'ಆದಿಪುರುಷ್' ಸೀತೆಗೆ ನಟ ಪ್ರಭಾಸ್ ಪ್ರೀತಿಯ ವಿಶ್

ಬಾಲಿವುಡ್ ಖ್ಯಾತ ನಟಿ ಕೃತಿ ಸನೊನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೃತಿ ಇಂದು ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೃತಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

ವಿಶೇಷ ಎಂದರೆ ಕೃತಿಗೆ ಟಾಲಿವುಡ್ ಸ್ಟಾರ್ ಪ್ರಭಾಸ್ ಪ್ರೀತಿಯ ವಿಶ್ ಕಳುಹಿಸಿದ್ದಾರೆ. ಪ್ರಭಾಸ್ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. ಕೃತಿಯ ಸುಂದರ ಫೋಟೋ ಶೇರ್ ಮಾಡಿ, ಹುಟ್ಟುಹಬ್ಬ ಶುಭಾಶಯಗಳು ಕೃತಿ ಎಂದು ಹೇಳಿದ್ದಾರೆ.

ಅಂದಹಾಗೆ ಕೃತಿ ಸದ್ಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಗೆ ನಾಯಕಿಯಾಗಿ ಕೃತಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಪ್ರಭಾಸ್ ಮತ್ತು ಕೃತಿ ತೆರೆಹಂಚಿಕೊಳ್ಳುತ್ತಿದ್ದು, ಈ ಅಪರೂಪದ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Prabhas birthday wishes to Adipurush co-star Kriti Sanon

ಅಂದಹಾಗೆ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಕೃತಿ ಸೀತೆಯಾಗಿ ಬಣ್ಣ ಹಚ್ಚಿದ್ದರೆ. ಈಗಾಗಲೇ ಸಾಕಷ್ಟು ಭಾಗದ ಚಿತ್ರೀಕರಣ ಮುಗಿಸಿದೆ ಸಿನಿಮಾತಂಡ. ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ನಲ್ಲಿ ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಕೃತಿ ಪ್ರಭಾಸ್ ಜೊತೆಗಿನ ಭಾಗದ ಚಿತ್ರೀಕರಣ ಮುಗಿಸಿದ್ದು, ಸೈಫ್ ಜೊತೆಗಿನ ಪ್ರಮುಖ ಭಾಗದ ಚಿತ್ರೀಕರಣಕ್ಕೆ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಆದಿಪುರುಷ್ ಚಿತ್ರೀಕರಣದ ಜೊತೆಗೆ ಕೃತಿ ಇತ್ತೀಚಿಗಷ್ಟೆ 'ಮಿಮಿ' ಸಿನಿಮಾ ಮೂಲಕ ಒಟಿಟಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮಿಮಿ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

More from Filmibeat

English summary
Tollywood Actor Prabhas birthday wishes to Actress Kriti Sanon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X