ಪ್ರಭಾಸ್ ಸಿನಿಮಾ ವಿಚಾರದಲ್ಲಿ ಮೈತ್ರಿ ಮೂವಿ ಮೇಕರ್ಸ್ ಎಚ್ಚರಿಕೆ ಕೊಟ್ಟಿದ್ದೇಕೆ?

ಪ್ರಭಾಸ್ ನಟನೆಯ 'ಫೌಜಿ' ಸಿನಿಮಾ ಮೇಕಿಂಗ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಈ ಕುರಿತು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದೆ. ಹನು ರಾಘವಪುಡಿ ನಿರ್ದೇಶನದ ಈ ಐತಿಹಾಸಿಕ ಕಥಹಂದರ ಸಿನಿಮಾ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಿನ್ನೆಯಷ್ಟೆ (ಆಗಸ್ಟ್ 19) ಈ ಚಿತ್ರದ ಚಿತ್ರೀಕರಣದ ಸೆಟ್‌ನಿಂದ ಪ್ರಭಾಸ್ ಅವರ ಫೋಟೊಗಳು ಹೊರ ಬಂದಿತ್ತು.

ಇನ್ನು ವೈರಲ್ ಫೋಟೋದಲ್ಲಿ, ಪ್ರಭಾಸ್ ವಯಸ್ಸಾದ ಮಹಿಳೆ ಜೊತೆ ಕೂತು ಕಾಫಿ ಕುಡಿಯುತ್ತಿರುವುದು ಕಂಡುಬಂದಿದೆ. ಟಿ-ಶರ್ಟ್ ಧರಿಸಿದ್ದು, ಕ್ಲೀನ್ ಶೇವ್ ಮಾಡಿಸಿಕೊಂಡಂತೆ ಪ್ರಭಾಸ್ ಕಂಡಿದ್ದಾರೆ. ಈ ಲುಕ್ ವೈರಲ್ ಆಗಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಫೋಟೊಗಳು ಲೀಕ್ ಆಗಿರುವುದು ನಿರ್ಮಾಣ ಸಂಸ್ಥೆಗೆ ಬೇಸರ ತಂದಿದೆ. ಹಾಗಾಗಿ ಮೈತ್ರಿ ಮೂವೀ ಮೇಕರ್ಸ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕಠಿಣ ಎಚ್ಚರಿಕೆ ನೀಡಿದೆ. ಹೀಗೆ ಸೆಟ್‌ನಿಂದ ಫೋಟೊಗಳನ್ನು ಕ್ಲಿಕ್ಕಿಸಿ ಪೋಸ್ಟ್ ಮಾಡುವವರನ್ನು, ಅದನ್ನು ವೈರಲ್ ಮಾಡುವವರನ್ನು ಎಚ್ಚರಿಸಿದೆ.

Prabhas Fauji Photos Leak Online Makers Warn of Strict Action

"ನಿಮ್ಮಲ್ಲಿ ಹಲವರು ಪ್ರಭಾಸ್ ಹಾಗೂ ಹನು ಜೋಡಿಯ ಸಿನಿಮಾ ಚಿತ್ರದ ಸೆಟ್‌ ಫೋಟೊಗಳನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಿಮಗೆ ಉತ್ತಮ ಅನುಭವವನ್ನು ನೀಡಲು ನಾವು ಶ್ರಮಿಸುತ್ತಿದ್ದೇವೆ. ಈ ರೀತಿ ಫೋಟೊಗಳನ್ನು ಲೀಕ್ ಮಾಡುವುದು ತಂಡದ ನೈತಿಕತೆಯನ್ನು ಕುಗ್ಗಿಸುತ್ತವೆ. ಅಂತಹ ಚಿತ್ರಗಳನ್ನು ಹಂಚಿಕೊಳ್ಳುವ ಯಾವುದೇ ಖಾತೆಯನ್ನು ವರದಿ ಮಾಡಲಾಗುತ್ತದೆ. ತೆಗೆದು ಹಾಕಲಾಗುತ್ತದೆ. ಅಷ್ಟೇ ಅದನ್ನು ಸೈಬರ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಎಚ್ಚರ" ಎಂದು ಪೋಸ್ಟ್ ಮಾಡಿದ್ದಾರೆ.

ಹೀಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಎಚ್ಚರಿಕೆ ನೀಡುತ್ತಿದ್ದಂತೆ ಕೆಲ ವೆಬ್ ಸೈಟ್ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿಂದ ಫೋಟೋವನ್ನು ಡಿಲೀಟ್ ಮಾಡಲಾಗಿದೆ. ಸದ್ಯ ಪ್ರಭಾಸ್ 'ರಾಜಾ ಸಾಬ್', 'ಸಲಾರ್ -2', 'ಸ್ಪಿರಿಟ್' ಮತ್ತು 'ಕಲ್ಕಿ 2898 AD- 2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳ ಬಗ್ಗೆ ಮಾತುಕತೆ ನಡೀತಿದೆ.

ಈ ಹಿಂದೆ ಹನು ರಾಘವಪುಡಿ 'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟಿದ್ದರು. ಅದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇನ್ನು ಪ್ರಭಾಸ್ ನಟಿಸುತ್ತಿರುವ ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. 'ಫೌಜಿ' ಎಂಬ ಟೈಟಲ್ ಪರಿಶೀಲನೆಯಲ್ಲಿದೆ ಚಿತ್ರತಂಡ. ಅದೇ ಫೈನಲ್ ಆಗುತ್ತಾ? ಅಥವಾ ಬೇರೆ ಟೈಟಲ್‌ನಲ್ಲಿ ಸಿನಿಮಾ ತೆರೆಗೆ ಬರುತ್ತಾ ಕಾದು ನೋಡಬೇಕಿದೆ.

'ಫೌಜಿ' ಚಿತ್ರದಲ್ಲಿ ಪ್ರಭಾಸ್ ಜೊತೆ ಇಮಾನ್ವಿ ಎಸ್ಮೇಲ್, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಜಯಪ್ರದಾ ಸೇರಿ ಹಲವರು ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
‘Fauji’ Set Leak: Mythri Movie Makers Caution Fans Sharing Prabhas’ Pics
Read more about: prabhas tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X