For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಆದಿಪುರುಷ್' ಸಿನಿಮಾದ ಪೋಸ್ಟರ್ ವೈರಲ್

  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಸೆಟ್ಟೇರುವ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದೆ. ಪಾತ್ರಗಳ ಆಯ್ಕೆ, ಬಜೆಟ್ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಆದಿಪುರುಷ್ ಸಿನಿಮಾ ಭಾರತೀಯ ಸಿನಿಮಾರಂಗದ ಗಮನ ಸೆಳೆಯುತ್ತಿದೆ. ಚಿತ್ರದಿಂದ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದೆ.

  ದಿನದಿಂದ ದಿನಕ್ಕೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುತ್ತಲೇ ಇರುವ ಆದಿಪುರುಷ್ ಸಿನಿಮಾದ ಪ್ರಭಾಸ್ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದಿಪುರುಷ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಯ್ತಾ? ಅಂತ ಅಚ್ಚರಿ ಪಡಬೇಡಿ. ಇದು ಅಭಿಮಾನಿಗಳು ನಿರ್ಮಾಣ ಮಾಡಿರುವ ಪೋಸ್ಟರ್.

  ರಾಧೆ-ಶ್ಯಾಮ್ ಸಿನಿಮಾದ ಹೊಸ ಅಪ್‌ಡೇಟ್ ಕೇಳಿ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ!

  ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ರಾಮನ ಅವತಾರದ ಪ್ರಭಾಸ್ ಲುಕ್ ಅನ್ನು ಡಿಸೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟರ್ ನೋಡಿ ಸ್ವತಃ ನಿರ್ದೇಶಕ ಓಂ ರಾವತ್ ಅವರೇ ಫಿದಾ ಆಗಿದ್ದಾರೆ.

  ಸಾಮಾಜಿಕ ಜಾಲತಾಣಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಈ ಲುಕ್ ಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada

  ಅಂದಹಾಗೆ ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನಾಗಿ ಮಿಂಚುತ್ತಿದ್ದಾರೆ. ಪ್ರಭಾಸ್ ರಾಧೆ ಶ್ಯಾಮ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಯಾವ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Telugu Actor Prabhas First Look Fan made poster of Adipurush goes Viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X