ಪ್ರಭಾಸ್ ಅಭಿಮಾನಿಗಳ ಮನವಿ: ಬೇಡಿಕೆ ಈಡೇರಿಸುವಂತೆ ಟ್ವಿಟ್ಟರ್ ಟ್ರೆಂಡ್
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸದ್ಯ ಇನ್ನೂ ಹೆಸರಿಡದ 20ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಬಗ್ಗೆ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ. ಲಾಕ್ ಡೌನ್ ಗೂ ಮುನ್ನ ವಿದೇಶಿ ಚಿತ್ರೀಕರಣ ಮುಗಿಸಿ ವಾಪಸ್ ಆದ ತಂಡ ಸದ್ಯ ಮನೆಯಲ್ಲಿಯೆ ಕಾಲಕಳೆಯುತ್ತಿದೆ.
Recommended Video
ಪ್ರಭಾಸ್ ಸಾಹೋ ಸಿನಿಮಾ ರಿಲೀಸ್ ಆದ ಬಳಿಕ, ಮುಂದಿನ ಸಿನಿಮಾದ ಯಾವುದೇ ಅಪ್ ಡೇಟ್ ಅಭಿಮಾನಿಗಳಿಗೆ ನೀಡಿಲ್ಲ. ಸಿನಿಮಾ ಮುಹೂರ್ತವಾಗಿ ವರ್ಷದ ನಂತರ ಇತ್ತೀಚಿಗೆ ಪೋಟೋ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದ ಬಗ್ಗೆ ಯಾವಾದೇ ಮಾಹಿತಿ ಸಿಗದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದಾರೆ. ಚಿತ್ರದ ಬಗ್ಗೆ ಅಪ್ ಡೇಟ್ ನೀಡುವಂತೆ ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಮಾಹಿತಿ ನೀಡಿ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಮುಂದೆ ಓದಿ...

'ಪ್ರಭಾಸ್ 20' ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ
'ಪ್ರಭಾಸ್ 20'(ತಾತ್ಕಾಲಿಕ ಹೆಸರು) ಸಿನಿಮಾ ಸೆಟ್ಟೇರಿ ವರ್ಷದ ಮೇಲಾಗಿದೆ. ಆದರೆ ಇನ್ನೂ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ. ಅಲ್ಲದೆ ಸಿನಿಮಾ ಸೆಟ್ಟೇರಿ ವರ್ಷದ ನಂತರ ಮುಹೂರ್ತದ ಫೋಟೋವನ್ನು ಹಂಚಿಕೊಂಡಿದೆ ಚಿತ್ರತಂಡ. ಇದು ಬಿಟ್ಟಿರೆ ಚಿತ್ರದ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಸಹಜವಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಅಭಿಮಾನಿಗಳ ಅಸಮಾಧಾನ
ವರ್ಷದ ಬಳಿಕ ಮುಹೂರ್ತ ಫೋಟೋ ರಿಲೀಸ್ ಮಾಡಿದ ಚಿತ್ರತಂಡದ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಮುಹೂರ್ತ ಪೋಟೋಗಳು ಈಗ ಬರ್ತಿದೆ ಅಂದರೆ ಇನ್ನೂ ಫಸ್ಟ್ ಲುಕ್, ಟೀಸರ್ ಮತ್ತು ಟ್ರೇಲರ್ ಯಾವಾಗ ಬರುತ್ತೋ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಭಿಮಾನಿಗಳ ಟ್ರೆಂಡ್
ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಪ್ರಭಾಸ್ 20ನೇ ಸಿನಿಮಾದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಚಿತ್ರತಂಡದ ಬಳಿ ಮಾಡಿಕೊಳ್ಳುತ್ತಿದ್ದಾರೆ. #wedemanprabhas20update, #wewantprabhas20update, #prabhas20firstlooksoon ಎಂದು ಮೂರು ಹ್ಯಾಶ್ ಟ್ಯಾಗ್ ಬಳಗಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.

ಬ್ಯಾನ್ ಯುವಿ ಕ್ರಿಯೇಶನ್ಸ್ ಟ್ರೆಂಡ್
ಚಿತ್ರದ ಬಗ್ಗೆ ಅಪ್ ಡೇಟ್ ನೀಡಿ ಎಂದು ಅಭಿಮಾನಿಗಳು ಎಷ್ಟೇ ಮನವಿ ಮಾಡಿಕೊಂಡರು ತಲೆಕೆಡಿಸಿಕೊಳ್ಳದ ಚಿತ್ರತಂಡದ ವಿರುದ್ದ ರೊಚ್ಚಿಗೆದ್ದ ಅಭಿಮಾನಿಗಳು, ಚಿತ್ರ ನಿರ್ಮಾಣ ಸಂಸ್ಥೆ ಬ್ಯಾನ್ ಮಾಡುವಂತೆ ಟ್ರೆಂಡ್ ಮಾಡುತ್ತಿದ್ದಾರೆ. #banuvcreations, ವರ್ಸ್ಟ್ ಯು ವಿ ಕ್ರಿಯೇಶನ್ಸ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಈ ಹಿಂದೆಯೂ ಅಂದರೆ ಏಪ್ರಿಲ್ ನಲ್ಲಿ ಅಭಿಮಾನಿಗಳು ಟ್ರೆಂಡ್ ಮಾಡಿದ್ದರು. ಆದರೂ ಸಿನಿಮಾತಂಡ ಯಾವುದೆ ಅಪ್ ಡೇಟ್ ನೀಡಿಲ್ಲ.

ರಾಧಾಕೃಷ್ಣ ನಿರ್ದೇಶನ, ಪೂಜಾ ಹೆಗ್ಡೆ ನಾಯಕಿ
ಪ್ರಭಾಸ್ 20ನೇ ಚಿತ್ರಕ್ಕೆ ನಿರ್ದೇಶಕ ರಾಧಾಕೃಷ್ಣ ಆಕ್ಷನ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಪೂಜಾ ಹೆಗ್ಡೆ ಪ್ರಭಾಸ್ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಬಾಲಿವುಡ್ ನಟಿ ಭಾಗ್ಯಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಬೇಡಿಕೆ ಮೇರೆಗಾದರು ಸಿನಿಮಾತಂಡ ಚಿತ್ರದ ಬಗ್ಗೆ ಅಪ್ ಡೇಟ್ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications











