ಮುಗಿದಂತೆ ಆಗುತ್ತದೆ. ಇನ್ನು ರಿಲೀಸ್ ಮಾತ್ರ ಬಾಕಿ ಉಳಿದಿರುತ್ತದೆ.

ಪ್ರಭಾಸ್ ಹೊಸ ಚಿತ್ರ ಪ್ರಕಟ!
ಬಾಹುಬಲಿ ಚಿತ್ರದ ಸರಣಿಗಾಗಿ ಹೆಚ್ಚು ಸಮಯ ತೆಗೆದುಕೊಂಡಿದ್ದ ಪ್ರಭಾಸ್ ಈಗ ಸಾಲು, ಸಾಲಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. 'ರಾಧೆ ಶ್ಯಾಮ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದಿಪುರುಷ್ ಚಿತ್ರದ ಶೂಟಿಂಗ್ ಮುಗಿದೆ. ಸಲಾರ್, ಪ್ರಾಜೆಕ್ಟ್ ಕೆ ಚಿತ್ರದ ಕೆಲಸಗಳು ನಡೆಯುತ್ತಿವೆ. ಈ ಚಿತ್ರಗಳ ನಂತರ ಸ್ಪಿರಿಟ್ ಶುರು ಮಾಡಲಿದ್ದಾರೆ. ಜೊತೆಗೆ ಈಗ ಪ್ರಭಾಸ್ ಹೊಸ ಸಿನಿಮಾ ಒಂದು ಪ್ರಕಟ ಆಗಿದೆ. ನಿರ್ದೇಶಕ ಮಾರುತಿ ಕಥೆಯಲ್ಲಿ ಪ್ರಭಾಸ್ ಅಭಿನಯಿಸಲಿದ್ದಾರೆ.


Click it and Unblock the Notifications











