ಪ್ರಭಾಸ್ 'ಫೌಜಿ' ಚಿತ್ರದಲ್ಲಿ ಕನ್ನಡ ನಟಿಗೆ ಸುವರ್ಣಾವಕಾಶ; ಖುಷಿ ಹಂಚಿಕೊಂಡ ಚೆಲುವೆ

ಬಾಹುಬಲಿ ಪ್ರಭಾಸ್ ಹುಟ್ಟಹಬ್ಬದ ಸಂಭ್ರಮದಲ್ಲಿದ್ದಾರೆ ಇದೇ ಸಡಗರದಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ಗಳು ಸಿಕ್ತಿದೆ. ಯಂಗ್ ರೆಬಲ್ ಸ್ಟಾರ್ ಮುಂದಿನ ಸಿನಿಮಾಗಳ ಅಪ್‌ಡೇಟ್, ಹೊಸ ಪೋಸ್ಟರ್ ರಿವೀಲ್ ಆಗಿದೆ. ಪ್ರಭಾಸ್ ಹಾಗೂ ಹನು ರಾಘವಪುಡಿ ಜೋಡಿಯ ಸಿನಿಮಾ ಟೈಟಲ್ ರಿವೀಲ್ ಆಗಿದೆ.

3 ವರ್ಷಗಳ ಹಿಂದೆ 'ಸೀತಾರಾಮಂ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದ ಹನು ರಾಘವಪುಡಿ ಸದ್ಯ ಪ್ರಭಾಸ್ ಜೊತೆ ಕೈಜೋಡಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗ್ತಿದೆ. ಐತಿಹಾಸಿಕ ಕಥಾಹಂದರದ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಕನ್ನಡ ನಟಿಗೂ ಅವಕಾಶ ಸಿಕ್ಕಿದೆ.

Prabhas Birthday First Look of Fauji Unveiled Kannada Actress Chaitra Achar Joins the Cast

ಪ್ರಭಾಸ್ ಹಾಗೂ ಹನು ಚಿತ್ರಕ್ಕೆ 'ಫೌಜಿ' ಎನ್ನುವ ಟೈಟಲ್ ಪರಿಶೀಲನೆಯಲ್ಲಿತ್ತು ಚಿತ್ರತಂಡ. ಇದೀಗ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ಸಮೇತ ಅದೇ ಟೈಟಲ್‌ ಅನ್ನು ಕನ್ಫರ್ಮ್ ಮಾಡಿದ್ದಾರೆ. ಪೋಸ್ಟರ್ ಸಖತ್ ವೈರಲ್ ಆಗ್ತಿದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಟೀ-ಸೀರಿಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಬಹುಕೋಟಿ ವೆಚ್ಚದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

'ಫೌಜಿ' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಇಮಾನ್ ಇಸ್ಮೈಲ್ ನಟಿಸುತ್ತಿದ್ದಾರೆ. ಇನ್ನುಳಿಂದಂತೆ ಮಿಥುನ್ ಚಕ್ರವರ್ತಿ, ಜಯಪ್ರದ, ಅನುಪಮ್ ಖೇರ್ ಚಿತ್ರದ ತಾರಾಗಣದಲ್ಲಿದ್ದಾರೆ. ಕನ್ನಡ ನಟಿ ಚೈತ್ರಾ ಆಚಾರ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಹೌದು ಚೈತ್ರಾ ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ನಟಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿ ಕೂಡ ಚೈತ್ರಾ ಆಚಾರ್ ಗುರ್ತಿಸಿಕೊಂಡಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸೈಡ್-B ಸಿನಿಮಾ ಮೂಲಕ ಆಕೆ ತೆಲುಗು ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. 'ಫೌಜಿ' ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ಆಕೆ ಸಂತಸ ವ್ಯಕ್ತಪಡಿಸಿದ್ದು ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. "ಹನು ರಾಘವಪುಡಿ ಅವರ ಈ ಸುಂದರ ಚಿತ್ರದ ಭಾಗವಾಗಲು ಉತ್ಸುಕಳಾಗಿದ್ದೇನೆ" ಎಂದು ಚೈತ್ರಾ ಟ್ವೀಟ್ ಮಾಡಿದ್ದಾರೆ.

2019ರಲ್ಲಿ 'ಮಹಿರ' ಸಿನಿಮಾ ಮೂಲಕ ಚೈತ್ರಾ ಆಚಾರ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಆ ದೃಶ್ಯ, ಗಿಲ್ಕಿ, ತಲೆಗಂಡ, ಟೋಬಿ, ಬ್ಲಿಂಕ್ ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಉತ್ತರಕಾಂಡ, ಸ್ಟ್ರಾಬೆರಿ ಸೇರಿ ಒಂದಷ್ಟು ಸಿನಿಮಾಗಳು ಆಕೆಯ ಕೈಯಲ್ಲಿದೆ. ಕಳೆದ ವಾರ ಚೈತ್ರಾ ನಟಿಸಿದ್ದ 'ಮಾರ್ನಮಿ' ಸಿನಿಮಾ ತೆರೆಗೆ ಬಂದಿತ್ತು. ಒಂದು ತಮಿಳು ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇದೀಗ 'ಫೌಜಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

"ನಮ್ಮ ಇತಿಹಾಸದಲ್ಲಿ ಮುಚ್ಚಿ ಹೋದ ಅಧ್ಯಾಯದ ಸೈನಿಕನ ಅತ್ಯಂತ ಧೈರ್ಯಶಾಲಿ ಕಥೆ" ಎಂದು 'ಫೌಜಿ' ಚಿತ್ರವನ್ನು ಚಿತ್ರತಂಡ ವಿಶ್ಲೇಷಿಸುತ್ತಿದೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಐತಿಹಾಸಿಕ ಕಥಾಹಂದರದ 'ಸೀತಾರಾಮಂ' ಸಿನಿಮಾ ಕ್ಲಾಸ್ ಮಾತ್ರವಲ್ಲದೇ ಮಾಸ್ ಪ್ರೇಕ್ಷಕರನ್ನು ರಂಜಿಸಿತ್ತು. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಜೊತೆ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ ಹನು ನಿರ್ದೇಶನದ 'ಫೌಜಿ' ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇನ್ನು ಚೈತ್ರಾ ಗಾಯಕಿಯಾಗಿಯೂ ಗಮನ ಸೆಳೆದಿದ್ದಾರೆ. 'ಗರುಡ ಗಮನ ವೃಷಭ ವಾಹನ' ಚಿತ್ರದ 'ಸೋಜುಗಾದ ಸೂಜಿ ಮಲ್ಲಿಗೆ' ಹಾಡು ಹಾಡಿ ಆಕೆ ಕಮಾಲ್ ಮಾಡಿದ್ದರು. ಆಕೆಯ ಗಾಯನಕ್ಕೆ ಸಂಗೀತ ಪ್ರೇಮಿಗಳು ಮನಸೋತಿದ್ದರು. ಬಳಿಕ 'ಟಗರು ಪಲ್ಯ', 'ಶಾಖಾಹಾರಿ' ಚಿತ್ರಗಳಿಗೂ ಹಾಡು ಹಾಡಿದ್ದರು. 'ಫೌಜಿ' ಚಿತ್ರದಲ್ಲಿ ಚೈತ್ರಾ ಬಣ್ಣ ಹಚ್ಚಿ ನಟಿಸ್ತಾರಾ? ಹಾಡು ಹಾಡುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: prabhas chaithra achar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X