ಕೆಜಿಎಫ್ 2 ಬಿಡುಗಡೆ ದಿನಾಂಕ ಕೇಳಿ ಪ್ರಭಾಸ್ ಅಭಿಮಾನಿಗಳು ಖುಷ್: ಕಾರಣವೇನು?

ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ನ ಬಿಡುಗಡೆ ದಿನಾಂಕವನ್ನು ನಿನ್ನೆಯಷ್ಟೆ ಚಿತ್ರತಂಡ ಘೋಷಿಸಿದೆ. ಕೆಜಿಎಫ್ 2 ಐದು ಭಾಷೆಗಳಲ್ಲಿ ಒಟ್ಟಿಗೆ ಅಕ್ಟೋಬರ್ 23 ರಂದು ತೆರೆಗೆ ಬರಲಿದೆ.

Recommended Video

ಪ್ರಭಾಸ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ KGF ತಂಡ |Rocking Star Yash|KGF-2 | Prabhas|

ಯಶ್ ಅಭಿಮಾನಿಗಳ ಪಾಲಿಗೆ ಕೆಜಿಎಫ್ 2 ಬಿಡುಗಡೆ ದಿನಾಂಕ ಘೋಷಿಸಿರುವುದು ಖುಷಿಯ ಸಂಗತಿಯಾಗಿದ್ದರೆ, ನೆರೆಯ ಆಂಧ್ರದಲ್ಲಿ ಪ್ರಭಾಸ್ ಅಭಿಮಾನಿಗಳು ಸಹ ಖುಷಿ ಆಚರಿಸುತ್ತಿದ್ದಾರೆ.

ಏಕೆಂದರೆ ಪ್ರಭಾಸ್ ಹುಟ್ಟುಹಬ್ಬದ ದಿನವೇ ಕೆಜಿಎಫ್ 2 ಸಹ ಬಿಡುಗಡೆ ಆಗುತ್ತಿದೆ. ಕೆಜಿಎಫ್ ತೆಲುಗಿನಲ್ಲಿ ಭಾರಿ ಯಶಸ್ಸು ಗಳಿಸಿತ್ತು. ಕೆಜಿಎಫ್‌ ಸಿನಿಮಾದಿಂದಾಗಿ ತೆಲುಗಿನಲ್ಲಿ ಯಶ್‌ ಗೆ ಭಾರಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಹಾಗಾಗಿ ಕೆಜಿಎಫ್ 2 ಯಾವಾಗ ಬರುತ್ತದೆಂಬ ಕುತೂಹಲ ತೆಲುಗು ಪ್ರೇಕ್ಷಕರಿಗೂ ಇತ್ತು.

ಭಾರಿ ಖುಷಿಯಲ್ಲಿರುವ ಪ್ರಭಾಸ್ ಅಭಿಮಾನಿಗಳು

ಭಾರಿ ಖುಷಿಯಲ್ಲಿರುವ ಪ್ರಭಾಸ್ ಅಭಿಮಾನಿಗಳು

ಈಗ ಕೆಜಿಎಫ್ ಚಿತ್ರತಂಡವು ಕೆಜಿಎಫ್ 2 ಸಿನಿಮಾವನ್ನು ತೆಲುಗು ಸಿನಿ ಪ್ರಿಯರ ನೆಚ್ಚಿನ ನಟ ಬಾಹುಬಲಿ ಪ್ರಭಾಸ್ ಹುಟ್ಟುಹಬ್ಬದಂದು ಬಿಡುಗಡೆ ಮಾಡುತ್ತಿರುವುದು ಅವರಿಗೆ ಖುಷಿ ತಂದಿದೆ.

ಪ್ರಭಾಸ್ ಅಭಿಮಾನಿಗಳಿಂದ ಕೆಜಿಎಫ್ 2 ಗೆ ಅಭಿನಂದನೆ

ಪ್ರಭಾಸ್ ಅಭಿಮಾನಿಗಳಿಂದ ಕೆಜಿಎಫ್ 2 ಗೆ ಅಭಿನಂದನೆ

ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಅಭಿಮಾನಿಗಳು ಕೆಜಿಎಫ್ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಕೆಜಿಎಫ್ 2 ಚಿತ್ರ ದೊಡ್ಡ ಯಶಸ್ಸು ಗಳಿಸಲೆಂದು ಹಾರೈಸುತ್ತಿದ್ದಾರೆ. ಅಕ್ಟೋಬರ್ 23 ರಂದು ನಮಗೆ ಎರಡೆರಡು ಹಬ್ಬವೆಂದು ಪ್ರಭಾಸ್ ಅಭಿಮಾನಿಗಳು ಕಮೆಂಟ್ ಹಾಕುತ್ತಿದ್ದಾರೆ.

ಬಹುತೇಕ ಚಿತ್ರೀಕರಣ ಮುಗಿಸಿರುವ ಕೆಜಿಎಫ್ 2

ಬಹುತೇಕ ಚಿತ್ರೀಕರಣ ಮುಗಿಸಿರುವ ಕೆಜಿಎಫ್ 2

ಕೆಜಿಎಫ್ 2 ಬಹುತೇಕ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದರ ನಂತರ ಸಂಕಲನ, ಹಿನ್ನೆಲೆ ಸಂಗೀತ, ಪ್ರಚಾರಗಳನ್ನು ಮುಗಿಸಿಕೊಂಡು ಕನ್ನಡ, ತಮಿಳು, ಹಿಂದಿ, ಮಲೆಯಾಳಂ, ತೆಲುಗು ಭಾಷೆಗಳಲ್ಲಿ ಅಕ್ಟೋಬರ್ 23 ಕ್ಕೆ ತೆರೆಗೆ ಬರಲಿದೆ.

ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್

ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್

ಇನ್ನು ಪ್ರಭಾಸ್ ಸಹ ಎರಡು ಚಿತ್ರಗಳಲ್ಲಿ ಪ್ರಸ್ತುತ ಬ್ಯುಸಿಯಾಗಿದ್ದಾರೆ. ಎರಡೂ ಚಿತ್ರಗಳಿಗೆ ಇನ್ನೂ ಹೆಸರಿಟ್ಟಿಲ್ಲ ಪ್ರಭಾಸ್ 20, ಪ್ರಭಾಸ್ 21 ಎಂದು ಈ ಚಿತ್ರಗಳನ್ನು ಕರೆಯಾಗುತ್ತಿದೆ. ಪ್ರಭಾಸ್ ಪ್ರಸ್ತುತ ವಿದೇಶದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

More from Filmibeat

English summary
Prabhas fans happy about KGF 2 movie release date. Movie is releasing on October 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X