For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾ ನಿರ್ದೇಶಕನ ವಿರುದ್ಧ ಪೊಲೀಸರಿಗೆ ಅಭಿಮಾನಿಗಳ ದೂರು

  |

  ನಟ ಪ್ರಭಾಸ್ ಸಿನಿಮಾದ ನಿರ್ದೇಶಕನ ವಿರುದ್ಧ ಪ್ರಭಾಸ್ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

  ಪ್ರಭಾಸ್ ನಟನೆಯ "ರಾಧೆ-ಶ್ಯಾಮ್" ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ವಿರುದ್ಧ ಪ್ರಭಾಸ್ ಅಭಿಮಾನಿಗಳು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.

  ಇದಕ್ಕೆ ಕಾರಣವೂ ಇದೆ. "ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ಹತ್ತಿರವಾಗುತ್ತಿದೆ. ಆದರೆ ಇನ್ನೂ ಪ್ರಚಾರ ಕಾರ್ಯವನ್ನು ಶುರು ಮಾಡಿಲ್ಲವೆಂದು ಪ್ರಭಾಸ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಾಗಿಯೇ ಆತನ ಚಿತ್ರವನ್ನು ಟ್ವೀಟ್‍ನಲ್ಲಿ ಹಂಚಿಕೊಂಡು ಹೈದರಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿ 'ಸರ್, ಈ ಫೋಟೊದಲ್ಲಿ ಕಾಣುತ್ತಿರುವ ವ್ಯಕ್ತಿಯನ್ನು ಹಿಡಿದುಕೊಡಿ' ಎಂದು ಮನವಿ ಮಾಡಿದ್ದಾರೆ.

  "ರಾಧೆ-ಶ್ಯಾಮ್' ಸಿನಿಮಾವು ಜುಲೈ 30 ರಂದು ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಪ್ರಚಾರ ಇನ್ನೂ ಆರಂಭವಾಗಿಲ್ಲ. ಫೆಬ್ರವರಿ 14 ರಂದು ಸಣ್ಣ ಟೀಸರ್ ಅನ್ನಷ್ಟೆ ಬಿಡುಗಡೆ ಮಾಡಲಾಗಿದೆ. ಅದಕ್ಕೂ ಮುನ್ನಾ ಕೆಲವು ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿತ್ತು.

  "ರಾಧೆ-ಶ್ಯಾಮ್' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಟಿಸಿದ್ದಾರೆ. 1960 ರ ದಶಕದಲ್ಲಿ ಪ್ಯಾರಿಸ್ ನಲ್ಲಿ ನಡೆವ ಪ್ರೇಮಕತೆ ಇದಾಗಿರಲಿದೆ ಎನ್ನಲಾಗುತ್ತಿದೆ. ಭಾರಿ ಬಜೆಟ್ ನ ಈ ಸಿನಿಮಾದಲ್ಲಿ ಪ್ರಭಾಸ್ ಒಂದೂ ಸಹ ಆಕ್ಷನ್ ದೃಶ್ಯಗಳಲ್ಲಿ ನಟಿಸಿಲ್ಲ, ರಾಧೆ-ಶ್ಯಾಮ್ ಪೂರ್ಣ ಪ್ರಮಾಣದ ಪ್ರೇಮ ಕತೆ ಎನ್ನಲಾಗುತ್ತಿದೆ.

  ಬೇರೆ ಭಾಷೆಗಳ ಮುಂದೆ ಎದೆ ಉಬ್ಬಿಸಿ ನಿಲ್ಲುವಂತೆ ಮಾಡಿದೆ ಯುವರತ್ನ ಸಿನಿಮಾ | Prakash Rai | Filmibeat Kannada

  ಪ್ರಭಾಸ್ ಪ್ರಸ್ತುತ 'ಸಲಾರ್', 'ಆದಿಪುರುಷ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಮಾಯಾವಿಲೋಕದ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಸಹ ಪ್ರಭಾಸ್ ಜೊತೆ ನಟಿಸಲಿದ್ದಾರೆ.

  English summary
  Prabhas fans complaint to Hyderabad police against Radhe Shyam movie director for not yet starting movie promotions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X