twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ನಟರ ಧನ ಸಹಾಯ: ರಾಮ್, ಪವನ್, ಚಿರು ನಂತರ ಪ್ರಭಾಸ್ ದೇಣಿಗೆ

    |

    ಕಿಲ್ಲರ್ ಕೊರೊನಾ ವೈರಸ್ ನಿಂದ ಸಂಪೂರ್ಣ ಭಾರತ ಸ್ತಬ್ದವಾಗಿದೆ. ಜೀವ ಉಳಿದರೆ ಸಾಕಪ್ಪ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಆತಂಕ ಉಂಟಾಗಿದೆ. ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಜನರಿಗೆ ಅಗತ್ಯ ಸೇವೆಗಳು ಕೊರತೆಯಾಗದ್ದಂತೆ ನೋಡಿಕೊಳ್ಳಬೇಕಿದೆ.

    ಅಗತ್ಯ ವೈದ್ಯಕೀಯ ಸೌಲಭ್ಯ ಕೂಡ ಒದಗಿಬೇಕಾಗಿದೆ. ಹಾಗಾಗಿ ಭಾರಿ ಮೊತ್ತದ ಹಣದ ಅವಶ್ಯಕತೆ ಉಂಟಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರದ ಜೊತೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಈಗಾಗಲೆ ತೆಲುಗಿನ ಸಾಕಷ್ಟು ಸ್ಟಾರ್ ನಟರು ಆಂಧ್ರ ಸಿಎಂ ಪರಿಹಾರ ನಿಧಿಗೆ ಕೋಟಿ ಕೋಟಿ ಹಣ ನೀಡುತ್ತಿದ್ದಾರೆ. ಮುಂದೆ ಓದಿ..

    ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ ಪವನ್ ಕಲ್ಯಾಣ್, 70 ಲಕ್ಷ ನೀಡಲಿದ್ದಾರೆ ರಾಮ್ ಚರಣ್ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ ಪವನ್ ಕಲ್ಯಾಣ್, 70 ಲಕ್ಷ ನೀಡಲಿದ್ದಾರೆ ರಾಮ್ ಚರಣ್

    1 ಕೋಟಿ ಘೋಷಿಸಿದ ಪ್ರಭಾಸ್

    1 ಕೋಟಿ ಘೋಷಿಸಿದ ಪ್ರಭಾಸ್

    ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಕೊರೊನಾ ವಿರುದ್ಧ ಹೋರಾಡಲು 1 ಕೋಟಿ ರೂಪಾಯಿ ನೀಡಿದ್ದಾರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ 1 ಒಂದು ಕೋಟಿ ನೀಡಿದ್ದಾರೆ. ಪ್ರಭಾಸ್ ಉತ್ತಮ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾಸ್ 15 ದಿನಗಳ ಕಾಲ ಸ್ವಯಂ ದಿಗ್ಬಂಧನಲ್ಲಿ ಇದ್ದರು. ವಿದೇಶದಿಂದ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದ ಪ್ರಭಾಸ್ 15 ದಿನಗಳ ಕಾಲ ಮನೆಯಲ್ಲಿಯೆ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದರು.

    ಕೂಲಿ ಕಾರ್ಮಿಕರ ಕಷ್ಟಕ್ಕೆ ಮಿಡಿದ ಚಿರಂಜೀವಿ

    ಕೂಲಿ ಕಾರ್ಮಿಕರ ಕಷ್ಟಕ್ಕೆ ಮಿಡಿದ ಚಿರಂಜೀವಿ

    ತೆಲುಗು ನಟ ಚಿರಂಜೀವಿ ಕೂಡ 1 ಕೋಟಿ ನೀಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿರುವ ಚಿರು ಕೊರೊನಾ ವಿರುದ್ಧ ಹೋರಾಟಕ್ಕೆ 1 ಕೋಟಿ ನೀಡಿದ್ದಾರೆ. ಏಪ್ರಿಲ್ 14ರ ವರೆಗೂ ಲಾಕ್ ಡೌನ್ ಆಗಿರುವ ಪರಿಣಾಮ, ಕೂಲಿ ಕಾರ್ಮಿಕರ ಜೀವನಕ್ಕೆ ಕಷ್ಟವಾಗುತ್ತೆ ಎಂದು ಚಿರಂಜೀವಿ ಅವರ ನೆರವಿಗಾಗಿ ಸಿಎಂ ಪರಿಹಾರ ನಿಧಿಗೆ 1 ಕೋಟಿ ನೀಡಿದ್ದಾರೆ.

    ಹೃತಿಕ್ ರೋಷನ್ ಮತ್ತು ಕಪಿಲ್ ಶರ್ಮಾ

    ಹೃತಿಕ್ ರೋಷನ್ ಮತ್ತು ಕಪಿಲ್ ಶರ್ಮಾ

    ತೆಲುಗು ಕಲಾವಿದರು ಮಾತ್ರವಲ್ಲದೆ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಕೊರಾನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ. ಮೂಲಭೂತ ಅಗತ್ಯತೆಗಳನ್ನು ಒದಗಿಸಲು ಏನು ಬೇಕಾದರು ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಇನ್ನು ಕಿರುತೆರೆ ಸ್ಟಾರ್ ಕಪಿಲ್ ಶರ್ಮಾ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ನೀಡಿದ್ದಾರೆ.

    ಮೊದಲು ದೇಣಿಗೆ ನೀಡಿದ ನಟ ನಿತಿನ್

    ಮೊದಲು ದೇಣಿಗೆ ನೀಡಿದ ನಟ ನಿತಿನ್

    ಹೌದು, ನಟ ನಿತಿನ್ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ ನಟರಲ್ಲಿ ಮೊದಲಿಗರು. ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ನಿತಿನ್ ದೇಣಿಗೆ ಘೋಷಿಸಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಅವರು ತಲಾ 10 ಲಕ್ಷ ರೂಗಳನ್ನು ಘೋಷಿಸಿದ್ದರು.

    ರಾಮ್ ಚರಣ್ ಮತ್ತು ಪವನ್ ಕಲ್ಯಾಣ್

    ರಾಮ್ ಚರಣ್ ಮತ್ತು ಪವನ್ ಕಲ್ಯಾಣ್

    ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿರಲು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ ಈ ಬಗ್ಗೆ ಪವನ್ ಕಲ್ಯಾಣ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದರ ಬೆನ್ನಲ್ಲೆ ನಟ ರಾಮ್ ಚರಣ್ ಕೂಡ ನೆರವಿಗೆ ದಾವಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ 70 ಲಕ್ಷ ದೇಣಿಗೆ ನೀಡಿದ್ದಾರೆ. ಸಂಕಷ್ಟದ ಸ್ಥಿತಿಯಿಂದ ಪಾರಾಗಲು ಸಾಕಷ್ಟು ಸೆಲೆಬ್ರಿಟಿಗಳು ಸರ್ಕಾರದ ಜೊತೆ ಕೈ ಜೋಡಿಸಿ ಕಷ್ಟದಲ್ಲಿರುವವರ ನೆರವಿಗೆ ಮುಂದಾಗಿದ್ದಾರೆ.

    English summary
    Telugu Actor Prabhas donated 1 crore for CM relief fund for fight against Corona pandemic.
    Friday, March 27, 2020, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X