For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ ನಟ ಪ್ರಭಾಸ್: ಇದರ ಬೆಲೆ ಎಷ್ಟು?

  |

  ಟಾಲಿವುಡ್‌ನ ಸ್ಟಾರ್ ನಟ, ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಪ್ರಭಾಸ್ ನಿನ್ನೆ (ಮಾರ್ಚ್ 28) ದುಬಾರಿ ಕಾರನ್ನು ಖರೀದಿಸಿದ್ದಾರೆ. ಪ್ರಭಾಸ್ ಮನೆಗೆ ಆಗಮಿಸಿದ ಹೊಸ ಸದಸ್ಯನ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  Prabha's New Lamborghini Aventador : ಪ್ರಭಾಸ್ ಮನೆಗೆ ಬಂದ ಹೊಸ ಅಥಿತಿ | Filmibeat Kannada

  ಡಾರ್ಲಿಂಗ್ ಅಭಿಮಾನಿಗಳು ಹೊಸ ಕಾರಿನ ಫೋಟೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ ಪ್ರಭಾಸ್ ಖರೀದಿಸಿದ್ದು, ಲ್ಯಾಂಬರ್ಗಿನಿ ಅವೆಂಟಡಾರ್ ಎಸ್ ರೋಡ್ ಸ್ಟಾರ್ ಕಾರ್. ಭಾರತದಲ್ಲಿ ಇದರ ಬೆಲೆ 5.6 ಕೋಟಿ ರೂ. ಕಿತ್ತಾಳೆ ಬಣ್ಣದ ಕಾರು ಇದಾಗಿದ್ದು, ಪ್ರಭಾಸ್ ಹೊಸ ಕಾರನ್ನು ಚಲಾಯಿಸಿಕೊಂಡು ಮನೆಗೆ ತೆರಳುತ್ತಿರುವ ವಿಡಿಯೋವನ್ನು ಅಭಿಮಾನಿಗಳು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಪ್ರಭಾಸ್‌ಗಾಗಿ ತೆಲುಗು ಕಲಿಯುತ್ತಿರುವ ಬಾಲಿವುಡ್ ನಟಿ ಕೃತಿ ಸನೂನ್

  ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದ್ದು, ಅನೇಕ ಕಲಾವಿದರ ಬಳಿ ಈ ಕಾರನ್ನು ಹೊಂದಿದ್ದಾರೆ. ಅಂದಹಾಗೆ ಪ್ರಭಾಸ್ ಈ ಹಿಂದೆ ಸಂದರ್ಶನವೊಂದರಲ್ಲಿ ಲ್ಯಾಂಬರ್ಗಿನಿ ಖರೀದಿಸುವ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಆ ಕನಸು ನನಸಾಗಿದೆ. ಇನ್ನು ಪ್ರಭಾಸ್ ಬಳಿ ಈಗಾಗಲೇ ಬಿಎಂಡಬ್ಲ್ಯು, ಮರ್ಸಿಡಿಸ್ ಮತ್ತು ಆಡಿ ಕ್ಯೂ 5 ಕಾರುಗಳಿವೆ.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಭಾಸ್ ಸದ್ಯ ರಾಧೆ ಶ್ಯಾಮ್ ಸಿನಿಮಾ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಎರಡು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಪ್ರಭಾಸ್ ಎರಡು ಸಿನಿಮಾವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

  English summary
  Telugu Actor Prabhas buys a new orange lamborghini Aventador s roadster car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X