'ಸಾಹೋ' ಸೋಲಿನ ಬಳಿಕ ಬಾಲಿವುಡ್ ಗೆ ಶಾಕ್ ಕೊಟ್ಟ ಪ್ರಭಾಸ್!
ಬಾಹುಬಲಿ ಚಿತ್ರದ ಬಳಿಕ ತೆಲುಗು ನಟ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿ ನಿಂತರು. ಸೌತ್ ಇಂಡಸ್ಟ್ರಿಯಲ್ಲಿ ಹವಾ ಮಾಡುತ್ತಿದ್ದ ಡಾರ್ಲಿಂಗ್ ಬೌಂಡರಿ ದಾಟಿ ಹೆಜ್ಜೆಯಿಟ್ಟರು. ಅದರ ಪರಿಣಾಮ 'ಸಾಹೋ' ಎಂಬ ಮೆಗಾ ಚಿತ್ರವನ್ನ ಕೈಗೆತ್ತಿಕೊಂಡು ಬಾಲಿವುಡ್ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದರು.
ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಕ್ಸಸ್ ಕಂಡರೆ, ವಿಶ್ವದ ಮಾರುಕಟ್ಟೆಗೆ ಲಗ್ಗೆಯಿಡಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದ ಪ್ರಭಾಸ್ ಗೆ ಅಂದುಕೊಂಡಂತೆ ಎಲ್ಲವೂ ನಡೆದಿತ್ತು.
ಆದರೆ, ಸಾಹೋ ಸಿನಿಮಾ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತಾದರೂ, ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸೋಲು ಕಂಡಿತು. ಇದೀಗ, ಈ ಸೋಲನ್ನ ಮರೆಯಲು ಪ್ರಭಾಸ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ಅಷ್ಟಕ್ಕೂ, ಪ್ರಭಾಸ್ ಮುಂದಿನ ನಡೆ ಏನು? ಮುಂದೆ ಓದಿ....

ಪ್ರಭಾಸ್ ಮುಂದಿನ ಸಿನಿಮಾ 'ಜಾನ್'
'ಸಾಹೋ' ಸಿನಿಮಾದ ಬಳಿಕ ಪ್ರಭಾಸ್ ಕೈಗೆತ್ತಿಕೊಂಡಿರುವ ಚಿತ್ರ 'ಜಾನ್' ಎಂದು ಹೇಳಲಾಗಿದೆ. ಇದು ಪಕ್ಕಾ ರೋಮ್ಯಾಂಟಿಕ್ ಸಿನಿಮಾವಾಗಿದ್ದು, ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಇದು ಹಿಂದಿ ಆಡಿಯೆನ್ಸ್ ಗೆ ನಿರಾಸೆ ತಂದಿದೆ ಎಂಬ ವಿಚಾರ ಈಗ ಬಿಟೌನ್ ಗಲ್ಲಿಯಲ್ಲಿ ಕೇಳಿಬರುತ್ತಿದೆ.

ಹಿಂದಿಯಲ್ಲಿಲ್ಲ ಪ್ರಭಾಸ್ ಸಿನಿಮಾ
ಸದ್ಯದ ಮಾಹಿತಿ ಪ್ರಕಾರ, ಪ್ರಭಾಸ್ ಮುಂದಿನ ಸಿನಿಮಾ ಜಾನ್ ಹಿಂದಿಯಲ್ಲಿ ಬಿಡುಗಡೆಯಾಗುವುದಿಲ್ಲವಂತೆ. ಬಹುದೊಡ್ಡ ಮಟ್ಟದಲ್ಲಿ ಹಿಂದಿ ಪ್ರೇಕ್ಷಕರನ್ನ ಸೆಳೆದುಕೊಂಡಿರುವ ಪ್ರಭಾಸ್ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂದಿನ ಎರಡ್ಮೂರು ಚಿತ್ರಗಳನ್ನ ಸೌತ್ ಗೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಿದ್ದಾರಂತೆ.

ದೊಡ್ಡ ಚಿತ್ರದೊಂದಿಗೆ ಬಾಲಿವುಡ್ ಗೆ!
ಹಿಂದಿ ಪ್ರೇಕ್ಷಕರಿಗೆ ಸದ್ಯಕ್ಕೆ ಬ್ರೇಕ್ ಕೊಡಲಿರುವ ಪ್ರಭಾಸ್, ದೊಡ್ಡ ಪ್ರಾಜೆಕ್ಟ್ ಜೊತೆ ಬರುವ ತಯಾರಿಯಲ್ಲಿದ್ದಾರಂತೆ. ಸದ್ಯಕ್ಕೆ ತೆಲುಗಿಗೆ ಮಾತ್ರ ಪೋಕಸ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಾಹೋ ಸಿನಿಮಾ ಸೋಲು ಕಂಡಿದ್ದು, ಪ್ರಭಾಸ್ ಬಾಲಿವುಡ್ ಭವಿಷ್ಯದ ಮೇಲೆ ವ್ಯತ್ಯಾಸವಾಗಬಾರದು ಎಂಬ ಕಾರಣಕ್ಕೆ, ಅದನ್ನ ಹಾಗೆ ಉಳಿಸಿಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆಯಂತೆ.

'ಸಾಹೋ' ಎಷ್ಟು ಗಳಿಸಿದೆ?
ಚೊಚ್ಚಲ ನಿರ್ದೇಶಕ ಸುಜಿತ್ ನಿರ್ದೇಶನ ಮಾಡಿದ್ದ ಸಾಹೋ ಸಿನಿಮಾ ಸುಮಾರು 350 ಕೋಟಿ ವೆಚ್ಚದಲ್ಲಿ ತಯಾರಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ 430 ಕೋಟಿವರೆಗೂ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದು ಚಿತ್ರತಂಡಕ್ಕಾಗಲಿ ಅಥವಾ ಪ್ರಭಾಸ್ ಗಾಗಲಿ ಖುಷಿ ಕೊಟ್ಟಿಲ್ಲ ಎನ್ನುವುದು ವಾಸ್ತವ.


Click it and Unblock the Notifications











