ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಬಾಹುಬಲಿ ಪ್ರಭಾಸ್
ನಟ ಪ್ರಭಾಸ್ ಸಿನಿಮಾದಷ್ಟೆ ಅವರ ಮದುವೆ ಚರ್ಚೆಯೂ ಜೋರಾಗಿಯೇ ನಡೆಯುತ್ತಿದೆ. ಕೆಲ ತಿಂಗಳಿಗೊಮ್ಮೆ ಹೊಸ ನಟಿಯೊಂದಿಗೆ ಪ್ರಭಾಸ್ ಹೆಸರು ಕೇಳಿಬರುತ್ತದೆ.
Recommended Video
ಮೊದಲಿಗೆ ಅನುಷ್ಕಾ ಶೆಟ್ಟಿ ಜೊತೆಗೆ ಪ್ರಭಾಸ್ ಹೆಸರು ಜೋರಾಗಿಯೇ ಕೇಳಿಬಂದಿತ್ತು. ಆದರೆ ನಂತರ ಅನುಷ್ಕಾ ಶೆಟ್ಟಿ ಅವರೇ ಊಹಾಪೋಹಗಳಿಗೆ ತೆರೆ ಎಳೆದು 'ಪ್ರಭಾಸ್ ನನ್ನ ಒಳ್ಳೆಯ ಗೆಳೆಯ' ಎಂದು ವಿವಾದಕ್ಕೆ ಅಂತ್ಯವಾದರು.
ನಂತರ ಚಿರಂಜೀವಿ ಕುಟುಂಬದ ನಿಹಾರಿಕಾ ಅವರೊಂದಿಗೆ ಪ್ರಭಾಸ್ ವಿವಾಹ ನಡೆಯಲಿದೆ ಎನ್ನಲಾಗಿತ್ತು. ಆದರೆ ಇದನ್ನೂ ಸಹ ಯುವ ನಟಿ ನಿಹಾರಿಕಾ ತಳ್ಳಿ ಹಾಕಿದರು.
ಇದೀಗ ಸ್ವತಃ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಆದರೆ ಅಲ್ಲೂ ಅವರು ಕೆಲವು ಕುತೂಹಲಗಳನ್ನು ಅಭಿಮಾನಿಗಳಿಗೆ ಉಳಿಸಿದ್ದಾರೆ.

ಮದುವೆ ಬಗ್ಗೆ ಮಾತನಾಡಿದ ಪ್ರಭಾಸ್
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಪ್ರಭಾಸ್, 'ನಾನು ಮದುವೆಗೆ ವಿರೋಧಿಯಲ್ಲ, ಮದುವೆ ಎಂಬ ನಂಟಿನಲ್ಲಿ ನನಗೆ ನಂಬಿಕೆಯಿದೆ, ಖಂಡಿತವಾಗಿಯೂ ನಾನು ಮದುವೆ ಆಗುತ್ತೇನೆ' ಎಂದು ಹೇಳಿದ್ದಾರೆ.

ಮದುವೆ ಬಗ್ಗೆ ಮಾಧ್ಯಮಗಳಿಗೆ ಹೆಚ್ಚು ಆಸಕ್ತಿ
ತಮ್ಮ ಮದುವೆ ಬಗ್ಗೆ ಎದುರಾಗುವ ಪ್ರಶ್ನೆಗಳ ಬಗ್ಗೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿರುವ ಪ್ರಭಾಸ್, 'ನನ್ನ ಮದುವೆ ಬಗ್ಗೆ ನನ್ನ ಕುಟುಂಬದವರಿಗಿಂತಲೂ ಮಾಧ್ಯಮಗಳಿಗೆ ಆತುರ ಇದ್ದಂತಿದೆ' ಎಂದಿದ್ದಾರೆ.

ಪ್ರಭಾಸ್-ಅನುಷ್ಕಾ ಶೆಟ್ಟಿ ಬಗ್ಗೆ ಗಾಳಿಸುದ್ದಿ
ಈ ಮುಂಚೆ ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿ ಜೊತೆಗೆ ಜೋರಾಗಿಯೇ ಕೇಳಿಬಂದಿತ್ತು, ಈ ಬಾಹುಬಲಿ ಜೋಡಿ ನಿಜ ಜೀವನದಲ್ಲೂ ಜೋಡಿ ಆಗಲಿದ್ದಾರೆ ಎನ್ನಲಾಗಿತ್ತು, ಅವರೂ ಸಹ ಸುದ್ದಿಯನ್ನು ಅಲ್ಲಗಳೆದಿರಲಿಲ್ಲ, ಆದರೆ ಕೊನೆಗೆ ಅನುಷ್ಕಾ ಶೆಟ್ಟಿ ಸುದ್ದಿಯನ್ನು ತಳ್ಳಿ ಹಾಕಿದರು.

ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗಿ
ಪ್ರಭಾಸ್ ಪ್ರಸ್ತುತ ಎರಡು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ 'ಓ ಡಿಯರ್' ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಕೊರೊನಾ ಕಾರಣದಿಂದಾಗಿ ಸಿನಿಮಾ ಮುಂದೂಡಲ್ಪಟ್ಟಿದೆ. ಮತ್ತೊಂದು ಹೆಸರಿಡದ ಸಿನಿಮಾದಲ್ಲೂ ಪ್ರಭಾಸ್ ನಟಿಸಲಿದ್ದಾರೆ.


Click it and Unblock the Notifications











