ರಾಧೆ-ಶ್ಯಾಮ್: ಪ್ರಭಾಸ್ ಬಟ್ಟೆಗೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತೆ?
ಪ್ರಭಾಸ್-ಪೂಜಾ ಹೆಗ್ಡೆ ಅಭಿನಯದ 'ರಾಧೆ-ಶ್ಯಾಮ್' ಸಿನಿಮಾ ಜುಲೈ 30 ರಂದು ತೆರೆಗೆ ಬರಲಿದೆ. ಸಿನಿಮಾದ ಟೀಸರ್ ಕೆಲವು ಪೋಸ್ಟರ್‌ಗಳು ಬಿಡುಗಡೆ ಆಗಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಸಖತ್ ಭಿನ್ನ ಲುಕ್‌ನಲ್ಲಿ ಕಾಣುತ್ತಿದ್ದಾರೆ.
ಕೆಲವು ದಶಕಗಳ ಹಿಂದೆ ಪ್ಯಾರಿಸ್ ನಲ್ಲಿ ನಡೆವ ಪ್ರೇಮ ಕತೆ 'ರಾಧೆ-ಶ್ಯಾಮ್' ಆಗಿದ್ದು, ಅದೇ ಕಾಲದ ವಾಹನ, ಉಡುಗೆ, ರೈಲ್ವೆ ಸ್ಟೇಷನ್ ಗಳನ್ನು ಬಳಸಲಾಗಿದೆ. ಅದರಲ್ಲಿಯೂ ಕೇವಲ ಉಡುಗೆಗೆ ಮಾತ್ರವೇ ಕೋಟ್ಯಂತರ ಹಣವನ್ನು ಸಿನಿಮಾದ ನಿರ್ಮಾಪಕರು ಖರ್ಚು ಮಾಡಿದ್ದಾರೆ.
ಈಗಾಗಲೇ ಪೋಸ್ಟರ್, ಟೀಸರ್‌ಗಳಲ್ಲಿ ನೋಡಿರುವಂತೆ 'ರಾಧೆ-ಶ್ಯಾಮ್' ನಲ್ಲಿ ಪ್ರಭಾಸ್ ತೊಟ್ಟಿರುವ ಉಡುಗೆಗಳು ಹೊಸ ರೀತಿಯಲ್ಲಿವೆ. ಪ್ರಭಾಸ್ ಉಡುಗೆಯಲ್ಲಿ 'ಓಲ್ಡ್ ಲುಕ್' ನ ಜೊತೆಗೆ ವಿಭಿನ್ನತೆಯೂ ಇದೆ. ಜೊತೆಗೆ ಸ್ಟೈಲ್ ಸಹ ಇದೆ.

ಪ್ರಭಾಸ್ ಉಡುಗೆಗಳಿಗಾಗಿ ಕೋಟ್ಯಂತರ ಖರ್ಚು
ರಾಧೆ-ಶ್ಯಾಮ್ ಸಿನಿಮಾದಲ್ಲಿ ಕೇವಲ ಪ್ರಭಾಸ್ ಅವರ ಉಡುಗೆಗಾಗಿ ಮಾತ್ರವೇ 6 ಕೋಟಿ ಹಣ ಖರ್ಚು ಮಾಡಲಾಗಿದೆಯಂತೆ. ಪ್ರಭಾಸ್ ಉಡುಗೆಯನ್ನು ಡಿಸೈನ್ ಮಾಡಲೆಂದೇ ವಿಶೇಷ ಕಾಸ್ಟ್ಯೂಮ್ ಡಿಸೈನರ್ ಅನ್ನು ನೇಮಿಸಲಾಗಿತ್ತಂತೆ.

70 ರ ದಶಕದ ಪ್ಯಾರಿಸ್ ಉಡುಗೆಗಳ ಬಗ್ಗೆ ಸಂಶೋಧನೆ
ರಾಧೆ-ಶ್ಯಾಮ್ ನಲ್ಲಿ ಪ್ರಭಾಸ್ ತೊಟ್ಟಿರುವ ಉಡುಗೆಗಳು ಪ್ಯಾರಿಸ್‌ನಲ್ಲಿ 1960-70 ರ ದಶಕದಲ್ಲಿ ದೊರೆಯುವ ಉಡುಗೆಗಳಾಗಿದ್ದು, ಆ ಕಾಲದ ಉಡುಗೆಗಳ ಬಗ್ಗೆ ಸಂಶೋಧನೆ ನಡೆಸಿ, ಆ ಉಡುಗೆಗಳಿಗೆ ಇನ್ನಷ್ಟು ಹೊಸ ರಂಗು ತುಂಬಿ ಪ್ರಭಾಸ್ ಗೆ ತೊಡಿಸಲಾಗಿದೆ.

ಪ್ಯಾರಿಸ್ ಹಾಗೂ ಭಾರತೀಯ ಡಿಸೈನರ್‌ಗಳು
ಪೂಜಾ ಹೆಗ್ಡೆ ಗೆ ಸಹ ಬಹು ಭಿನ್ನ ರೀತಿಯ ಉಡುಗೆಗಳನ್ನು ಸಿನಿಮಾದಲ್ಲಿ ನೀಡಲಾಗಿದೆ. ಪ್ಯಾರಿಸ್‌ನ ಸ್ಥಳೀಯ ಫ್ಯಾಷನ್ ಡಿಸೈನರ್ ಹಾಗೂ ಭಾರತದ ಫ್ಯಾಷನ್ ಡಿಸೈನರ್ ಸೇರಿಕೊಂಡು ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನಿಂಗ್ ಮಾಡಿದ್ದಾರೆ.

1960-70 ರ ದಶಕದ ಪ್ಯಾರಿಸ್ ಅನ್ನು ಮರುಸೃಷ್ಟಿಸಲಾಗಿದೆ
1960-70 ರ ದಶಕದ ಪ್ಯಾರಿಸ್ ಅನ್ನು ರಾಧೆ-ಶ್ಯಾಮ್ ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. ಸಿನಿಮಾದಲ್ಲಿ ಅವೇ ಕಾಲದ ವಾಹನಗಳು, ಉಡುಗೆ, ಪೋಸ್ಟರ್‌ಗಳನ್ನು ಬಳಸಲಾಗಿದೆ. ಇತ್ತೀಚೆಗೆ ಬಿಡುಗಡೆ ಆದ ಟೀಸರ್‌ನಲ್ಲಿ 70 ರ ದಶಕದ ಕಲ್ಲಿದ್ದಲು ಎಂಜಿನ್‌ನ ರೈಲನ್ನು ತೋರಿಸಲಾಗಿತ್ತು.


Click it and Unblock the Notifications











