For Quick Alerts
  ALLOW NOTIFICATIONS  
  For Daily Alerts

  ಯಶ್ ಫ್ಯಾನ್ಸ್ ದಾಖಲೆ ಮೇಲೆ ಕಣ್ಣಿಟ್ಟ ಪ್ರಭಾಸ್ ಫ್ಯಾನ್ಸ್: ಗಿನ್ನಿಸ್ ದಾಖಲೆಗೆ ಭರ್ಜರಿ ಪ್ಲ್ಯಾನ್!

  |

  ಸ್ಟಾರ್ ನಟರು ಅಷ್ಟೇ ಅಲ್ಲ, ಅವರ ಅಭಿಮಾನಿಗಳು ಕೂಡ ಕೆಲವೊಮ್ಮೆ ದಾಖಲೆ ಬರಿತ್ತಾರೆ. ಇದೀಗ ಬಾಹುಬಲಿ ಪ್ರಭಾಸ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ತಮಿಳು ನಟ ಸೂರ್ಯ ಫ್ಯಾನ್ಸ್ ದಾಖಲೆ ಅಳಿಸಿ ಹೊಸ ದಾಖಲೆ ಬರೆಯಲು ಚಿಂತನೆ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

  ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಪ್ರಭಾಸ್ ಸಂಚಲನ ಸೃಷ್ಟಿಸಿದ್ದಾರೆ. ಬಹುಕೋಟಿದ ಸಿನಿಮಾಗಳಲ್ಲಿ ಯಂಗ್ ರೆಬೆಲ್ ಸ್ಟಾರ್ ನಟಿಸ್ತಿದ್ದು, ಉತ್ತರ ಭಾರತದ ಪ್ರೇಕ್ಷಕರು ಕೂಡ ಪ್ರಭಾಸ್ ಸಿನಿಮಾಗಳಿಗೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನು ದಸರಾ ಹಬ್ಬದ ಸಂಭ್ರಮದಲ್ಲಿ 'ಆದಿಪುರುಷ್' ಸಿನಿಮಾ ಟೀಸರ್ ರಿಲೀಸ್ ನಡೆಯಲಿದೆ. ಓಂ ರಾವುತ್ ನಿರ್ದೇಶನದ ಈ ಪೌರಾಣಿಕ ಕಥಾಹಂದರದ ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?ಸಿದ್ಧಗೊಳ್ಳುತ್ತಿದೆ ಯಶ್ ದಾಖಲೆಯ ಕಟೌಟ್: ರಾಕಿ ಭಾಯ್ ಹುಟ್ಟುಹಬ್ಬದ ತಯಾರಿ ಹೇಗಿದೆ ಗೊತ್ತಾ?

  ಅಕ್ಟೋಬರ್ 23ಕ್ಕೆ ಯಂಗ್ ರೆಬೆಲ್ ಸ್ಟಾರ್ ಹುಟ್ಟುಹಬ್ಬ. ಕಳೆದೆರಡು ವರ್ಷ ಕೊರೊನಾ ಹಾವಳಿಯಿಂದ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಫ್ಯಾನ್ಸ್ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ದಾಖಲೆಯ ಮಟ್ಟದಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಪ್ಲ್ಯಾನ್ ಮಾಡ್ತಿದ್ದಾರೆ.

  ಪ್ರಭಾಸ್ ಬರ್ತ್‌ಡೇಗೆ 225 ಅಡಿ ಕಟೌಟ್?

  ಪ್ರಭಾಸ್ ಬರ್ತ್‌ಡೇಗೆ 225 ಅಡಿ ಕಟೌಟ್?

  ಹೈದರಾಬಾದ್ ಪ್ರಭಾಸ್ ಫ್ಯಾನ್ಸ್ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ ಬೃಹತ್ ಕಟೌಟ್ ನಿಲ್ಲಿಸಿ ಗಿನ್ನಿಸ್ ದಾಖಲೆ ಸೃಷ್ಟಿಸುವುದು ಅವರ ಲೆಕ್ಕಾಚಾರ. ಇದಕ್ಕಾಗಿ ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ನಿರ್ಧರಿಸಿದ್ದಾರಂತೆ. 'ಆದಿಪುರುಷ್' ಚಿತ್ರದ ಭಾರೀ ಗಾತ್ರದ ಕಟೌಟ್‌ ಹಾಕಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದಕ್ಕೆ ಅನುಮತಿ ಸಿಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

  ನವರಾತ್ರಿಗೆ ಶ್ರೀರಾಮನ ಅವತಾರವತ್ತಿರೋ ಪ್ರಭಾಸ್ 'ಆದಿಪುರುಷ್' ಟೀಸರ್: ಫೈನಲ್ ಆಯ್ತು ಡೇಟ್!ನವರಾತ್ರಿಗೆ ಶ್ರೀರಾಮನ ಅವತಾರವತ್ತಿರೋ ಪ್ರಭಾಸ್ 'ಆದಿಪುರುಷ್' ಟೀಸರ್: ಫೈನಲ್ ಆಯ್ತು ಡೇಟ್!

  220 ಅಡಿ ಕಟೌಟ್ ಹಾಕಿದ್ದ ಯಶ್ ಫ್ಯಾನ್ಸ್

  220 ಅಡಿ ಕಟೌಟ್ ಹಾಕಿದ್ದ ಯಶ್ ಫ್ಯಾನ್ಸ್

  ಎರಡೂವರೆ ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಬರೋಬ್ಬರಿ 220 ಅಡಿ ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದರು. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಆ ವರ್ಷ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಣೆಯಲ್ಲಿ ನಟ ಯಶ್ ಕೂಡ ಭಾಗಿ ಆಗಿದ್ದರು. 220 ಅಡಿ ಕಟೌಟ್ ಜೊತೆಗೆ 5 ಸಾವಿರ ಕೆಜಿ ಕೇಕ್ ಕತ್ತರಿಸಿ ಸದ್ದು ಮಾಡಿದ್ದರು. 'KGF'- 2 ಚಿತ್ರದಲ್ಲಿ ರಾಕಿಭಾಯ್ ಸುತ್ತಿಗೆ ಹಿಡಿದು ನಿಂತಿದ್ದ ಪೋಸ್ಟರ್‌ನ ಕಟೌಟ್ ಮಾಡಿ ನಿಲ್ಲಿಸಲಾಗಿತ್ತು. ಅದಕ್ಕೂ ಮುಂಚೆ ತಮಿಳು ನಟ ಸೂರ್ಯ ಫ್ಯಾನ್ಸ್‌ ಹೆಸರಿನಲ್ಲಿ ಅತಿ ದೊಡ್ಡ ಕಟೌಟ್ ದಾಖಲೆ ಇತ್ತು.

  215 ಅಡಿ ಕಟೌಟ್ ನಿಲ್ಲಿಸಿದ್ದ ಸೂರ್ಯ ಫ್ಯಾನ್ಸ್

  215 ಅಡಿ ಕಟೌಟ್ ನಿಲ್ಲಿಸಿದ್ದ ಸೂರ್ಯ ಫ್ಯಾನ್ಸ್

  3 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಟ ಸೂರ್ಯ ಫ್ಯಾನ್ಸ್ 215 ಅಡಿಗಳ ಕಟೌಟ್‌ ನಿಲ್ಲಿಸಿದ್ದರು. NGK ಚಿತ್ರದಲ್ಲಿ ಪಂಚೆ ಕಟ್ಟಿ ನಿಂತ ಪೋಸ್ಟರ್‌ನಲ್ಲಿ ಕಟೌಟ್ ಮಾಡಿ ನಿಲ್ಲಿಸಿ ಸಂಭ್ರಮಿಸಿದ್ದರು. ಈ ದಾಖಲೆಯನ್ನು ಯಶ್ ಫ್ಯಾನ್ಸ್ ಅಳಿಸಿ ಹಾಕಿದ್ದರು. ಇದೀಗ ಯಶ್ ಫ್ಯಾನ್ಸ್ ದಾಖಲೆ ಮೇಲೆ ಪ್ರಭಾಸ್ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ.

  ಅಕ್ಟೋಬರ್ 2ಕ್ಕೆ 'ಆದಿಪುರುಷ್' ಟೀಸರ್

  ಅಕ್ಟೋಬರ್ 2ಕ್ಕೆ 'ಆದಿಪುರುಷ್' ಟೀಸರ್

  ಯಶ್ ಫ್ಯಾನ್ಸ್ ಹಾಕಿದ್ದ 220 ಅಡಿ ಕಟೌಟ್‌ ಮೀರಿಸಿ ಕಟೌಟ್ ನಿಲ್ಲಿಸಿದರೆ ಮಾತ್ರ ಗಿನ್ನಿಸ್ ದಾಖಲೆಗೆ ಏರಲು ಸಾಧ್ಯ. ಇಂತಾದೊಂದು ಸಾಹಸ ಮಾಡಿದರೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಲಿದೆ. ಇನ್ನು ಅಯೋಧ್ಯಯಲ್ಲಿ 'ಆದಿಪುರುಷ್' ಸಿನಿಮಾ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುಲು ಚಿತ್ರತಂಡ ಮುಂದಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

  English summary
  Hyderabad Prabhas fans planning 250 feet Cutout for Prabhas as Adipurush. Know more.
  Wednesday, September 28, 2022, 23:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X