For Quick Alerts
  ALLOW NOTIFICATIONS  
  For Daily Alerts

  ಜಿಮ್ ಟ್ರೈನರ್ ಗೆ ದುಬಾರಿ ಬೆಲೆಯ ಕಾರು ಉಡುಗೊರೆ ನೀಡಿದ ನಟ ಪ್ರಭಾಸ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ಪ್ರಭಾಸ್ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಇತ್ತೀಚಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡುವ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸುವ ಪ್ರಭಾಸ್, ಇದೀಗ ಉಡುಗೊರೆ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ.

  ಹೌದು, ನಟ ಪ್ರಭಾಸ್ ತನ್ನ ಜಿಮ್ ಟ್ರೈನರ್ ಲಕ್ಷಣ್ ರೆಡ್ಡಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ತನ್ನ ಪ್ರೀತಿಯ ಟ್ರೈನರ್ ಗೆ ಐಷಾರಾಮಿ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರಿನ ಜೊತೆ ಜಿಮ್ ಟ್ರೈನರ್ ಮತ್ತು ಪ್ರಭಾಸ್ ಇಬ್ಬರು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಪ್ರಭಾಸ್ ಚಿತ್ರದಲ್ಲಿ ನಟಿಸುತ್ತಿರುವ ದೀಪಿಕಾ ಅಡ್ವಾನ್ಸ್ ತೆಗೆದುಕೊಳ್ಳಲು ನಿರಾಕರಿಸಿದ್ದೇಕೆ?

  ತೆರೆಯ ಮೇಲೆ ರಾರಾಜಿಸುವ ನಾಯಕರ ಫಿಟ್ ನೆಟ್ ಹಿಂದೆ ಟ್ರೈನರ್ ಗಳ ಶ್ರಮ ಕೂಡ ಇರುತ್ತೆ. ಜಿಮ್ ನಲ್ಲಿ ಕಸರತ್ತು ಮಾಡುವ ಜೊತೆಗೆ ಏನು ತಿನ್ನಬೇಕು, ಎಷ್ಟು ತಿನ್ನಬೇಕು ಎಂದು ಕಟ್ಟುನಿಟ್ಟಾಗಿ ನಾಯಕರಿಗೆ ಸಲಹೆ ನೀಡುತ್ತಿರುತ್ತಾರೆ.

  ನಾಯಕರ ಫಿಟ್ ನೆಸ್ ಬಗ್ಗೆ ಸದಾ ಕಾಳಜಿ ತೋರುವ ಜಿಮ್ ಟ್ರೈನರ್ ಗೆ ಡಾರ್ಲಿಂಗ್ ಪ್ರಾಭಾಸ್ ತೋರಿಸುವ ಪ್ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಸಹಜವಾಗಿ ನಾಯಕರು ಸಿನಿಮಾದ ನಿರ್ದೇಶಕ, ಸಿನಿಮಾತಂಡಕ್ಕೆ ಉಡುಗೊರೆ ನೀಡಿರುವುದನ್ನು ಹೆಚ್ಚಾಗಿ ನೋಡಿರುತ್ತೀರಿ. ಆದರೆ ಪ್ರಭಾಸ್ ಜಿಮ್ ತರಬೇತುದಾರರಿಗೆ 73 ಲಕ್ಷ ರೂಪಾಯಿಯ ಬೂದು ಬಣ್ಣದ ರೇಂಜ್ ರೋವರ್ ಅನ್ನು ಗಿಫ್ಟ್ ಆಗಿ ನೀಡಿ ಅಚ್ಚರಿ ಪಡುವಂತೆ ಮಾಡಿದ್ದಾರೆ.

  25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada

  ಲಕ್ಷಣ್ ರೆಡ್ಡಿ, ನಟ ಪ್ರಭಾಸ್ ಗೆ ಅನೇಕ ವರ್ಷಗಳಿಂದ ಟ್ರೈನರ್ ಆಗಿ ಜೊತೆಯಲ್ಲಿದ್ದಾರೆ. ಟ್ರೈನರ್ ಜೊತೆಗೆ ಉತ್ತಮ ಸ್ನೇಹಿತನಾಗಿರುವ ಲಕ್ಷ್ಮಣ್ ರೆಡ್ಡಿಗೆ ಉಡುಗೊರೆ ನೀಡಿ ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕಾರಿನ ಜೊತೆ ಟ್ರೈನರ್ ಇಡೀ ಕುಟುಂಬ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ.

  English summary
  Actor Prabhas gifted Range Rover car to his Gym trainer. Actor Prabhas gifted car photo viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X