For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾ ಯಾವಾಗ? ಉತ್ತರ ಕೊಟ್ಟ ನಿರ್ದೇಶಕ

  |

  ಇದೇ ಮೊದಲ ಬಾರಿಗೆ ಪ್ರಭಾಸ್ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ಓಂ ರಾವತ್ ನಿರ್ದೇಶನದ 'ಆದಿಪುರುಷ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಈ ಎರಡೂ ಸಿನಿಮಾಗಳ ಬಳಿಕ ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸಲಿರುವ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್. ಅದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.

  ಫೆಬ್ರವರಿ 26 ರಂದು ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡುತ್ತೇನೆ ಎಂದಿದ್ದ ನಾಗ್ ಅಶ್ವಿನ್ ಆ ನಂತರ ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೋರಿ, ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡಲು ಇದು ಸೂಕ್ತ ಸಮಯವಲ್ಲ ಎಂದಿದ್ದರು. ಆದರೆ ಈಗ ಸಿನಿಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬ ಮಾಹಿತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

  ಶೆಡ್ಯೂಲ್ ಪ್ರಕಾರ ಪ್ರಭಾಸ್-ದೀಪಿಕಾ ಸಿನಿಮಾ ಮಾರ್ಚ್ ತಿಂಗಳಲ್ಲಿಯೇ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಬಂದು ರಾಧೆ-ಶ್ಯಾಮ್, ಸಲಾರ್, ಆದಿಪುರುಷ್ ಸಿನಿಮಾ ತಡವಾದ ಕಾರಣ ಪ್ರಭಾಸ್-ದೀಪಿಕಾ ಸಿನಿಮಾ ತಡವಾಗಿದೆ. ಈ ಸಿನಿಮಾದ ಚಿತ್ರೀಕರಣವು ಜೂನ್ ಅಥವಾ ಜುಲೈ ನಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ ನಾಗ್ ಅಶ್ವಿನ್.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

  ಮುಂದುವರೆದು, 'ಆದಿಪುರುಷ್‌ ಸಿನಿಮಾದಲ್ಲಿ ರಾಮಾಯಣದ ಕತೆಯನ್ನು ಹೇಳಲಾಗುತ್ತಿದೆ. ಆ ಕತೆಯು ಭಾರತದ ಎಲ್ಲ ಭಾಷೆಯ, ಪ್ರದೇಶದ ಜನರಿಗೆ ರಿಲೇಟ್ ಆಗುವಂಥಹದ್ದು, ಆದಿಪುರುಷ್ ಬಳಿಕ ಪ್ರಭಾಸ್ ಮಾರುಕಟ್ಟೆ ಮೌಲ್ಯ 30% ಹೆಚ್ಚಾಗಲಿದೆ. ಹಾಗಾಗಿ 'ಆದಿಪುರುಷ್' ಸಿನಿಮಾ ನನ್ನ ನಿರ್ದೇಶನದ ಸಿನಿಮಾಕ್ಕೆ ಸಕಾರಾತ್ಮಕವಾಗಿ ಪರಿಗಣಿಸಲಿದೆ' ಎಂದಿದ್ದಾರೆ ನಾಗ್ ಅಶ್ವಿನ್.

  English summary
  Prabhas-Deepika Padukone's movie will start shooting by June or July said director Nag Ashwin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X