ಸರ್ಕಾರದ ಪ್ರವಾಹ ಪರಿಹಾರ ನಿಧಿಗೆ ಕೋಟಿ ದೇಣಿಗೆ ಕೊಟ್ಟ ನಟ ಪ್ರಭಾಸ್!

ಸತತ ಮಳೆಯಿಂದಾಗಿ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರ ಪ್ರದೇಶದ ತಿರುಪತಿ, ನೆಲ್ಲೂರು, ಚಿತ್ತೂರು ಇನ್ನೂ ಕೆಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ.

ರಸ್ತೆಗಳು ಕುಸಿದು ಹೋಗಿವೆ, ಸೇತುವೆಗಳು ಒಡೆದುಹೋಗಿವೆ, ಕಂಬಗಳು ಬಿದ್ದು ಹೋಗಿವೆ. ಜನರ ಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದಿಂದ ನಷ್ಟ ಹೊಂದಿರುವ ಜನರಿಗೆ ನೆರವು ನೀಡಲು ಸರ್ಕಾರವು ಪ್ರಯತ್ನಿಸುತ್ತಿದೆ.

ಈ ನಡುವೆ ಜನರ ಸಂಕಷ್ಟಕ್ಕೆ ಸಿನಿಮಾ ತಾರೆಯರು ಕೂಡ ಸ್ಪಂದಿಸುತ್ತಿದ್ದಾರೆ. ಈಗಾಗಲೇ ತೆಲುಗು ಸ್ಟಾರ್‌ ನಟರು ಸರ್ಕಾರದ ಬೊಕ್ಕಸಕ್ಕೆ ದೇಣಿಗೆ ನೀಡುತ್ತಿದ್ದಾರೆ. ಈಗ ಈ ಸಾಲಿಗೆ ನಟ ಪ್ರಭಾಸ್ ಕೂಡ ಸೇರಿದ್ದಾರೆ.

Prabhas Donate 1 cr For CM Fund

ಆಂಧ್ರ ಸರ್ಕಾರಕ್ಕೆ 1 ಕೋಟಿ ಕೊಟ್ಟ ಪ್ರಭಾಸ್!

ನಟ ಪ್ರಭಾಸ್‌ ಕೇವಲ ಸಿನಿಮಾಗಳಲ್ಲಿ ಸೂಪರ್‌ ಸ್ಟಾರ್‌ ಅಗಿ ಮಿಂಚುವುದು ಮಾತ್ರವಲ್ಲ. ಈ ಜೀವನದಲ್ಲೂ ಕೂಡ ಪ್ರಭಾಸ್‌ ಹೀರೋ ಆಗಿದ್ದಾರೆ. ಪ್ರಭಾಸ್ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸರ್ಕಾರದ ಪರಿಹಾರ ನಿಧಿಗೆ ಪ್ರಭಾಸ್ ದೊಡ್ಡ ಮಟ್ಟದ ದೇಣಿಗೆ ನೀಡಿದ್ದಾರೆ. ಪ್ರಭಾಸ್ 1ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ಪ್ರಭಾಸ್ ಸದ್ಯ ಸಿಕ್ಕಾ ಪಟ್ಟೆ ಸುದ್ದಿ ಆಗುತ್ತಿದ್ದಾರೆ.

ಈ ಹಿಂದೆಯೂ ಕೋಟಿ, ಕೋಟಿ ದೇಣಿಗೆ ನೀಡಿದ್ದ ಪ್ರಭಾಸ್!

ನಟ ಪ್ರಭಾಸ್‌ ಕೋಟಿ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರಭಾಸ್ ಸರ್ಕಾರದ ಬೊಕ್ಕಸಕ್ಕೆ ಕೋಟಿ, ಕೋಟಿ ದೇಣಿಗೆ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಒಂದು ಕೋಟಿ ನೀಡಿದ್ದರು ನಟ ಪ್ರಭಾಸ್, ಅಷ್ಟೇ ಅಲ್ಲಾ ಕೇಂದ್ರ ಸರ್ಕಾರಕ್ಕೆ ನಟ ಪ್ರಭಾಸ್ 3ಕೋಟಿ ದೇಣಿಗೆ ನೀಡಿದ್ದರು. ಈಗ ಸರ್ಕಾರದ ಪ್ರವಾಹದ ಪರಿಹಾರ ನಿಧಿಗೆ ಪ್ರಭಾಸ್ ಒಂದು ಕೋಟಿ ಕೊಟ್ಟಿದ್ದಾರೆ.

ಸಿಎಂ ಪರಿಹಾರ ನಿಧಿಗೆ ಹೆಚ್ಚು ದೇಣಿಗೆ ಕೊಟ್ಟ ಪ್ರಭಾಸ್!

ಇನ್ನು ಈ ಹಿಂದೆ ನಟ ಮಹೇಶ್ ಬಾಬು ಮತ್ತು ಜೂನಿಯರ್ ಎನ್‌ಟಿಆರ್‌ 25 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದರು. ಇವರ ಜೊತೆಗೆ ನಟ ಚಿರಂಜೀವಿ ಕೂಡ ಸಿಎಂ ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದಾರೆ. ಆದರೆ ನಟ ಪ್ರಭಾಸ್ ಅತಿ ಹೆಚ್ಚು ದೇಣಿಗೆ ನೀಡಿ ಸುದ್ದಿ ಆಗಿದ್ದಾರೆ. ನಟ ಪ್ರಭಾಸ್‌ ಸದ್ಯ ರಾಧೆ ಶ್ಯಾಮ್ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಜೊತೆಗೆ ಆದಿಪುರುಷ್, ಸಲಾರ್‌, ಪ್ರಾಜೆಕ್ಟ್‌ ಕೆ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ ಆಗಿದ್ದಾರೆ.

More from Filmibeat

English summary
Prabhas Donate 1cr For CM Fund, Know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X