ಪ್ರಭಾಸ್ ಹುಟ್ಟುಹಬ್ಬಕ್ಕೆ ಫ್ಲೆಕ್ಸ್ ಕಟ್ಟಲು ಹೋಗಿ ಅಭಿಮಾನಿ ಸಾವು

ನಟ ಪ್ರಭಾಸ್ ರ 43 ನೇ ಹುಟ್ಟುಹಬ್ಬ ಇಂದು. ಕೊರೊನಾ ನಡುವೆಯೂ ಅದ್ಧೂರಿಯಾಗಿ ಪ್ರಭಾಸ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ ಅಭಿಮಾನಿಗಳು.

ತೆಲುಗು ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ ಪ್ರಭಾಸ್‌ಗೆ. ಮೆಚ್ಚಿನ ನಟರ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಲಾಗುತ್ತದೆ ಅಲ್ಲಿ. ಆದರೆ ಇದೇ ಸಂದರ್ಭಗಳಲ್ಲಿ ಅಚಾತುರ್ಯಗಳಾದ ಉದಾಹರಣೆಗಳೂ ಸಹ ಇವೆ.

ಇಂದು ನಟ ಪ್ರಭಾಸ್ ಹುಟ್ಟುಹಬ್ಬವಾದ್ದರಿಂದ ಅಭಿಮಾನಿಯೊಬ್ಬ ಪ್ರಭಾಸ್‌ ಫ್ಲೆಕ್ಸ್‌ ಕಟ್ಟುತ್ತಿರಬೇಕಾದರೆ ವಿದ್ಯುತ್ ಅವಘಡ ಸಂಭವಿಸಿ ಅಸುನೀಗಿದ್ದಾನೆ.

ಯಡ್ಡನಪುಡಿ ಮಂಡಲದ ಪೂನೂರು ಗ್ರಾಮದಲ್ಲಿ ಘಟನೆ

ಯಡ್ಡನಪುಡಿ ಮಂಡಲದ ಪೂನೂರು ಗ್ರಾಮದಲ್ಲಿ ಘಟನೆ

ಮೊದಲ ಘಟನೆಯು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಯಡ್ಡನಪುಡಿ ಮಂಡಲದ ಪೂನೂರು ಗ್ರಾಮದಲ್ಲಿ ಕೆಲ ಪ್ರಭಾಸ್ ಅಭಿಮಾನಿಗಳು ಸೇರಿ, ಪ್ರಭಾಸ್‌ಗೆ ಹುಟ್ಟುಹಬ್ಬ ಶುಭಾಶಯದ ಫ್ಲೆಕ್ಸ್‌ ಮಾಡಿಸಿ, ಗ್ರಾಮದಲ್ಲಿ ಕಟ್ಟಲು ಯತ್ನಿಸಿದ್ದಾರೆ.

ವಿದ್ಯುತ್ ಶಾಕ್ ಹೊಡೆದು ಅಭಿಮಾನಿ ಸಾವು

ವಿದ್ಯುತ್ ಶಾಕ್ ಹೊಡೆದು ಅಭಿಮಾನಿ ಸಾವು

ಫ್ಲೆಕ್ಸ್ ಕಟ್ಟಬೇಕಾದರೆ ಅಭಿಮಾನಿ ಸುಗುಣ್ ರಾವ್‌ ಗೆ ವಿದ್ಯುತ್ ಶಾಕ್ ಹೊಡೆದಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಸಹ ಆತ ಬದುಕುಳಿಯಲಿಲ್ಲ. ಪ್ರಭಾಸ್ ಹುಟ್ಟುಹಬ್ಬದಂದೇ ಆತನ ಸಾವು ಸಂಭವಿಸಿತು.

ಸಾಹೋ ಸಿನಿಮಾ ಬಿಡುಗಡೆ ವೇಳೆಯೂ ಅವಘಡ

ಸಾಹೋ ಸಿನಿಮಾ ಬಿಡುಗಡೆ ವೇಳೆಯೂ ಅವಘಡ

ಈ ಹಿಂದೆ ಪ್ರಭಾಸ್‌ ಅಭಿನಯದ ಸಾಹೋ ಸಿನಿಮಾ ಬಿಡುಗಡೆ ಆದಾಗಲೂ ಸಹ ಸಾಹೋ ಸಿನಿಮಾದ ಫ್ಲೆಕ್ಸ್ ಕಟ್ಟಬೇಕಾದರೆ ವಿದ್ಯುತ್ ತಗುಲಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದ. ಆತನಿಗೆ ಸಿನಿಮಾದ ಪರವಾಗಿ ಪರಿಹಾರ ಹಣ ನೀಡಲಾಗಿತ್ತು.

ಪವನ್ ಕಲ್ಯಾಣ್ ಅಭಿಮಾನಿಗಳು ನಿಧನ ಹೊಂದಿದ್ದರು

ಪವನ್ ಕಲ್ಯಾಣ್ ಅಭಿಮಾನಿಗಳು ನಿಧನ ಹೊಂದಿದ್ದರು

ಕೆಲವು ದಿನಗಳ ಹಿಂದಷ್ಟೆ ಪವನ್ ಕಲ್ಯಾಣ್ ಹುಟ್ಟುಹಬ್ಬದಂದು ಫ್ಲೆಕ್ಸ್ ಕಟ್ಟುತ್ತಿದ್ದ ಮೂವರು ಅಭಿಮಾನಿಗಳು ವಿದ್ಯುತ್ ಸ್ಪರ್ಷದಿಂದ ಸಾವನ್ನಪ್ಪಿದರು. ಮೃತರ ಕುಟುಂಬಕ್ಕೆ ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ತಲಾ ಎರಡು ಲಕ್ಷ ಪರಿಹಾರ ನೀಡಿದರು.

More from Filmibeat

English summary
Actor Prabhas's fan Sugun Rao dies today while erecting flexi for Prabhas Birthday in his village poonuru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X