ಪ್ರಭಾಸ್ ಸಿನಿಮಾ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಅಭಿಮಾನಿಗಳ ದೂರು
ನಟ ಪ್ರಭಾಸ್ ಸಿನಿಮಾದ ನಿರ್ದೇಶಕನ ವಿರುದ್ಧ ಪ್ರಭಾಸ್ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಭಾಸ್ ನಟನೆಯ "ರಾಧೆ-ಶ್ಯಾಮ್" ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ವಿರುದ್ಧ ಪ್ರಭಾಸ್ ಅಭಿಮಾನಿಗಳು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಕ್ಕೆ ಕಾರಣವೂ ಇದೆ. "ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ಹತ್ತಿರವಾಗುತ್ತಿದೆ. ಆದರೆ ಇನ್ನೂ ಪ್ರಚಾರ ಕಾರ್ಯವನ್ನು ಶುರು ಮಾಡಿಲ್ಲವೆಂದು ಪ್ರಭಾಸ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಆತನ ಚಿತ್ರವನ್ನು ಟ್ವೀಟ್‍ನಲ್ಲಿ ಹಂಚಿಕೊಂಡು ಹೈದರಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿ 'ಸರ್, ಈ ಫೋಟೊದಲ್ಲಿ ಕಾಣುತ್ತಿರುವ ವ್ಯಕ್ತಿಯನ್ನು ಹಿಡಿದುಕೊಡಿ' ಎಂದು ಮನವಿ ಮಾಡಿದ್ದಾರೆ.

"ರಾಧೆ-ಶ್ಯಾಮ್' ಸಿನಿಮಾವು ಜುಲೈ 30 ರಂದು ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಪ್ರಚಾರ ಇನ್ನೂ ಆರಂಭವಾಗಿಲ್ಲ. ಫೆಬ್ರವರಿ 14 ರಂದು ಸಣ್ಣ ಟೀಸರ್ ಅನ್ನಷ್ಟೆ ಬಿಡುಗಡೆ ಮಾಡಲಾಗಿದೆ. ಅದಕ್ಕೂ ಮುನ್ನಾ ಕೆಲವು ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿತ್ತು.
"ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಟಿಸಿದ್ದಾರೆ. 1960 ರ ದಶಕದಲ್ಲಿ ಪ್ಯಾರಿಸ್ ನಲ್ಲಿ ನಡೆವ ಪ್ರೇಮಕತೆ ಇದಾಗಿರಲಿದೆ ಎನ್ನಲಾಗುತ್ತಿದೆ. ಭಾರಿ ಬಜೆಟ್ ನ ಈ ಸಿನಿಮಾದಲ್ಲಿ ಪ್ರಭಾಸ್ ಒಂದೂ ಸಹ ಆಕ್ಷನ್ ದೃಶ್ಯಗಳಲ್ಲಿ ನಟಿಸಿಲ್ಲ, ರಾಧೆ-ಶ್ಯಾಮ್ ಪೂರ್ಣ ಪ್ರಮಾಣದ ಪ್ರೇಮ ಕತೆ ಎನ್ನಲಾಗುತ್ತಿದೆ.
Recommended Video
ಪ್ರಭಾಸ್ ಪ್ರಸ್ತುತ 'ಸಲಾರ್', 'ಆದಿಪುರುಷ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಮಾಯಾವಿಲೋಕದ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸಹ ಪ್ರಭಾಸ್ ಜೊತೆ ನಟಿಸಲಿದ್ದಾರೆ.


Click it and Unblock the Notifications











